ಐಫಾ ಅವಾರ್ಡ್ಸ್ 2016-17 ವಿರುದ್ಧ ಜಗ್ಗೇಶ್ ಬಹಿರಂಗ ಆಕ್ರೋಶ.!
2016-17ನೇ ಸಾಲಿನ ಪ್ರತಿಷ್ಟಿತ ಐಫಾ ಅವಾರ್ಡ್ಸ್ ವಿರುದ್ಧ 'ನೀರ್ ದೋಸೆ' ನಿರ್ಮಾಪಕ ಪ್ರಸನ್ನ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ 'ನೀರ್ ದೋಸೆ' ಚಿತ್ರದ ಹೀರೋ ನವರಸ ನಾಯಕ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.[ಐಫಾ ಅವಾರ್ಡ್ಸ್ 2016-17 ಕುರಿತು 'ನೀರ್ ದೋಸೆ' ನಿರ್ಮಾಪಕ ವ್ಯಂಗ್ಯ]
''ಐಫಾ ಅವಾರ್ಡ್ಸ್ ಎನ್ನುವುದು ಒಂದು ಡಿಗಿಲ್ ಅವಾರ್ಡ್ ಸಂಸ್ಥೆ. ಯಾರಿಗೆ ಬೇಕೋ ಅವರಿಗೆ ಅವಾರ್ಡ್ ಫಿಕ್ಸ್'' ಅಂತ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ನಟ ಜಗ್ಗೇಶ್ ರವರ ಸಾಲು ಸಾಲು ಟ್ವೀಟ್ ಗಳು
ಐಫಾ ಅವಾರ್ಡ್ಸ್ ಕುರಿತು ಬೇಸರ ವ್ಯಕ್ತಪಡಿಸಿ ನಟ ಜಗ್ಗೇಶ್ ಸಾಲು ಸಾಲು ಟ್ವೀಟ್ ಗಳನ್ನ ಮಾಡಿದ್ದಾರೆ. ಅದರಲ್ಲಿ 'ನೀರ್ ದೋಸೆ' ಚಿತ್ರವನ್ನ ಬೇಕಂತಲೇ ಅವಾಯ್ಡ್ ಮಾಡಲಾಗಿದೆ ಎಂಬ ಬಾಂಬ್ ಕೂಡ ಸ್ಫೋಟಿಸಿದ್ದಾರೆ.[ಐಐಎಫ್ ಎ ಉತ್ಸವ್: 'ಕಿರಿಕ್ ಪಾರ್ಟಿ' ತಂಡದ ಪ್ರಶಸ್ತಿಗಳ ಮೊತ್ತ 6]

ಐಫಾ ಅವಾರ್ಡ್ಸ್ ಫಿಕ್ಸ್.!
''ಐಫಾ ಅವಾರ್ಡ್ಸ್ - ಇದು ಇತ್ತೀಚಿನ ಒಂದು ಡಿಗಿಲ್ ಅವಾರ್ಡ್ ಸಂಸ್ಥೆ. ಯಾರಿಗೆ ಬೇಕೋ ಅವರಿಗೆ ಅವಾರ್ಡ್ ಫಿಕ್ಸ್. 'ನೀರ್ ದೋಸೆ' ಜನ ಮೆಚ್ಚಿದ ಚಿತ್ರ. ಬೇಕಂತಲೇ ಅವಾಯ್ಡ್ ಮಾಡಿದ್ದಾರೆ. ನಮಗೆ ಜನ ಬೆಂಬಲವೇ ಅವಾರ್ಡ್'' ಅಂತ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಕೊರಗು ಇಲ್ಲ.!
''ನೀರ್ ದೋಸೆ' ಚಿತ್ರಕ್ಕೆ ಪ್ರಶಸ್ತಿ ಸಿಗದೆ ಇರುವುದಕ್ಕೆ ಕೊರಗು ಇಲ್ಲ. ನಾಮಿನೇಟ್ ಗೆ ಮಾನದಂಡವಿದ್ದರೂ ಬೇಕಾದವರ ಆಯ್ಕೆಯಾಗಿದೆ. ನನ್ನ ಪ್ರಕಾರ ಹರಿಪ್ರಿಯಾ, ದತ್ತಣ್ನ ನಟನೆಗೆ ಕಡ್ಡಾಯ ಸಿಗಬೇಕಿತ್ತು'' - ನಟ ಜಗ್ಗೇಶ್

