twitter
    For Quick Alerts
    ALLOW NOTIFICATIONS  
    For Daily Alerts

    ಜಗ್ಗೇಶ್ ಸಹಕಾರದಿಂದ 'ಕೋಟಿಗೊಬ್ಬ-3' ಪೋಲ್ಯಾಂಡ್ ಸಮಸ್ಯೆ ಸುಖಾಂತ್ಯ

    |

    ಚಿತ್ರೀಕರಣಕ್ಕೆಂದು ವಿದೇಶಕ್ಕೆ ತೆರಳಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೋಟಿಗೊಬ್ಬ-3 ಚಿತ್ರತಂಡ ದೊಡ್ಡ ಸಮಸ್ಯೆಗೆ ಸಿಲುಕಿತ್ತು. ಮುಂಬೈ ಏಜೆಂಟ್ ವಶದಲ್ಲಿ ನಿರ್ಮಾಪಕ ಸೂರಪ್ಪ ಬಾಬು ಅಕೌಂಟೆಂಟ್ ಬಿಡಿಸಿಕೊಂಡು ಬರುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.

    ಬಾಂಬೆವಾಲನಿಂದ 'ಕೋಟಿಗೊಬ್ಬ'ನಿಗೆ ಮೋಸ: ನಿರ್ಮಾಪಕರ ಆರೋಪಬಾಂಬೆವಾಲನಿಂದ 'ಕೋಟಿಗೊಬ್ಬ'ನಿಗೆ ಮೋಸ: ನಿರ್ಮಾಪಕರ ಆರೋಪ

    ಪೋಲ್ಯಾಂಡ್ ನಲ್ಲಿ ಕೋಟಿಗೊಬ್ಬ-3 ಚಿತ್ರದ ಚೇಸಿಂಗ್ ದೃಶ್ಯದ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿ ಚಿತ್ರತಂಡ ಪೋಲ್ಯಾಂಡ್ ಗೆ ಪಯಣ ಬೆಳೆಸಿತ್ತು. ಮುಂಬೈ ಮೂಲದ ಏಜೆಂಟ್ ಒಬ್ಬನ ಸಹಾಯದಿಂದ ಪೋಲ್ಯಾಂಡ್ ಗೆ ಹೋದ ಚಿತ್ರತಂಡಕ್ಕೆ ಮುಂಬೈ ವಾಲಾ ಮಾಡಿದ ಮೋಸಕ್ಕೆ ನಿರ್ಮಾಪಕ ಸೂರಪ್ಪ ಬಾಬು ಅಕೌಂಟೆಂಟ್ ಅನ್ನು ಅವರ ವಶದಲ್ಲಿ ಬಿಟ್ಟು ಬರುವಂತೆ ಆಗಿತ್ತು. ಜಗ್ಗೇಶ್ ಸಹಕಾರದಿಂದ ಅಕೌಂಟೆಂಟ್ ಶೇಫ್ ಆಗಿ ವಾಪಸ್ ಆಗಿದ್ದಾರೆ.

    ಅಂದು ಪೋಲ್ಯಾಂಡ್ ನಲ್ಲಿ ಆಗಿದ್ದೇನು?

    ಅಂದು ಪೋಲ್ಯಾಂಡ್ ನಲ್ಲಿ ಆಗಿದ್ದೇನು?

    ಪೋಲ್ಯಾಂಡ್ ನಲ್ಲಿ ಚಿತ್ರೀಕರಣ ಮಾಡುವ ಪ್ಲಾನ್ ಮಾಡಿದ ಚಿತ್ರತಂಡ ಚಿತ್ರೀಕರಣ ವ್ಯವಸ್ಥೆ ಮಾಡುವ ಏಜನ್ಸಿಗಳ ಮೊರೆಹೋಗಿದ್ದಾರೆ. ಮುಂಬೈ ಮೂಲದ ಅಜಯ್ ಪಾಲ್ ಹಾಗೂ ಸಂಜಯ್ ಪಾಲ್ ಅವರ ಕಂಪನಿ ಪರಿಚಯವಾಗಿ, ಅವರ ಮೂಲಕ ಲೊಕೇಶನ್ ಫಿಕ್ಸ್ ಮಾಡಲು ನಿರ್ಮಾಪಕ ಸೂರಪ್ಪ ಬಾಬು, ನಿರ್ದೇಶಕ ಶಿವಕಾರ್ತಿಕ್, ಕಲಾ ನಿರ್ದೇಶಕ ಅರುಣ್ ಸಾಗರ್ ಸೇರಿದಂತೆ ಐದು ಮಂದಿ ಪೋಲ್ಯಾಂಡ್ ಹೋಗಿ 11 ದಿನಗಳ ಚಿತ್ರೀಕರಣಕ್ಕೆ ರೂಪುರೇಷೆ ರೆಡಿ ಮಾಡಿಕೊಂಡು ಬಂದಿದ್ದಾರೆ.

