For Quick Alerts
  ALLOW NOTIFICATIONS  
  For Daily Alerts

  ಕುಡಿದ ಅಮಲಿನಲ್ಲಿ ಪೊಲೀಸರ ಜೊತೆ ನಟ ಹರ್ಷ ಕಿರಿಕ್

  By ಫಿಲ್ಮ್ ಡೆಸ್ಕ್
  |

  ಕುಡಿದ ಮತ್ತಿನಲ್ಲಿ ಸ್ಯಾಂಡಲ್ ವುಡ್ ನಟ ಹರ್ಷ ತಡರಾತ್ರಿ ನಗರದ ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಜಾಲಹಳ್ಳಿ ಮುಖ್ಯ ರಸ್ತೆಯ ಅಪಾರ್ಟ್ ಮೆಂಟ್ ಬಳಿ ಹರ್ಷ, ಸ್ನೇಹಿತರ ಜೊತೆ ಸೇರಿ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ರಾತ್ರಿ ಬೀಟ್ ನಲ್ಲಿದ್ದ ಪೊಲೀಸರು ಅಲ್ಲಿಗೆ ಎಂಟ್ರಿ ಕೊಟ್ಟಿದ್ದಾರೆ.

  ಕುಡಿದು ಗಲಾಟೆ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ ಪೊಲೀಸರ ವಿರುದ್ಧ ನಟ ಹರ್ಷ ಮತ್ತು ಸ್ನೇಹಿತರು ತಿರುಗಿಬಿದ್ದಾರೆ. ಪೊಲೀಸರಿಗೆ ಅವಾಜ್ ಹಾಕಿದಲ್ಲದೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಹೇಳಲಾಗುತ್ತಿದೆ.

  ತೆಲುಗು ಬಿಗ್‌ಬಾಸ್ ಸ್ಪರ್ಧಿ ಉಡುಪಿಯಲ್ಲಿ ಬಂಧನ: ಕಾರಣವೇನು?

  ಕೂಡಲೆ ನಟ ಹರ್ಷ ಮತ್ತು ಸ್ನೇಹಿತರನ್ನು ಬಾಗಲಕೋಟೆ ಪೊಲೀಸರು ವಶಕ್ಕೆ ಪಡೆದು, ಠಾಣೆಗೆ ಕರೆತಂದು ಇನ್ನೊಮ್ಮೆ ಈ ರೀತಿ ಮಾಡದಂತೆ ವಾರ್ನಿಂಗ್ ಮಾಡಿ ಕಳಿಸಿದ್ದಾರೆ. ನಟ ಹರ್ಷ, ಯಶ್ ಅಭಿನಯದ 'ರಾಜಾಹುಲಿ' ಸಿನಿಮಾ ಮೂಲಕ ಖ್ಯಾತಿಗಳಿದ್ದಾರೆ. ವರ್ದನ, ಗಜಪಡೆ ಸಿನಿಮಾಗಳಲ್ಲಿಯೂ ಹರ್ಷ ನಟಿಸಿದ್ದಾರೆ.

  ದೀಪು ಸರ್ ಅಂತ ಕರೆಯೋದು ನಂಗೆ ಅಭ್ಯಾಸ | Sudheendra Venkatesh | Kiccha Sudeep | Filmibeat Kannada

  ಈ ಹಿಂದೆಯೂ ಒಮ್ಮೆ ಹರ್ಷ ಮತ್ತು ಸ್ನೇಹಿತರು ಡಾಬಾವೊಂದರಲ್ಲಿ ಕಿರಿಕ್ ಮಾಡಿಕೊಂಡಿದ್ದರು. ನಾಗಮಂಗಲ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ಸ್ನೇಹಿತರ ಜೊತೆ ಡಾಬಾಗೆ ಊಟಕ್ಕೆ ಹೋದ ಸಮಯದಲ್ಲಿ ಕ್ಷುಲಕ ಕಾರಣಕ್ಕೆ ಸರ್ವರ್ ಗಳ ಜೊತೆ ಗಲಾಟೆ ಮಾಡಿಕೊಂಡಿದ್ದರು. ಬಳಿಕ ಡಾಬಾ ಸರ್ವರ್ ಗಳು ಹರ್ಷ ಮತ್ತು ಸ್ನೇಹಿತರನ್ನು ಗೃಹ ಬಂಧನದಲ್ಲಿರಿಸಿ ಹಲ್ಲೆ ನಡೆಸಿದ್ದರು ಎಂದು ಹೇಳಲಾಗಿತ್ತು.

  English summary
  Kannada Actor Harsha and his friends fight with police over drinks party in Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X