»   » ಜಗ್ಗೇಶ್'ರ ನಡೆ ಅವರ ಬಂಧುಗಳಿಗೆ ಹೇಸಿಗೆ ಉಂಟುಮಾಡಿತ್ತಂತೆ

ಜಗ್ಗೇಶ್'ರ ನಡೆ ಅವರ ಬಂಧುಗಳಿಗೆ ಹೇಸಿಗೆ ಉಂಟುಮಾಡಿತ್ತಂತೆ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ 'ನವರಸ ನಾಯಕ' ಅಂತಾನೇ ಖ್ಯಾತಿ ಪಡೆದಿರುವ ನಟ ಜಗ್ಗೇಶ್ ಅವರು ಇಂದು (ಮಾರ್ಚ್ 17) ತಮ್ಮ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಚಿಕ್ಕಪುಟ್ಟ ಪಾತ್ರಗಳನ್ನು ಮಾಡುತ್ತಾ ಚಿತ್ರರಂಗಕ್ಕೆ ಕಾಲಿಟ್ಟ ಜಗ್ಗೇಶ್ ಅವರು ತಮ್ಮದೇ ಆದ ಮ್ಯಾನರಿಸಂನಿಂದ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಮೆಲ್ಲ-ಮೆಲ್ಲನೇ ಗುರುತಿಸಿಕೊಂಡರು.[ಪುನೀತ್ ರ 'ರಾಜಕುಮಾರ' ಚಿತ್ರದ ಬಗ್ಗೆ ಜಗ್ಗೇಶ್ ಹೇಳಿದ್ದೇನು?]

ಅಂದಹಾಗೆ ಜಗ್ಗೇಶ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ನಟನಾಗಿ ಕಾಣಿಸಿಕೊಳ್ಳುತ್ತಾರೆಂದು ಕನಸಲ್ಲೂ ಅಂದುಕೊಂಡಿರಲಿಲ್ಲವಂತೆ. ಇಂಜಿನಿಯರ್ ಆಗಬೇಕೆಂದು ಹೆತ್ತವರು ಕನಸು ಹೊತ್ತಿದ್ದರು. ಆದರೆ 'ನವರಸ ನಾಯಕ' ಜಗ್ಗೇಶ್ ಅವರಿಗೆ ಕಲಾ ಮಾತೆ ಒಲಿದು ಬಂದಳು.

ಇದೀಗ ತಮ್ಮ ವಿಭಿನ್ನ ನಟನಾ ಶೈಲಿಯಿಂದ ಹಲವಾರು ಅಭಿಮಾನಿಗಳನ್ನು ಸಂಪಾದಿಸಿದ್ದು, ಜೊತೆಗೆ ರಾಜಕೀಯ ಕ್ಷೇತ್ರದಲ್ಲೂ ಒಂದು ಕೈ ನೋಡಿರುವ ಜಗ್ಗೇಶ್ ಅವರು ತಮ್ಮ 53ನೇ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಅಭಿಮಾನಿ ಬಳಗದೊಂದಿಗೆ ಆಚರಿಸಿಕೊಂಡಿದ್ದಾರೆ.[ಜಗ್ಗೇಶ್ ರ 'ನೀರ್ ದೋಸೆ'ಯ ಸಖತ್ 'ಸ್ಯಾಂಪಲ್' ಡೈಲಾಗ್ ಸೂಪರ್]

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಜಗ್ಗೇಶ್ ಅವರು ತಾವು ಬೆಳೆದು ಬಂದ ದಾರಿ ಮತ್ತು ತಮ್ಮ ಮನದಾಳದ ಮಾತನ್ನು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಪೂರ್ತಿಯಾಗಿ ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ...

ಜಗ್ಗೇಶ್ ಜನನ ಪುರಾಣ

'ಅಂದು ಮಾರ್ಚ್ 17/3/1963.. ಪೂಜ್ಯ ತಂದೆ-ತಾಯಿ ನಂಜನಗೂಡು ನಂಜುಡೇಶ್ವರನ ಹರಕೆ ಹೊತ್ತು ಬಂದ ವರ್ಷ ನನ್ನ ಜನನವಂತೆ..ಅಮ್ಮನ ಹರಕೆಯಂತೆ ನನಗೆ ಈಶ್ವರ ಅನ್ನೋ ನಾಮಕರಣ ಮಾಡಿದರು'.- ಜಗ್ಗೇಶ್[ಅರೆರೆ.! ಜಗ್ಗೇಶ್ ಮತ್ತೆ ಮದುವೆ ಆದ್ರಾ ಏನ್ ಕತೆ]

