'ನನ್ನ ಸಿನಿಮಾ ತಂಟೆಗೆ ಬರಬೇಡಿ' ಪರಭಾಷಾ ಚಿತ್ರಗಳಿಗೆ ಗಣೇಶ್ ಎಚ್ಚರಿಕೆ.!

Recommended Video

ನನ್ನ ಸಿನಿಮಾ ತಂಟೆಗೆ ಬರಬೇಡಿ ಗಣೇಶ್ ಎಚ್ಚರಿಕೆ | FILMIBEAT KANNADA

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾ ರಿಲೀಸ್ ಗೆ ರೆಡಿಯಾಗಿದ. ಚಿತ್ರದ ಪ್ರಮೋಷನ್ ಕೆಲಸ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೆ ಟ್ರೈಲರ್ ಮತ್ತು ಹಾಡುಗಳ ಮೂಲಕ ಕನ್ನಡ ಚಿತ್ರಾಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ಗೋಲ್ಡನ್ ಸ್ಟಾರ್ ಗಣೇಶ್ ತುಂಬ ಇಷ್ಟಪಟ್ಟು ಕಷ್ಟಪಟ್ಟು ಪ್ರಿತೀಯಿಂದ ಮಾಡಿದ ಸಿನಿಮಾ ಗೀತಾ. ಚಿತ್ರದ ಟೈಟಲ್ ನಲ್ಲಿಯೇ ಒಂದು ಪವರ್ ಇದೆ. ಕರಾಟೆ ಕಿಂಗ್ ಶಂಕರ್ ನಾಗ್ ಅವರ ಸೂಪರ್ ಹಿಟ್ ಚಿತ್ರದ ಟೈಟಲ್ ಅನ್ನೆ ಮರು ಬಳಕೆ ಮಾಡಿಕೊಂಡಿದ್ದಾರೆ. ಗಣೇಶ್ ಈ ಸಿನಿಮಾದ ಮೇಲೆ ವಿಶೇಷವಾದ ಪ್ರೀತಿ ಇಟ್ಟುಕೊಂಡಿದ್ದಾರೆ.

ಕನ್ನಡ ಪರ ಚಳುವಳಿ, ಹೋರಾಟದ ಬಗ್ಗೆ ಇರುವ ಗೀತಾ ಗಣೇಶ್ ಕನಸಿನ ಸಿನಿಮಾ. ಆದ್ರೆ ಈ ಸಿನಿಮಾ ರಿಲೀಸ್ ಸಮಯದಲ್ಲೆ ಪರಭಾಷೆಯ ಬೇರೆ ಬೇರೆ ಸಿನಿಮಾಗಳು ತೆರೆಗೆ ಬರುತ್ತಿವೆ. ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿರುವ ಪರಭಾಷಾ ಚಿತ್ರಗಳ ವಿರುದ್ದ ಗಣೇಶ್ ಸಿಡಿದೆದ್ದಿದ್ದಾರೆ.

ನನ್ನ ಸಿನಿಮಾ ತಂಟೆಗೆ ಬರಬೇಡಿ

ನನ್ನ ಸಿನಿಮಾ ತಂಟೆಗೆ ಬರಬೇಡಿ

ಗೀತಾ ಕನ್ನಡದ ಪರ ಇರುವ ಸಿನಿಮಾ. ಇದು ಕನ್ನಡದ ಗೋಕಾಕ್ ಚಳುವಳಿಯ ಬ್ಯಾಕ್ ಡ್ರಾಪ್ ನಲ್ಲಿ ಮಾಡಿದ ಸಿನಿಮಾ. ಈ ಸಿನಿಮಾದಲ್ಲಿ ಕನ್ನಡಿಗನೆ ಯಜಮಾನ, ಕನ್ನಡಿಗನೆ ಸಾರ್ವಭೌಮ ಅಂತ ಹೇಳಿ ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಿಕೊಂಡ ಟ್ರೈಲರ್. ಪರಭಾಷೆ ಸಿನಿಮಾಗಳು ಏನು ಆಗುತ್ತೊ ಗೊತ್ತಿಲ್ಲ. ಆದ್ರೆ ನನ್ನ ಸಿನಿಮಾಗೆ ಕೈ ಹಾಕಬೇಡಿ" ಎಂದು ಪರಭಾಷಾ ಚಿತ್ರಗಳ ವಿರುದ್ಧ ಕಿಡಿಕಾರಿದ್ದಾರೆ.

