'ಜೀವನದಲ್ಲಿ ಉತ್ತಮ ಪ್ರಯಾಣಿಕ' ಯಾರೆಂದು ಹೇಳಿದ ನಟ ಜಗ್ಗೇಶ್

ಜೀವನದಲ್ಲಿ ಎಲ್ಲರೂ ಉತ್ತಮ ಪ್ರಯಾಣಿಕ ಆಗುವುದಿಲ್ಲ, ತಾವು ನಡೆದು ಹೋಗುವ ಹಾದಿಯಲ್ಲಿ ಸ್ನೇಹಿತರು, ಶತ್ರುಗಳು, ಹಿರಿಯರು, ಕಿರಿಯರು ಎಲ್ಲರೂ ಸಿಗುತ್ತಾರೆ. ಅವರನ್ನು ಹೇಗೆ ನಿಭಾಯಿಸಿಕೊಂಡು ಹೋಗುತ್ತಾನೆ ಎನ್ನುವುದು 'ಅವನೊಬ್ಬ ಉತ್ತಮ ಪ್ರಯಾಣಿಕ' ಎಂದು ನಿರ್ಧರಿಸುತ್ತದೆ.

Recommended Video

ಜಗ್ಗೇಶ್ ಪ್ರಕಾರ ಜೀವನದ ಉತ್ತಮ ಪ್ರಯಾಣಿಕನಾಗೋದು ಹೀಗೆ | Jaggesh | Filmibeat Kannada

ಜೀವನದಲ್ಲಿ ಉತ್ತಮ ಪ್ರಯಾಣಿಕನಾಗಬೇಕು ಅಂದ್ರೆ ಹೇಗಿರಬೇಕು ಎಂಬುದರ ಕುರಿತು ನಟ ಜಗ್ಗೇಶ್ ಇನ್ಸ್ಟಾಗ್ರಾಂನಲ್ಲಿ ವಿವರವಾಗಿ ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ.

''ವಿಶ್ವ ಎಂಬ ಚಲಿಸುವ ಗಾಡಿಯಲ್ಲಿ ಮನುಕುಲದ ಸಮಸ್ತರು ಪ್ರಯಾಣಿಕರು!

ಈ ಪ್ರಯಾಣದಲ್ಲಿ ಯಾರು ಸ್ನೇಹಿತರಲ್ಲಾ!

ಯಾರು ಶತೃಗಳು ಅಲ್ಲಾ!

ಕೆಲವರು ನಗುತ್ತ ಮಾತಾಡಿಸುತ್ತಾರೆ!

Kannada Actor Jaggesh instagram Post about Life Journey

ಕೆಲವರು ನೋಡಿಯು ನೋಡದಂತೆ ಅವರ ಬಗ್ಗೆ ಮಾತ್ರ ಚಿಂತಿಸಿ ಅನ್ಯರ ತಳ್ಳಿ ಜಾಗ ಹಿಡಿದು ಕೂರುತ್ತಾರೆ!

ಕೆಲವರು ತಮ್ಮ ಸಂತೋಷಕ್ಕಾಗಿ ಜೋರಾಗಿ ಕೂಗಾಡುತ್ತಾ ಆನಂದಿಸಿ ಅನ್ಯರಿಗೆ ನೋವುಂಟು ಮಾಡುತ್ತಾರೆ!

ಕೆಲವರು ತಮ್ಮ ಸಂತೋಷ ನೆಮ್ಮದಿಗಾಗಿ ಅನ್ಯರ ಬೈಯುತ್ತ ಗೆದ್ದಂತೆ ಬೀಗಿ ಪ್ರಯಾಣಿಸುತ್ತಾರೆ!

ಕೆಲವರು ಗುರು ಹಿರಿಯರ ಕಂಡಕ್ಷಣ ಅವರ ಆಸನ ಹಿರಿಯರಿಗೆ ಬಿಟ್ಟುಕೊಟ್ಟು

ಸಾರ್ಥಕ ಭಾವದಿಂದ ಪ್ರಯಾಣ ಆನಂದಿಸುತ್ತಾರೆ!

ಕೆಲವರು ಪ್ರಯಾಣದಲ್ಲಿ ಸಣ್ಣ ಚಿಲ್ಲರೆ ಗಲಾಟೆಯಿಂದ ಹಲ್ಲೆ ಕೊಲೆಯವರೆಗು ಹೋಗಿ ಸಾಮರಸ್ಯ ಹಾಳು ಮಾಡಿ ಅವರು ಹಾಳಾಗುತ್ತಾರೆ!

ಅದರಲ್ಲಿ ಕೆಲವರು ಮಾತ್ರ ಈ ಪ್ರಯಾಣ ಜಂಜಾಟ ಗಮನಿಸದೆ ತಮ್ಮಲ್ಲೆ ತಾವು ಲೀನವಾಗಿ ಕೆಸರಂತ ಈ ಪ್ರಯಾಣದಲ್ಲಿ ಅದಕ್ಕಂಟದೆ ತಾವರೆ ಹೂವಿನಂತೆ ಮೇಲೆಬಂದು ಪ್ರಯಾಣ ಆನಂದವಾಗಿ ಮುಗಿಸಿದ ಮೇಲೆಯು ಮನಸಲ್ಲಿ ಉಳಿಯುತ್ತಾರೆ! ಇದ ಹೇಳಲು

ಕಾರಣ ಈ ಬದುಕಿನ ಪ್ರಯಾಣದ ಪ್ರಕ್ರಿಯೆ ಕೂಡಿಕಳೆದಾಗ ಉಳಿವುದು ಒಂದೆ "ಸತ್ ಚಿತ್ ಆನಂದ "ಸಚ್ಚಿದಾನಂದ ರೂಪ! ಅದು ಶಿವನ ಆನಂದ ಸ್ಥಿತಿ! ಇದ ಅರಿತು ಜೀವನ ಪ್ರಯಾಣ ಮಾಡಿದವ ಮಾತ್ರ ಉತ್ತಮ ಪ್ರಯಾಣಿಕ!'' ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ ನಟ ಜಗ್ಗೇಶ್ 'ತೋತಾಪುರಿ' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ವಿಜಯ ಪ್ರಸಾದ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಅದಿತಿ ಪ್ರಭುದೇವ, ಸುಮನ್ ರಂಗನಾಥ್, ದತ್ತಣ್ಣ ಸೇರಿದಂತೆ ಹಲವರು ನಟಿಸಿದ್ದಾರೆ.

More from Filmibeat

English summary
Kannada Actor Jaggesh instagram Post about Life Journey.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X