ಪ್ರೀತಿಯ ತಂದೆಯನ್ನು ಕಳೆದುಕೊಂಡ ದುಃಖದಲ್ಲಿ ನಟ ಜಗ್ಗೇಶ್
ಎಲ್ಲರಿಗಿಂತ ದೊಡ್ಡವನು ದೇವರು. ದೇವರಿಗಿಂತ ದೊಡ್ಡವರು ತಂದೆ - ತಾಯಿ. ಒಬ್ಬ ಸಾಮಾನ್ಯ ಮನುಷ್ಯನಾಗಿರಲಿ, ಡಾಕ್ಟರ್, ಇಂಜಿನಿಯರ್, ಟೀಚರ್, ಪೊಲೀಸ್, ಸಿನಿಮಾ ನಟ ಹೀಗೆ ಏನೇ ಆಗಿದರಲಿ ಅಪ್ಪ ಅಮ್ಮನ ಮುಂದೆ ನಾವು 'ಮಕ್ಕಳು'.
ನಟ ಜಗ್ಗೇಶ್ ಅಪ್ಪ ಅಮ್ಮನ ಪ್ರೀತಿಯ ಮಗ. ತಂದೆ, ತಾಯಿ ಬಗ್ಗೆ ಅಪಾರ ಗೌರವ ಅವರಿಗೆ ಇದೆ. ಅದೆಷ್ಟೋ ಬಾರಿ ಅದನ್ನು ಅವರು ವ್ಯಕ್ತ ಪಡಿಸಿದ್ದಾರೆ. ಇಂದು ಜಗ್ಗೇಶ್ ತಂದೆಯನ್ನು ಕಳೆದುಕೊಂಡ ದಿನವಾಗಿದೆ. ಪ್ರೀತಿಯ ತಂದೆಯನ್ನು ಕಳೆದುಕೊಂಡು ದುಖಃದಲ್ಲಿರುವ ಜಗ್ಗೇಶ್ ತಮ್ಮ ತಂದೆಯ ಬಗ್ಗೆ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

''29/9/2012 ನನ್ನ ಜನ್ಮ ಕೊಟ್ಟ ಪ್ರೀತಿಯ ಅಪ್ಪ ನನ್ನ ಬಿಟ್ಟು ಹೋದ ದಿನ. ಇಂದಿಗೆ 6 ವರ್ಷ. ಅವರ ಆತ್ಮಕ್ಕೆ ಶಾಂತಿ ಕೋರಲು ಮಾಯ ಸಂದ್ರಕ್ಕೆ ಹೋಗುತ್ತಿರುವೆ.. ಇರುವವರೆಗೂ ಸಂಬಂಧ ಹೋದ ಮೇಲೆ ನೆನಪು. ಇದ್ದಾಗ ಹೆತ್ತವರ ಬಾಚಿ ತಬ್ಬಿ ಭಾವನಾತ್ಮಕವಾಗಿ ಬಾಳಿ ಹೋದ ಮೇಲೆ ಕೊರಗಿ ಏನು ಬಂತು..ಪಿತೃದೇವೋಭವ.'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಜಗ್ಗೇಶ್ ಶಿವಲಿಂಗೇಗೌಡ ಹಾಗೂ ನಂಜಮ್ಮ ದಂಪತಿಯ ಮಗನಾಗಿ ಜನಸಿದ್ದರು. ಜಗ್ಗೇಶ್ ದೊಡ್ಡ ನಟನಾಗಬೇಕು ಎಂಬುದು ಅವರ ತಾಯಿಯ ಕನಸಾಗಿತ್ತು. ಅದೇ ರೀತಿ ಜಗ್ಗೇಶ್ ಇಂದು ದೊಡ್ಡ ನಟನಾಗಿದ್ದಾರೆ. ಜೊತೆಗೆ ಒಂದು ದೇವಸ್ಥಾನ ಕಟ್ಟಿಸಬೇಕು ಎಂಬುದು ಸಹ ಅವರ ಆಸೆ ಆಗಿತ್ತು. ಅದೇ ರೀತಿ ಜಗ್ಗೇಶ್ ಮೈಸೂರಿನ ವಿಜಯನಗರದಲ್ಲಿ ಒಂದು ಗುಡಿ ಕಟ್ಟಿಸಿದ್ದಾರೆ.


Click it and Unblock the Notifications