ಪರಭಾಷಾ ಚಿತ್ರಗಳಿಗೆ ಗಣೇಶ್ ಎಚ್ಚರಿಕೆ

ಪರಭಾಷಾ ಚಿತ್ರಗಳಿಗೆ ಗಣೇಶ್ ಎಚ್ಚರಿಕೆ

"ಗೀತಾ ನನ್ನ ಮನಸಿನೊಳಗೆ ಇರುವ ಸಿನಿಮಾ. ಬಹಳ ಇಷ್ಟು ಮಾಡಿರುವ ಸಿನಿಮಾ. ಯಾರೆ ಆದರು ನಾನು ಕಠಿಣವಾದ ಕ್ರಮ ಕೈಗೊಳ್ಳುತ್ತೇನೆ. ಇದು ಪರಭಾಷೆ ಚಿತ್ರಗಳಿಗೆ ನನ್ನ ಎಚ್ಚರಿಕೆಯ ಮಾತು. ಇಂದು ಬೇರೆ ಬೇರೆ ಭಾಷೆಯ ಸಿನಿಮಾಗಳ ಜೊತೆ ತುಂಬ ಸ್ಪರ್ಧೆ ಇದೆ. ಆದರೆ ನಿಮ್ಮ ಪಾಡಿಗೆ ನೀವು ಇರಿ. ನಮ್ಮ ಸಿನಿಮಾ ನಾವು ಮಾಡಿಕೊಂಡು ಇರುತ್ತೇವೆ. ಆದ್ರೆ ಆ ರೀತಿ ಆಗದಿರಲಿ. ನಮ್ಮ ಸಿನಿಮಾ ಚೆನ್ನಾಗಿದೆ, ಬೇರೆ ಲೆವೆಲ್ ಗೆ ಹೋಗುತ್ತೆ ಎನ್ನುವ ನಂಬಿಕೆ ನಮಗಿದೆ" ಎಂದು ಎಚ್ಚರಿಕೆ ನೀಡಿದ್ದಾರೆ.

'ಗೀತಾ' ಜೊತೆ 'ಸೈರಾ' 'ವಾರ್'

'ಗೀತಾ' ಜೊತೆ 'ಸೈರಾ' 'ವಾರ್'

ಗೀತಾ ಸಿನಿಮಾ ಇದೆ ತಿಂಗಳು 27ಕ್ಕೆ ತೆರೆಗೆ ಬಂದರೆ, ಮುಂದಿನ ವಾರದಲ್ಲೆ ಬಾಲಿವುಡ್ ನಟ ಹೃತಿಕ್ ರೋಷನ್ ಅಭಿನಯದ ವಾರ್ ಮತ್ತು ತೆಲುಗಿನ ಬಹುನಿರೀಕ್ಷೆಯ ಸೈರಾ ಸಿನಿಮಾ ತೆರೆಗೆ ಬರುತ್ತಿದೆ. ಹಾಗಾಗಿ ಗೀತಾ ಚಿತ್ರಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಸೈರಾ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಇದರಿಂದ ಕನ್ನಡದ ಗೀತಾ ಸಿನಿಮಾಗೆ ಚಿತ್ರಮಂದಿರಗಳ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹಾಗಾಗಿ ಗಣೇಶ್ ಪರಭಾಷ ಚಿತ್ರದ ವಿರುದ್ಧ ಕೆಂಡಕಾರಿದ್ದಾರೆ.

ಪೈರಸಿ ತಡೆಯಲು ಪ್ಲಾನ್

ಪೈರಸಿ ತಡೆಯಲು ಪ್ಲಾನ್

ಈಗಾಗಲೆ ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತಿದ್ದಂತೆ ಪೈರಸಿಯಾಗಿ ವೈರಲ್ ಆಗುತ್ತಿದೆ. ಹಾಗಾಗಿ ಗೀತಾ ಸಿನಿಮಾ ತಂಡ ಈಗಾಗಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ರಿಲೀಸ್ ಗೂ ಮೊದಲೆ ಚಿತ್ರತಂಡ ಸೈಬರ್ ಕ್ರೈಮ್ ಗೆ ದೂರು ಮತ್ತು ಮನವಿ ಸಲ್ಲಿಸಿದ್ದಾರೆ. ಜೊತೆಗೆ ನಿರ್ಮಾಪಕ ಸೈಯದ್ ಸಲಾಂ ಖಾಸಗಿ ಕಂಪನಿ ಜೊತೆ ಕೈಜೋಡಿಸಿದ್ದಾರೆ. ನಕಲು ಪ್ರತಿಗಳನ್ನು ಇಂಟರ್ ನೆಟ್ ನಲ್ಲಿ ಯಾರೆ ಅಪ್ ಲೋಡ್ ಮಾಡಿದ್ರು ಅದನ್ನು ಕೂಡಲೆ ಡಿಲೀಟ್ ಮಾಡಿಸುವ ಹೊಣೆ ಆ ಕಂಪೆನಿ ಹೊತ್ತುಕೊಂಡಿದೆ.

More from Filmibeat

English summary
Kannada actor Ganesh starrer Geetha film set to release in 27th September. Ganesh warning to other language films.
Read more about: ganesh ಗಣೇಶ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X