ಕನ್ನಡ ಚಿತ್ರರಂಗದ ಖ್ಯಾತ ನಟ ಹರೀಶ್ ರಾಯ್ ಇನ್ನಿಲ್ಲ

ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ನಟ ಹರೀಶ್ ರಾಯ್ ನಿಧನರಾಗಿದ್ದಾರೆ. ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹರೀಶ್ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. 'ಓಂ', 'ಅಂಡರ್‌ವರ್ಲ್ಡ್', 'ಕೆಜಿಎಫ್' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ನಟರಾಗಿ ಮಿಂಚಿದ್ದರು. ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಅವರು ಬಳಿಕ ಚಿತ್ರರಂಗಕ್ಕೆ ಬಂದಿದ್ದರು.

ಬಹಳ ದಿನಗಳಿಂದ ನಟ ಹರೀಶ್ ರಾಯ್ ಅನಾರೋಗ್ಯದಿಂದ ಬಳಲುತ್ತಿದ್ದರು. ಯಶ್, ದರ್ಶನ್ ಸೇರಿ ಕೆಲವರು ಚಿಕಿತ್ಸೆಗೆ ಸಹಾಯ ಮಾಡಿದ್ದರು. ಇತ್ತೀಚೆಗೆ ತಮ್ಮ ಆರೋಗ್ಯಸ್ಥಿತಿ ಬಗ್ಗೆ ಅವರು ಮಾತನಾಡಿ ಸಹಾಯಕ್ಕಾಗಿ ಮನವಿ ಮಾಡಿದ್ದರು. ಸಾಕಷ್ಟು ಜನ ಕೈಲಾದ ಸಹಾಯ ಮಾಡಿದ್ದರು.

Kannada Actor Harish Roy Passes Away After Battling Thyroid Cancer

ಒಂದು ತಿಂಗಳಿನಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹರೀಶ್ ರಾಯ್ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು(ನವೆಂಬರ್ 6) ನಿಧನರಾಗಿದ್ದಾರೆ. 'ಆಪರೇಷನ್ ಅಂತ', 'ಗುಲಾಬಿ, 'ತಾಯವ್ವ', 'ಜೋಡಿಹಕ್ಕಿ', 'ಜನನಿ ಜನ್ಮಭೂಮಿ', 'ಧೈರ್ಯ', 'ಕರ್ನಾಟಕ ಪೊಲೀಸ್', 'ಸಿಂಹದ ಗುರಿ', 'ಹಲೋ ಯಮ', 'ಉಪೇಂದ್ರ', 'ಖಡ್ಗ', 'ಮೆಜೆಸ್ಟಿಕ್', 'ಬದ್ರಿ', 'ಸರ್ದಾರ', 'ನಲ್ಲ', 'ರಣಚಂಡಿ', 'ಮಂಡ್ಯ', 'ಮಾದೇಶ', 'ಇಂದ್ರ', 'ದಂಡುಪಾಳ್ಯ', 'ಸ್ವಾರಿ ಕಣೇ', 'ರಾಜ್ ಬಹದ್ದೂರ್' ಹೀಗೆ ಹಲವು ಸಿನಿಮಾಗಳಲ್ಲಿ ಹರೀಶ್ ರಾಯ್ ಬಣ್ಣ ಹಚ್ಚಿದ್ದರು.

