For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ನಟ ಹರೀಶ್ ರಾಜ್

  By Rajendra
  |

  ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ದೇಶಕ ಹರೀಶ್ ರಾಜ್ ಅವರು ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಹರೀಶ್ ಮದುವೆ ಬುಧವಾರ (ಆ.20) ಬೆಳಗ್ಗೆ ನೆರವೇರಿತು. ಶ್ರುತಿ ಲೋಕೇಶ್ ಅವರ ಕೈಹಿಡಿದರು ಹರೀಶ್ ರಾಜ್.

  ಸಂಜೆ ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಜಸ್ಮಾ ಭವನದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಿತು. ಅಂದಹಾಗೆ ಇದು ಇಂಟರ್ ನೆಟ್ ಮದುವೆ ಕಮ್ ಇಬ್ಬರ ಕುಟುಂಬಿಕರೂ ಪರಸ್ಪರ ಒಪ್ಪಿ ಮಾಡಿದ ಮದುವೆ. [ಶಿವಣ್ಣ ಪುತ್ರಿ ನಿರುಪಮಾ ನಿಶ್ಚಿತಾರ್ಥ ಚಿತ್ರ ಸೌರಭ]

  ತಮ್ಮ ಬಾಳಸಂಗಾತಿಯನ್ನು ಮ್ಯಾಟ್ರಿಮೋನಿಯಲ್ ಜಾಲತಾಣದ ಮೂಲಕ ಆಯ್ಕೆ ಮಾಡಿದ್ದಾರೆ ಹರೀಶ್. ಶ್ರುತಿ ಲೋಕೇಶ್ ಅವರು ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬನ್ನಿ ನೋಡೋಣ ಹರೀಶ್ ರಾಜ್ ಮತ್ತು ಶ್ರುತಿ ಅವರ ಮದುವೆ ಚಿತ್ರಗಳನ್ನು.

  ಹರೀಶ್,ಶ್ರುತಿ ಅವರದು ಅಂತರ್ಜಾತೀಯ ವಿವಾಹ

  ಹರೀಶ್,ಶ್ರುತಿ ಅವರದು ಅಂತರ್ಜಾತೀಯ ವಿವಾಹ

  ಶ್ರುತಿ ಅವರ ತಂದೆಗೆ ತುಮಕೂರಿನಲ್ಲಿ ಒಂದು ಕಂಪನಿಯೂ ಇದೆ. ಹರೀಶ್ ರಾಜ್ ಮತ್ತು ಶ್ರುತಿ ಅವರದು ಅಂತರ್ಜಾತೀಯ ವಿವಾಹ. ಇಬ್ಬರೂ ಮನೆಯವರ ಒಪ್ಪಿಗೆ ಪಡೆದು ತಮ್ಮ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

  ಶ್ರುತಿ ಲೋಕೇಶ್ ಅವರು ಎಂಎಸ್ಸಿ ಪದವೀಧರೆ

  ಶ್ರುತಿ ಲೋಕೇಶ್ ಅವರು ಎಂಎಸ್ಸಿ ಪದವೀಧರೆ

  ಶ್ರುತಿ ಲೋಕೇಶ್ ಅವರು ಎಂಎಸ್ಸಿ ಪದವೀಧರೆ. ಇನ್ನು ಹರೀಶ್ ಅವರು ಕಿರುತೆರೆ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿ ಬಳಿಕ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ, ನಿರ್ದೇಶನದಲ್ಲೂ ಒಂದು ಕೈ ನೋಡಿದ್ದಾರೆ.

  ಶಾಸ್ತ್ರೋಕ್ತವಾಗಿ ನಡೆದ ಮದುವೆ

  ಶಾಸ್ತ್ರೋಕ್ತವಾಗಿ ನಡೆದ ಮದುವೆ

  ಶಾಸ್ತ್ರೋಕ್ತವಾಗಿ ನಡೆದ ಈ ಮದುವೆಗೆ ಗುರುಹಿರಿಯರು, ಬಂಧುಬಳಗ, ಸ್ನೇಹಿತರು ಸಾಕ್ಷಿಯಾದರು. ಚಿತ್ರರಂಗದ ಹಲವು ತಾರೆಗಳೂ ಆಗಮಿಸಿ ನೂತನ ದಂಪತಿಗಳಿಗೆ ಆಶೀರ್ವದಿಸಿದರು.