ಆತ್ಮಸಾಕ್ಷಿಗೆ ಹೆದರಬೇಕು.!
''ಭ್ರಷ್ಟಾಚಾರ ಮುಕ್ತ ರಾಷ್ಟ್ರ ಅಂತ ಕೂಗು ಹಾಕೋ ನಾವು, ಎಲ್ಲಾ ಮಾಡಿ ಜಾಣ ಕುರುಡರಂತೆ ವರ್ತಿಸಿ ಬೀಗುತ್ತೇವೆ. ಯಾರಿಗೂ ಹೆದರದಿದ್ದರೂ ಪರ್ವಾಗಿಲ್ಲ. ಆತ್ಮಸಾಕ್ಷಿಗಾದರೂ ಹೆದರಿ'' ಎಂದು ಟ್ವೀಟಿಸಿದ್ದಾರೆ ಜಗ್ಗೇಶ್

'ನೀರ್ ದೋಸೆ' ನಿರ್ಮಾಪಕರ ವ್ಯಂಗ್ಯ
''ಯೋಗ್ಯತೆ ಇದೆಯೋ ಇಲ್ಲವೋ ಅನ್ನೋದನ್ನ ಆಮೇಲೆ ಯೋಚನೆ ಮಾಡೋಣ... ಆದರೆ iifa 2016 ಚಲನಚಿತ್ರ ಪ್ರಶಸ್ತಿ ಪಡೆದಿರುವ ಎಲ್ಲಾ ವಿಜೇತರಿಗೂ ಅಭಿನಂದನೆಗಳು. ಇದಕ್ಕಿಂತ ಹೆಚ್ಚಾಗಿ ಪ್ರಶಸ್ತಿ ನಿರ್ಣಾಯಕ ಸಮಿತಿಗೆ ಯಾವ ಪ್ರಶಸ್ತಿ ಕೊಟ್ಟರೂ ಸಾಲದು. ಅವರಿಗೆ ಜ್ಞಾನಪೀಠ ಪ್ರಶಸ್ತಿಯೂ ಕಡಿಮೆ. ನಿಮ್ಮ ಯೋಗ್ಯತೆಗೆ ನಾವು ಸಿನಿಮಾ ಮಾಡುತ್ತಿಲ್ಲ ಅನ್ನುವುದೇ ನಮ್ಮ ಕೊರಗು..! ನಮ್ಮ್ ಜನ್ಮಕ್ ಇಷ್ಟ್ ಬೆಂಕಿ ಹಾಕ..! ಐ ಲವ್ ಯೂ iifa ಅವಾರ್ಡ್ಸ್..!'' ಅಂತ ಫೇಸ್ ಬುಕ್ ನಲ್ಲಿ ನಿರ್ಮಾಪಕ ಪ್ರಸನ್ನ ತಮ್ಮ ಅಸಮಾಧಾನ ಹೊರಹಾಕಿದ್ದರು.

IIFA ಅವಾರ್ಡ್ಸ್ 2016-17 ಪ್ರಶಸ್ತಿ ವಿಜೇತರು
ಅತ್ಯುತ್ತಮ ಚಿತ್ರ - ಕಿರಿಕ್ ಪಾರ್ಟಿ
ಅತ್ಯುತ್ತಮ ನಟ - ರಕ್ಷಿತ್ ಶೆಟ್ಟಿ (ಕಿರಿಕ್ ಪಾರ್ಟಿ)
ಅತ್ಯುತ್ತಮ ನಟಿ - ಪಾರುಲ್ ಯಾದವ್ (ಕಿಲ್ಲಿಂಗ್ ವೀರಪ್ಪನ್)
ಅತ್ಯುತ್ತಮ ನಿರ್ದೇಶಕ - ಪವನ್ ಕುಮಾರ್ (ಯು-ಟರ್ನ್)
ಅತ್ಯುತ್ತಮ ಕಥೆ - ಪವನ್ ಕುಮಾರ್ (ಯು-ಟರ್ನ್)
ಅತ್ಯುತ್ತಮ ಹಿನ್ನಲೆ ಗಾಯನ - ವಿಜಯ್ ಪ್ರಕಾಶ್ (ಕಿರಿಕ್ ಪಾರ್ಟಿ)
ಅತ್ಯುತ್ತಮ ಸಂಗೀತ ನಿರ್ದೇಶನ - ಅಜನೀಶ್ ಲೋಕನಾಥ್ (ಕಿರಿಕ್ ಪಾರ್ಟಿ)
ಅತ್ಯುತ್ತಮ ಸಾಹಿತ್ಯ - ಕಥೆಯೊಂದ ಹೇಳಿದೆ (ಕಿರಿಕ್ ಪಾರ್ಟಿ)
ಅತ್ಯುತ್ತಮ ಕೊರಿಯೋಗ್ರಫಿ - ಕಿರಿಕ್ ಪಾರ್ಟಿ


Click it and Unblock the Notifications











