For Quick Alerts
  ALLOW NOTIFICATIONS  
  For Daily Alerts

  In pics: ಜಗ್ಗೇಶ್ ಮನೆಯೊಳಗೆ ಬದಲಾಯ್ತು ವಿನ್ಯಾಸ

  By Bharath Kumar
  |
  ಬದಲಾಯ್ತು ಜಗ್ಗೇಶ್ ಮನೆ ವಿನ್ಯಾಸ..!! | Filmibeat Kannada

  ಸಿನಿಮಾ ತಾರೆಯರ ಮನೆ ಹೇಗಿರುತ್ತೆ ಎಂದು ನೋಡುವ ಬಯಕೆ ಅನೇಕ ಅಭಿಮಾನಿಗಳದ್ದು. ಸ್ಟಾರ್ ಗಳ ಮನೆಯಲ್ಲಿ ಏನಿರುತ್ತೆ, ಏನಿರಲ್ಲ, ಎಂಬ ಕುತೂಹಲವೂ ಇದ್ದೇ ಇರುತ್ತೆ. ಆದ್ರೆ, ಅವರ ಮನೆಗೆ ಹೋಗುವ ಅವಕಾಶ ಎಲ್ಲರಿಗೂ ಸಿಗಲ್ಲ.

  ಇದೀಗ, ನವರಸ ನಾಯಕ ಜಗ್ಗೇಶ್ ಅವರ ಮನೆಯನ್ನ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ. ಮಲ್ಲೇಶ್ವರಂನಲ್ಲಿರುವ ಜಗ್ಗೇಶ್ ಅವರ ಮನೆ ಒಳಗೆ ಹೊಸದಾಗಿ ವಿನ್ಯಾಸ ಮಾಡಲಾಗಿದೆ. ಅದರ ಚಿತ್ರಗಳನ್ನ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

  ಜಗ್ಗೇಶ್ ಬಗ್ಗೆ ಎನ್.ಟಿ.ಆರ್ ನುಡಿದಿದ್ದ ಭವಿಷ್ಯ ನಿಜವಾಯ್ತು.! ಜಗ್ಗೇಶ್ ಬಗ್ಗೆ ಎನ್.ಟಿ.ಆರ್ ನುಡಿದಿದ್ದ ಭವಿಷ್ಯ ನಿಜವಾಯ್ತು.!

  ಮನೆಯ ಹಾಲ್, ಥಿಯೇಟರ್ ಹಾಲ್, ಡೈನಿಂಗ್ ಹಾಲ್ ಸೇರಿದಂತೆ ಕೆಲವು ಫೋಟೋಗಳು ಸೆಳೆಯುತ್ತಿದೆ. ಅದರಲ್ಲೂ ಜಗ್ಗೇಶ್ ಅವರ ಮನೆಯ ಗೋಡೆಯಲ್ಲಿ ಹಾಕಲಾಗಿರುವ ಶ್ರೀ ರಾಘವೇಂದ್ರಸ್ವಾಮಿಯ ಫೋಟೋ ತುಂಬಾ ಆಕರ್ಷಣೆಯಾಗಿದೆ.

  ಇನ್ನು ಈ ಹೊಸದಾಗಿ ವಿನ್ಯಾಸ ಮಾಡಲು ಕಾರಣ ಜಗ್ಗೇಶ್ ಅವರ ಪತ್ನಿ ಪರಿಮಳ ಜಗ್ಗೇಶ್. ಇದನ್ನ ಸ್ವತಃ ಅವರೇ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ''ಪರಿಮಳನ ಚಿಂತನೆಯಿಂದ ಬದಲಾದ ನಮ್ಮ ಮನೆಯ ಒಳಾಂಗಣ..ನನಗೆ ನನ್ನ ಮನೆಯೇ ಮಂತ್ರಾಲಯ..'' ಎಂದು ಟ್ವೀಟ್ ಮಾಡಿದ್ದಾರೆ.

  ಸದ್ಯ ಜಗ್ಗೇಶ್ ಅವರು '8 ಎಂಎಂ' ಚಿತ್ರದಲ್ಲಿ ನಟಿಸಿದ್ದಾರೆ. ಜೀ ಕನ್ನಡದಲ್ಲಿ 'ಕಾಮಿಡಿ ಕಿಲಾಡಿಗಳು-2' ಕಾರ್ಯಕ್ರಮದ ತೀರ್ಪುಗಾರಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

  English summary
  kannada actor jaggesh has taken his twitter account to share inside pictures of his home.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X