    'ಬಿಗ್ ಬಾಸ್'ನಲ್ಲಿ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್'ಬಿಗ್ ಬಾಸ್'ನಲ್ಲಿ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್

    2 ಕೋಟಿಗೆ ಬೇಡಿಕೆ ಇಟ್ಟ ಕೋ ಆರ್ಡಿನೇಟರ್

    2 ಕೋಟಿಗೆ ಬೇಡಿಕೆ ಇಟ್ಟ ಕೋ ಆರ್ಡಿನೇಟರ್

    11 ದಿನಕ್ಕೆ 2.36 ಕೋಟಿ ವೆಚ್ಚವಾಗಲಿದೆ ಎಂದು ಮಾತುಕತೆ ಮಾಡಿಕೊಂಡು ಮುಂಗಡವಾಗಿ ಚಿತ್ರತಂಡ 50 ಲಕ್ಷ ನೀಡಿದೆ. ನಂತರ ನಾಯಕ ಸುದೀಪ್ ಸೇರಿದಂತೆ 54 ಮಂದಿ ತಂಡ ಪೋಲ್ಯಾಂಡ್ ಗೆ ಹಾರಿದೆ. ಚಿತ್ರೀಕರಣ ಶುರುವಾದ ಮೇಲೆ 2 ಕೋಟಿ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಚಿತ್ರತಂಡ ಸಂಪೂರ್ಣ ಲೆಕ್ಕಕೇಳಿದೆ. ಲೆಕ್ಕಾಚಾರ ತಡವಾಗುತ್ತೆ ಅಂತ 54 ಮಂದಿಯನ್ನು ಭಾರತಕ್ಕೆ ವಾಪಸ್ ಕರೆಸಿಕೊಂಡಿದ್ದಾರೆ.

    ಅಕೌಂಟೆಂಟ್ ಬಿಟ್ಟು ಬಂದ ಚಿತ್ರತಂಡ

    ಅಕೌಂಟೆಂಟ್ ಬಿಟ್ಟು ಬಂದ ಚಿತ್ರತಂಡ

    ಚಿತ್ರತಂಡ ಕೇಳಿದ ಲೆಕ್ಕಕೊಡಲಿಕ್ಕೆ ಕೋ ಆರ್ಡಿನೇಟರ್ ಇನ್ನೂ ಐದು ದಿನಗಳು ಆಗುತ್ತೆ ಎಂಬ ಕಾರಣಕ್ಕೆ ಅಕೌಂಟೆಂಟ್ ಅನ್ನು ಅಲ್ಲಿಯೆ ಬಿಟ್ಟು ಬಂದಿದ್ದಾರೆ. ಅಕೌಂಟೆಂಟ್ ಲೆಕ್ಕ ಪರಿಶೀಲನೆ ಮಾಡಿದ ನಂತರ ಅವರೇ ಚಿತ್ರತಂಡಕ್ಕೆ 95 ಲಕ್ಷ ಹಣ ಕೊಡಬೇಕು ಎನ್ನುವುದು ಗೊತ್ತಾಗಿದೆ. ಈ ಬಗ್ಗೆ ಅಜಯ್ ಪಾಲ್‌ ಹಾಗೂ ಸಂಜಯ್‌ ಪಾಲ್‌ ಕೇಳಿದಾಗ 95 ಲಕ್ಷದಿಂದ 65 ಲಕ್ಷಕ್ಕೆ ಬಂದರು. ಕೊನೆಗೆ ಅಕೌಂಟೆಂಟ್‌ ಪಾಸ್‌ಪೋರ್ಟ್‌ ಕೊಡದೆ ಆತನನ್ನು ಬಂಧಿಸಿದ್ದಾರೆ. ನಂತರ ಸೂರಪ್ಪ ಬಾಬು ಬೆಂಗಳೂರು ಪೊಲೀಸ್ ಕಮಿಷನರ್ ಬಳಿ ಸೂರಪ್ಪ ಬಾಬು ದೂರು ನೀಡಿದ್ದಾರೆ.

    ಸುದೀಪ್ ವಿವಾಹ ವಾರ್ಷಿಕೋತ್ಸವ ದಿನವೆ ರಿಲೀಸ್ ಆಗಿತ್ತು 'ದಿ ವಿಲನ್'ಸುದೀಪ್ ವಿವಾಹ ವಾರ್ಷಿಕೋತ್ಸವ ದಿನವೆ ರಿಲೀಸ್ ಆಗಿತ್ತು 'ದಿ ವಿಲನ್'

    ಜಗ್ಗೇಶ್ ವಿಷಯ ತಿಳಿಸಿದ ಸೂರಪ್ಪ ಬಾಬು

    ಜಗ್ಗೇಶ್ ವಿಷಯ ತಿಳಿಸಿದ ಸೂರಪ್ಪ ಬಾಬು

    ಈ ವಿಷಯವನ್ನು ನಟ ಜಗ್ಗೇಶ್ ಬಳಿ ಹೇಳಿದ್ದಾರೆ ನಿರ್ಮಾಪಕ ಸೂರಪ್ಪ ಬಾಬು. ಜಗ್ಗೇಶ್ ನೆರವಿನಿಂದ ಕೇಂದ್ರ ಸಚಿವ ಡಿ ಸದಾನಂದ ಗೌಡ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲಿಂದ ಪೊಲೀಸ್‌ ಕಮಿಷನರ್‌ ಗೆ ದೂರು ನೀಡಲಾಯಿತು. ಪ್ರಕರಣ ದಾಖಲಿಸಿಕೊಂಡು ಮುಂಬೈನಲ್ಲಿದ್ದ ಅಜಯ್ ಪಾಲ್ ಮತ್ತು ಸಂಜಯ್ ಪಾಲ್ ಕಂಪನಿಗೆ ನೋಟೀಸ್ ನೀಡಿದರು. ನೋಟೀಸ್ ಹೋಗುತ್ತಿದ್ದಂತೆ ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಅಕೌಂಟೆಂಟ್ ಅನ್ನು ಬಿಡುಗಡೆ ಮಾಡಿದ್ದಾರೆ.

    English summary
    Kannada actor Jaggesh help to Kotigobba-3 movie team. Soorappa babu Accountant return to india.
    Friday, October 18, 2019, 18:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X