ಅಂಬರೀಶ್, ದರ್ಶನ್, ಸುದೀಪ್, ಶಿವರಾಜ್‌ಕುಮಾರ್ ಹೀಗೆ ಸ್ಟಾರ್ ನಟರ ಸಿನಿಮಾಗಳಲ್ಲಿ ಹರೀಶ್ ರಾಯ್ ನಟಿಸಿದ್ದರು. ಬಹುತೇಕ ನೆಗೆಟಿವ್ ರೋಲ್‌ಗಳಲ್ಲೇ ಅವರು ಕಾಣಿಸಿಕೊಂಡಿದ್ದರು. ಹರೀಶ್ ರಾಯ್ ಅವರಿಗೆ ಥೈರಾಯ್ಡ್ ಕ್ಯಾನ್ಸರ್ 4ನೇ ಹಂತಕ್ಕೆ ಹೋಗಿತ್ತು. ಅದು ಹೊಟ್ಟೆಗೆ ವ್ಯಾಪಿಸಿ ನೀರು ತುಂಬಿಕೊಂಡಿತ್ತು. ಚಿಕಿತ್ಸೆಗೆ 70 ಲಕ್ಷ ರೂ. ಅಗತ್ಯವಿದೆ ಎಂದು ಹೇಳಿಕೊಂಡಿದ್ದರು. ಪ್ರತಿ ಇಂಜೆಕ್ಷನ್ ಬೆಲೆ 3.55 ಲಕ್ಷ ರೂ. ಎಂದು ತಿಳಿಸಿದ್ದರು.

ಉಡುಪಿ ಮೂಲಕ ಹರೀಶ್ ರಾಯ್ ಪ್ರಕರಣವೊಂದರಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ಅದೇ ಸಮಯದಲ್ಲಿ ಉಪೇಂದ್ರ ಅವರ ಪರಿಚಯದಿಂದ 'ಓಂ' ಚಿತ್ರದ ರಾಯ್ ಪಾತ್ರದಲ್ಲಿ ನಟಿಸಿದ್ದರು. ಅಲ್ಲಿಂದ ಮುಂದೆ ಹರೀಶ್ ರಾಯ್ ಎಂದೇ ಖ್ಯಾತರಾಗಿದ್ದರು. 'ಓಂ' ಚಿತ್ರದ ಬಳಿಕ 'ಕೆಜಿಎಫ್' ಚಿತ್ರದ ಚಾಚಾ ಪಾತ್ರ ಒಳ್ಳೆ ಬ್ರೇಕ್ ಕೊಟ್ಟಿತ್ತು. ಆದರೆ ಬಳಿಕ ಹೆಚ್ಚು ಸಿನಿಮಾಗಳಲ್ಲಿ ನಟಿಸಲು ಆರೋಗ್ಯ ಕೈಕೊಟ್ಟಿತ್ತು.

ಐಸಿಯುನಲ್ಲಿ ಹರೀಶ್ ರಾಯ್ ಅವರಿಗೆ ಚಿಕಿತ್ಸೆ ಕೊಡಲಾಗುತ್ತಿತ್ತು. ಚಿಕಿತ್ಸೆಗಾಗಿ 3.5 ಲಕ್ಷ ರೂ. ವೆಚ್ಚದ ಇಂಜೆಕ್ಷನ್ ಕೊಟ್ಟಾಗ ಅವರ ದೇಹ ಸ್ಪಂದಿಸಿರಲಿಲ್ಲ. ಉಸಿರಾಟದ ತೊಂದರೆಯಿಂದ ಐಸಿಯುನಲ್ಲೇ ಚಿಕಿತ್ಸೆ ಮುಂದುವರೆಸಿದ್ದರು. ಅವರಿಗೆ 55 ವರ್ಷ ವಯಸ್ಸಾಗಿತ್ತು. ಆರೋಗ್ಯದಲ್ಲಿ ಏರುಪೇರು ಉಂಟಾಗಿ ಹಣಕಾಸಿನ ಸಮಸ್ಯೆಗೆ ಸಿಲುಕಿದ್ದರು.

ಮಡದಿ, ಮಕ್ಕಳು, ಜೀವನಕ್ಕಾಗಿ ಆನಾರೋಗ್ಯದ ನಡುವೆಯೂ ಸಿನಿಮಾಗಳಲ್ಲಿ ನಟಿಸುವ ಪ್ರಯತ್ನ ಮಾಡುತ್ತಿದ್ದರು. ಯಶ್, ದರ್ಶನ್ ಮಾತ್ರವಲ್ಲ ಶಿವಣ್ಣ, ಧ್ರುವ ಸರ್ಜಾ ಕೂಡ ಸಹಾಯ ಮಾಡಿದ್ದರು.

More from Filmibeat

Read more about: kannada sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X