»   » ನಟ ಜಗ್ಗೇಶ್ ಗೆ ಕಾಡಿದ ಅನಾರೋಗ್ಯ: ರದ್ದಾದ ಜೀ ಕನ್ನಡ ಚಿತ್ರೀಕರಣ

ನಟ ಜಗ್ಗೇಶ್ ಗೆ ಕಾಡಿದ ಅನಾರೋಗ್ಯ: ರದ್ದಾದ ಜೀ ಕನ್ನಡ ಚಿತ್ರೀಕರಣ

Posted By:
Subscribe to Filmibeat Kannada

ನವರಸ ನಾಯಕ ಜಗ್ಗೇಶ್ 'ತೀರ್ಪುಗಾರ'ರ ಸ್ಥಾನದಲ್ಲಿ ಕುಳಿತಿದ್ದ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ಜನಪ್ರಿಯ ಆಗುತ್ತಿದ್ದಂತೆಯೇ, ನಟ ಜಗ್ಗೇಶ್ ರವರ ಸಾರಥ್ಯದಲ್ಲಿ 'ಕಿಲಾಡಿ ಕುಟುಂಬ' ಶೋಗೆ ಚಾಲನೆ ನೀಡಿತು ಜೀ ಕನ್ನಡ ವಾಹಿನಿ.

'ಬಾಲಿವುಡ್'ನಿಂದ ಜಗ್ಗೇಶ್ ಗೆ ಆಫರ್ ಬಂದ್ರೆ ಏನಂತಾರೆ.?

ಪ್ರತಿ ದಿನ ಸಂಜೆ 7ಕ್ಕೆ ಪ್ರಸಾರ ಆಗುತ್ತಿರುವ 'ಕಿಲಾಡಿ ಕುಟುಂಬ' ಕಾರ್ಯಕ್ರಮ ಕೂಡ ಜನ ಮನ್ನಣೆ ಗಳಿಸಿದೆ. ಇಂತಿಪ್ಪ, ಜೀ ಕನ್ನಡ ವಾಹಿನಿಯ 'ಕಿಲಾಡಿ ಕುಟುಂಬ' ಕಾರ್ಯಕ್ರಮದ ಚಿತ್ರೀಕರಣ ನಾಳೆ ನಡೆಯುವುದಿಲ್ಲ. ಕಾರಣ, ನಟ ಜಗ್ಗೇಶ್ ಗೆ ಹುಷಾರಿಲ್ಲ.

'8MM' ಬುಲೆಟ್ ಹಾರಿಸಲಿದ್ದಾರೆ ನವರಸ ನಾಯಕ ಜಗ್ಗೇಶ್

Kannada Actor Jaggesh down with Viral Fever

ವೈರಲ್ ಫೀವರ್ ನಿಂದ ಬಳಲುತ್ತಿರುವ ನಟ ಜಗ್ಗೇಶ್ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ನಾಳೆಯ ಜೀ ಕನ್ನಡ ಚಿತ್ರೀಕರಣಕ್ಕೆ ಜಗ್ಗೇಶ್ ಹಾಜರ್ ಆಗುತ್ತಿಲ್ಲ. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಜಗ್ಗೇಶ್ ಬರೆದುಕೊಂಡಿರುವುದು ಹೀಗೆ....

ಜ್ವರದಿಂದ ಬಳಲುತ್ತಿದ್ದರೂ, ಟ್ವಿಟ್ಟರ್ ನೋಡುವುದನ್ನ ಮಾತ್ರ ಜಗ್ಗೇಶ್ ಬಿಟ್ಟಿಲ್ಲ. ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿ ಇರಲು ಜಗ್ಗೇಶ್ ಬಯಸುತ್ತಾರೆ.

English summary
Since, Kannada Actor Jaggesh is down with Viral Fever, Zee Kannada shooting has been cancelled.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada