For Quick Alerts
  ALLOW NOTIFICATIONS  
  For Daily Alerts

  ಇಂದು 'ಕರ್ವ' ಕಣ್ತುಂಬಿಕೊಳ್ಳಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್

  By Harshitha
  |

  ಒಂದೊಳ್ಳೆ ಸಿನಿಮಾ ಮಾಡಿದ್ರೆ, ಕನ್ನಡ ಸಿನಿ ಪ್ರಿಯರು ಕೈಬಿಡಲ್ಲ, ಸ್ಯಾಂಡಲ್ ವುಡ್ ಸ್ಟಾರ್ ಗಳು ಮುಖ ತಿರುಗಿಸುವುದಿಲ್ಲ ಎನ್ನುವುದಕ್ಕೆ ಹೊಚ್ಚ ಹೊಸ ಉದಾಹರಣೆ 'ಕರ್ವ' ಸಿನಿಮಾ.

  '6-5=2' ಸಿನಿಮಾ ಮಾಡಿ ಗಾಂಧಿನಗರದಲ್ಲಿ ಗೆಲುವಿನ ನಗೆ ಬೀರಿದ್ದ ಚಿತ್ರತಂಡ ಇದೀಗ 'ಕರ್ವ' ಚಿತ್ರದ ಮೂಲಕ ಯಶಸ್ಸಿನ ಪಯಣ ಮುಂದುವರಿಸಿದೆ. ['ಕರ್ವ' ನೋಡಿ 'ಉಘೇ' ಎಂದ ಸ್ಯಾಂಡಲ್ ವುಡ್ ಸ್ಟಾರ್ಸ್]

  ನಟ ತಿಲಕ್, ಆರ್.ಜೆ ರೋಹಿತ್, ವಿಜಯ್ ಚೆಂಡೂರ್ ಅಭಿನಯಿಸಿರುವ 'ಕರ್ವ' ಚಿತ್ರ ನೋಡಿದ ಪ್ರೇಕ್ಷಕರು ಹಾಗೂ ವಿಮರ್ಶಕರು ಭೇಷ್ ಅಂದಿದ್ದರು. ಹಾಗೇ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರೋರಿಂಗ್ ಸ್ಟಾರ್ ಶ್ರೀಮುರಳಿ, ರಾಕಿಂಗ್ ಸ್ಟಾರ್ ಯಶ್ ಕೂಡ 'ಕರ್ವ' ಕಣ್ತುಂಬಿಕೊಂಡು ಥಂಬ್ಸ್ ಅಪ್ ನೀಡಿದ್ದರು. ಈಗ ಗೋಲ್ಡನ್ ಸ್ಟಾರ್ ಗಣೇಶ್ ರವರ ಸರದಿ.

  ಇಂದು 'ಕರ್ವ' ಕಣ್ತುಂಬಿಕೊಳ್ಳಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್

  ಹೌದು, ಎಲ್ಲೆಡೆ ಸಖತ್ ಸುದ್ದಿಯಲ್ಲಿರುವ 'ಕರ್ವ' ಚಿತ್ರವನ್ನ ವೀಕ್ಷಿಸುವ ಆಸೆ ಗೋಲ್ಡನ್ ಸ್ಟಾರ್ ಗಣೇಶ್ ಗಿತ್ತು. ವಿಷಯ ತಿಳಿದ 'ಕರ್ವ' ಚಿತ್ರತಂಡ ಇಂದು ಮಧ್ಯಾಹ್ನ ಮೂರು ಗಂಟೆಗೆ ಗಣೇಶ್ ಗಾಗಿ ವಿಶೇಷ ಪ್ರದರ್ಶನ ಹಮ್ಮಿಕೊಂಡಿದೆ.[ಕರ್ವ' ವಿಮರ್ಶೆ: ರಾಜ ಬಂಗಲೆ ರಹಸ್ಯ ನೋಡಿ, ಭಯಪಡಿ!]

  ತೆರೆಮೇಲೆ ಪಟ ಪಟ ಅಂತ ಮಾತನಾಡಿ, ಎಲ್ಲರನ್ನ ನಕ್ಕು-ನಲಿಸುವ ಗಣಿ 'ಕರ್ವ' ನೋಡಿದ್ಮೇಲೆ, ಏನು ಹೇಳುತ್ತಾರೆ ಅಂತ ನಾವೇ ನಿಮಗೆ ಅಪ್ ಡೇಟ್ ಕೊಡ್ತೀವಿ.

  English summary
  Kannada Actor Golden Star Ganesh is all set to watch Suspense-thriller film 'Karva' today (June 7th) at 3 PM. 'Karva' makers have arranged special show for Ganesh. Navneeth directorial 'Karva' features Kannada Actor Devaraj, Tilak, Rohit in the prominent role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X