ಇಂಜಿನಿಯರ್ ಆಗಬೇಕಿದ್ದ ಜಗ್ಗೇಶ್

'ಹೆತ್ತವರ ಆಸೆ ನಾನು ಬಿ.ಇ ಪದವಿಧರನಾಗಬೇಕೆಂದು..ಆದರೆ ನನ್ನ ಮನ ಕಲೆಯನ್ನು ಹರಸಿತು..ಕಲೆ ಇಲ್ಲದ ಮನೆತನದಲ್ಲಿ ನನ್ನ ಅನಿಸಿಕೆ ಅವರಿಗೆ ಕಷ್ಟವಾಯಿತು'..-ಜಗ್ಗೇಶ್.[ಜಗ್ಗೇಶ್ ರ 'ನೀರ್ ದೋಸೆ' ಪಿಕ್ಚರ್ನ್ಯಾಗ ಡೈಲಾಗ್ ಹೆಂಗೆಲ್ಲಾ ಐತಿ ಗೊತ್ತೇನ್ರೀ?]

19ರ ಹರೆಯದಲ್ಲಿ ಮದುವೆ

'19ರ ಪ್ರಾಯದಲ್ಲಿ ಪರಿಮಳಾ ಜೊತೆ ವಿವಾಹವಂತು ಅಪ್ಪ-ಅಮ್ಮನಿಗೆ ಚಿಂತೆಗೀಡು ಮಾಡಿತು..ಬಂಧುಗಳು ನನ್ನ ನಡೆ ಕಂಡು ಹೇಸಿಗೆ ಪಟ್ಟರು..ಆದರು ನನ್ನ ಮನಸ್ಸು ನನ್ನ ನಡೆ ಸರಿ ಇದೆ ಎಂದು ಭಾವಿಸಿತ್ತು..' - ಜಗ್ಗೇಶ್

ಅಭಿಮಾನಿಗಳಿಗೆ ವಂದನೆ

'ನಿಮ್ಮ (ಅಭಿಮಾನಿಗಳು) ದಯೆಯಿಂದ ನನ್ನ ಭಾವನೆ ಸಾಧಿಸಿಬಿಟ್ಟೆ..ಇಂದು ಅಪ್ಪ-ಅಮ್ಮ ಅನೇಕ ಬಂಧುಗಳು ನನ್ನಿಂದ ದೈಹಿಕವಾಗಿ ದೂರವಾದರು..ರಾಯರ ದಯೆ, ಕನ್ನಡಿಗರ ಆಶೀರ್ವಾದ, ಕಲಾದೇವಿ ಹಾರೈಕೆಯಿಂದ ಇಲ್ಲಿಯವರೆಗೂ ಬಂದಿರುವೆ'. - ಜಗ್ಗೇಶ್

53ರ ಹರೆಯ

'ನನ್ನ ಬದುಕಿನಲ್ಲಿ ಸಿಕ್ಕ ಎಲ್ಲರ ನೆನಪಾಯಿತು..ಕಾಯ ವಾಚ ಮನಸಾ ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ, ಇಂದು ನನ್ನ ಪ್ರಾಯ 53ಕ್ಕೆ ಕಾಲಿಟ್ಟಿದೆ..ಅನಂತ ಪದ್ಮನಾಭನ ಸೇವೆಗೆ ತಿರುವನಂತಪುರಕ್ಕೆ ಬಂದಿರುವೆ, ಪ್ರೀತಿಸಿ ಹರಸಿದ ಬಂಗಾರದ ಪಾದಗಳಿಗೆ ಹೃದಯಾಂತರಾಳದಿಂದ ನಮನ..ಪ್ರೀತಿಸಿ ಬಾಳೋಣ..ಪ್ರೀತಿಯೇ ಶ್ರೇಷ್ಠ..' - ಜಗ್ಗೇಶ್

ಮೊಮ್ಮಗನ ಜೊತೆ ಜಗ್ಗೇಶ್

ದೊಡ್ಡ ಮಗ ಗುರು ರಾಜ್ ದಂಪತಿಗಳ ಪುತ್ರ, ಮುದ್ದು ಮೊಮ್ಮಗನ ಜೊತೆ ಬರ್ತ್ ಡೇ ಬಾಯ್ ಜಗ್ಗೇಶ್ ಫೋಸ್ ಕೊಟ್ಟಿದ್ದು ಹೀಗೆ. ಅಂತೂ ಜಗ್ಗೇಶ್ ಅವರ ತಾತಾ ಆದ ಖುಷಿಯಲ್ಲಿದ್ದಾರೆ.

English summary
Kannada Actor Jaggesh Celebrates his 53rd Birthday Today March 17th. With his Family and Fans in Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada