'ಕುರುಕ್ಷೇತ್ರ' ಚಿತ್ರಕ್ಕೆ ನಿರ್ದೇಶಕ ನಾಗಣ್ಣನೇ ಪೈಪೋಟಿ
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ಕುರುಕ್ಷೇತ್ರ ರಿಲೀಸ್ ಗೊಂದಲದಿಂದ ಸಾಕಷ್ಟು ಸಣ್ಣ ಸಣ್ಣ ಸಿನಿಮಾಗಳು ಸಂಕಷ್ಟದಲ್ಲಿ ಸಿಲುಕಿದಂತಾಗಿದೆ. ಕುರುಕ್ಷೇತ್ರ ಆಗಸ್ಟ್ 2ಕ್ಕೆ ತೆರೆಗೆ ಬರುತ್ತೆ ಎಂದು ಅನೌನ್ಸ್ ಮಾಡುತ್ತಿದ್ದಂತೆ ರಿಲೀಸ್ ಗಾಗಾಗಿಯೆ ಕಾದುಕುಳಿತಿದ್ದ ಸಾಕಷ್ಟು ಸಿನಿಮಾಗಳು ಆಗಸ್ಟ್ 9ಕ್ಕೆ ತೆರೆಗೆ ಬರಲು ರೆಡಿಯಾದವು.
ಮತ್ತೊಂದೆಡೆ ತೆಲುಗಿನ ಸಾಹೋ ಸಿನಿಮಾ ಕೂಡ ಆಗಸ್ಟ್ 15ರಿಂದ ಆಗಸ್ಟ್ 30ಕ್ಕೆ ಪೋಸ್ಟ್ ಪೋನ್ ಆದ ಕಾರಣ ಆ ಗ್ಯಾಪಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್ ಗೆ ಪ್ಲಾನ್ ಮಾಡಿಕೊಂಡವು. ಒಂದಿಷ್ಟು ಸಿನಿಮಾಗಳು ಆಗಸ್ಟ್ 9ಕ್ಕೆ ರಿಲೀಸ್ ಆಗುತ್ತಿದ್ರೆ, ಇನ್ನು ಒಂದಿಷ್ಟು ಸಿನಿಮಾಗಳು 15ಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ.
ಆದ್ರೆ ಯಾವಾಗ ಕುರುಕ್ಷೇತ್ರ ಆಗಸ್ಟ್ 2 ರಿಂದ 9ಕ್ಕೆ ಪೋಸ್ಟ್ ಪೋನ್ ಆಯಿತೋ, ಆಗ ಆಗಸ್ಟ್ 9ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾಗಳ ಲೆಕ್ಕಾಚಾರ ತಲೆಕೆಳಗಾಗಿದೆ. 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ', 'ಕೆಂಪೇಗೌಡ-2' ಮತ್ತು ಗಣೇಶ್ ಅಭಿನಯದ 'ಗಿಮಿಕ್' ಸಿನಿಮಾಗಳು ಆಗಸ್ಟ್ 9ಕ್ಕೆ ಬಿಡುಗೆಮಾಡಲು ಪ್ಲಾನ್ ಮಾಡಲಾಗಿತ್ತು.

ದರ್ಶನ್ v/s ಗಣೇಶ್
ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ದಿವನೆ, ಗಣೇಶ್ ಅಭಿನಯದ ಗಿಮಿಕ್ ಸಿನಿಮಾ ಆಗಸ್ಟ್ 9ಕ್ಕೆ ತೆರೆಗೆ ಬರುತ್ತಿದೆ. 'ಗಿಮಿಕ್' ಹಾರರ್ ಸಬ್ಜೆಕ್ಟ್ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾ. ಮೊದಲ ಬಾರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಈ ರೀತಿಯ ವಿಭಿನ್ನ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ನಾಗಣ್ಣ ಸಾರಥ್ಯದಲ್ಲಿ ಮೂಡಿ ಬಂದ ಸಿನಿಮಾ ಇದಾಗಿದ್ದು ಚಿತ್ರಕ್ಕೆ ದೀಪಕ್ ಬಂಡವಾಳ ಹೂಡಿದ್ದಾರೆ.

ನಾಗಣ್ಣ ನಿರ್ದೇಶನದ ಎರಡು ಸಿನಿಮಾ ರಿಲೀಸ್
ವಿಶೇಷ ಅಂದ್ರೆ ಕುರುಕ್ಷೇತ್ರ ಮತ್ತು ಗಿಮಿಕ್ ಎರಡು ಸಿನಿಮಾಗಳು ನಿರ್ದೇಶಕ ನಾಗಣ್ಣ ಸಾರಥ್ಯದಲ್ಲಿ ಮೂಡಿ ಬಂದ ಸಿನಿಮಾ. ಎರಡು ಸಿನಿಮಾಗಳು ಒಂದೇ ದಿನ ತೆರೆಗೆ ಬರುತ್ತಿರವುದು ವಿಶೇಷ. ಒಂದು ಪೌರಾಣಿಕ ಸಿನಿಮಾವಾದ್ರೆ ಇನ್ನೊಂದು ದೆವ್ವ, ಭೂತದ ಬಗ್ಗೆ ಇರುವ ಸಿನಿಮಾ. ಗಣೇಶ್ ಮೊದಲ ಬಾರಿಗೆ ಈ ರೀತಿಯ ಹಾರರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು ಆಗಸ್ಟ್ 9ಕ್ಕೆ ಚಿತ್ರಾಭಿಮಾನಿಗಳನ್ನು ಹೆದರಿಸಲು ಬರ್ತಿದ್ದಾರೆ.

ಪ್ರಮೋಷನ್ ಇಲ್ಲದ ಗಿಮಿಕ್
ಗಣೇಶ್ ಅಭಿನಯದ ಗಿಮಿಕ್ ಸಿನಿಮಾ ರಿಲೀಸ್ ಆಗುತ್ತಿದೆ ಎನ್ನುವ ಬಗ್ಗೆ ಚಿತ್ರಾಭಿಮಾನಿಗಳಿಗೆ ಮಾಹಿತಿಯೆ ಇಲ್ಲವಾಗಿದೆ. ಗಿಮಿಕ್ ಚಿತ್ರದ ಬಗ್ಗೆ ಹೆಚ್ಚು ಪ್ರಮೋಷನ್ ಆಗದಿರುವುದು ಚಿತ್ರ ರಿಲೀಸ್ ಆಗುತ್ತಿದೆಯೆ ಎನ್ನುವ ಅನುಮಾನ ಚಿತ್ರಾಭಿಮಾನಿಗಳಲ್ಲಿ ಇತ್ತು. ಯಾಕಂದ್ರೆ ಆಗಸ್ಟ್ 9ಕ್ಕೆ ಗಿಮಿಕ್ ತೆರೆಗೆ ಬರುತ್ತೆ ಎಂದು ಎಲ್ಲೂ ಸುದ್ದಿ ಆಗಲೆ ಇಲ್ಲ. ಚಿತ್ರತಂಡ ಪ್ರಮೋಷನ್ ಬಗ್ಗೆ ಹಿಂದೇಟು ಹಾಕುತ್ತಿದೆ, 'ಕುರುಕ್ಷೇತ್ರ' ಚಿತ್ರದಂತಹ ದೊಡ್ಡ ಸಿನಿಮಾದ ಮುಂದೆ ಪ್ರಮೋಷನ್ ಮಾಡಿದ್ರು ಪ್ರಯೋಜನವಿಲ್ಲ ಎನ್ನುವ ಲೆಕ್ಕಾಚಾರನೋ ಅಥವಾ ಬೇರೆ ಇನ್ನೇನಾದ್ರು ಕಾರಣ ಇದೆಯೊ ಚಿತ್ರತಂಡವೇ ಹೇಳಬೇಕಿದೆ.

'ಕುರುಕ್ಷೇತ್ರ' ನಿರ್ಧಾರದ ಬಗ್ಗೆ ಕೋಮಲ್ ಬೇಸರ
ಕುರುಕ್ಷೇತ್ರದ ಈ ನಿರ್ಧಾರದ ಬಗ್ಗೆ ಈಗಾಗಲೆ ಕೋಮಲ್ ಬೇಸರ ವ್ಯಕ್ತಪಡಿಸಿದ್ದಾರೆ. ಯಾಕಂದ್ರೆ ಮೂರು ವರ್ಷದ ನಂತರ ಕೋಮಲ್ ಅಭಿನಯದ ಸಿನಿಮಾ ತೆರೆಗೆ ಬರುತ್ತಿದೆ. ಚಿತ್ರಕ್ಕಾಗಿ ಸಾಕಷ್ಟು ಶ್ರಮವಹಿಸಿರುವ ಕೋಮಲ್ ಸಿನಿಮಾ ಕುರುಕ್ಷೇತ್ರದ ಅಲೆಯಲ್ಲಿ ಕೊಚ್ಚಿಹೋಗಲಿದೆಯ ಎನ್ನುವ ಭಯ ಅವರನ್ನು ಕಾಡುತ್ತಿದೆ. ಆದ್ರು ಸಹ ಕನ್ನಡಾಭಿಮಾನಿಗಳು ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ಮೇರೆಗೆ ರಿಲೀಸ್ ಮಾಡುತ್ತಿದ್ದಾರೆ.


Click it and Unblock the Notifications