  ಹಲವಾರು ಸದಭಿರುಚಿ ಚಿತ್ರಗಳ ಹರಿಕಾರ

  ಹಲವಾರು ಸದಭಿರುಚಿ ಚಿತ್ರಗಳ ಹರಿಕಾರ

  ಕಲಾಕರ್ ಮತ್ತು ಗನ್ ಚಿತ್ರಗಳನ್ನು ನಿರ್ದೇಶಿಸಿರುವ ಹರೀಶ್ ರಾಜ್ ಹಲವಾರು ಸದಭಿರುಚಿಯ, ವೈವಿಧ್ಯಮಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗಿರೀಶ್ ಕಾಸವಳ್ಳಿ ಅವರ ದ್ವೀಪ, ಕೂರ್ಮಾವತಾರ, ತಾಯಿ ಸಾಹೇಬ, ಕಾನೂರು ಹೆಗ್ಗಡತಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  ಕಿರುತೆರೆಯಲ್ಲೂ ಮಿಂಚಿದ ಹರೀಶ್

  ಕಿರುತೆರೆಯಲ್ಲೂ ಮಿಂಚಿದ ಹರೀಶ್

  ಕಿರುತೆರೆಯ 'ಹೊಸ ಚಿಗುರು ಹಳೇ ಬೇರು' (1996) ಧಾರಾವಾಹಿ ಮೂಲಕ ಬಣ್ಣದ ಜಗತ್ತಿಗೆ ಅಡಿಯಿಟ್ಟ ಹರೀಶ್ ಅವರು ಮೊದಲು ಬಣ್ಣಹಚ್ಚಿದ ಚಿತ್ರ ದೋಣಿ ಸಾಗಲಿ (1998). ಬಳಿಕ ಅವರು ಕಲಾಕಾರ್ ಚಿತ್ರವನ್ನು ನಿರ್ದೇಶಿಸಿದರು. ಟಿವಿ ಜಾಹೀರಾತುಗಳಲ್ಲೂ ಕಾಣಿಸಿಕೊಂಡರು.

  ಭಿನ್ನ ರೀತಿಯ ಪಾತ್ರಗಳ ಪೋಷಿಸಿದ ನಟ

  ಭಿನ್ನ ರೀತಿಯ ಪಾತ್ರಗಳ ಪೋಷಿಸಿದ ನಟ

  ಬನದ ನೆರಳು, ಹೊಂಗನಸು, ಬೆಳದಿಂಗಳಾಗಿ ಬಾ, ತನನಂ ತನನಂ, ಮೌನಿ, ತುಂಟಾಟ, ಕುರಿಗಳು ಸಾರ್ ಕುರಿಗಳು ಮುಂತಾದ ಚಿತ್ರಗಳಲ್ಲಿ ಭಿನ್ನ ರೀತಿಯ ಪಾತ್ರಗಳನ್ನು ಪೋಷಿಸಿದ್ದಾರೆ. ಮನೆಯೊಂದು ಮೂರು ಬಾಗಿಲು, ಕುಬೇರಪ್ಪ ಅಂಡ್ ಸನ್ಸ್, ಕಾವ್ಯಾಂಜಲಿ, ಮಿಂಚಿನ ಬಳ್ಳಿ, ದಂಡಪಿಂಡಗಳು, ಒನ್ ಟೀ ಸ್ಪೂನ್ ಸ್ಪೆಷಲ್ ಮುಂತಾದ ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

  ಹೊಸ ಬಾಳಿನ ಹೊಸಿಲಲಿ ನಿಂತಿರುವ

  ಹೊಸ ಬಾಳಿನ ಹೊಸಿಲಲಿ ನಿಂತಿರುವ

  ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ ಹೊಸ ಆಸೆಯ ಕಡಲಿ ತೇಲುತಿಹ ನವ ಜೋಡಿಗೆ ಸುಖವಾಗಲ.

  English summary
  Sandalwood actor and director Harish Raj married Shruthi Lokesh on 20th of August morning. The couple finding each other on a matrimonial site. The reception was held on the same evening at Jasma Bhavan in Cantonment area in Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X