Don't Miss!
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- News ಬಿಜೆಪಿ ಭದ್ರಕೋಟೆಯಲ್ಲಿ ಶೋಭಾ ಕರಂದ್ಲಾಜೆಗೆ ಕಠಿಣ ಸವಾಲು!
- Technology ಜಿಯೋ ನಿವ್ವಳ ಲಾಭದಲ್ಲಿ ಭರ್ಜರಿ ಹೆಚ್ಚಳ: ಇಲ್ಲಿದೆ ವಿವರ
- Lifestyle ಉಪ್ಪು ನೀರಿನಿಂದ ಮುಖ ತೊಳೆದರೆ ಆಗುವ ಲಾಭವೇನು.? ಇದರ ಅನಾನುಕೂಲವೇನು ಗೊತ್ತಾ?
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಮ್ಮನಿಲ್ಲದೆ 25 ವರ್ಷ ಕಳೆದ ನಂಜಮ್ಮನ ಮಗ ಜಗ್ಗೇಶ್
ನಟ ಜಗ್ಗೇಶ್ ತಾಯಿಗೆ ತಕ್ಕ ಮಗ. ಅಮ್ಮನ ಪ್ರೀತಿಯ ಮಗನಾಗಿದ್ದ ಅವರು ಇಂದು ತಾಯಿಯ ಎಲ್ಲ ಆಸೆಯನ್ನು ಪೂರ್ತಿ ಮಾಡಿದ್ದಾರೆ. ಆದರೆ ಇಂದು ಅವುಗಳನ್ನು ನೋಡಲು ಅವರ ತಾಯಿಯೇ ಇಲ್ಲ.
ಜಗ್ಗೇಶ್ ತಮ್ಮ ತಾಯಿ ನಂಜಮ್ಮರನ್ನು ಕಳೆದು ಕೊಂಡು 25 ವರ್ಷ ಕಳೆದಿದೆ. ಈ ಸಂಗತಿಯನ್ನು ಅವರೇ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಇಡೀ ಕುಟುಂಬ ಜೊತೆಗಿರುವ ಫೋಟೋ ಹಾಕಿರುವ ಅವರು ''ಅಮ್ಮ ನಮ್ಮ ಅಗಲಿ 25 ವರ್ಷವಾಯಿತು. ಅವಳು ಜನ್ಮಕೊಟ್ಟ ಎಲ್ಲಾ ಕುಡಿಗಳು ಒಟ್ಟು ಸೇರಿ ಅವಳ ನೆನೆದು ಆರಾಧಿಸಿದೆವು.'' ಎಂದು ಬರೆದುಕೊಂಡಿದ್ದಾರೆ.
ಕಲಾಕುಂಚದಲ್ಲಿ ಅರಳಿತ್ತು ಜಗ್ಗೇಶ್ ತಾಯಿಯ ಬಹುದೊಡ್ಡ ಕನಸು
ಜಗ್ಗೇಶ್ ದೊಡ್ಡ ನಟನಾಗಬೇಕು ಎಂಬುದು ಅವರ ತಾಯಿಯ ಕನಸಾಗಿತ್ತು. ಅದೇ ರೀತಿ ಜಗ್ಗೇಶ್ ಇಂದು ದೊಡ್ಡ ನಟನಾಗಿದ್ದಾರೆ. ಜೊತೆಗೆ ಒಂದು ದೇವಸ್ಥಾನ ಕಟ್ಟಿಸಬೇಕು ಎಂಬುದು ಸಹ ಅವರ ಆಸೆ ಆಗಿತ್ತು. ಅದೇ ರೀತಿ ಜಗ್ಗೇಶ್ ಮೈಸೂರಿನ ವಿಜಯನಗರದಲ್ಲಿ ಒಂದು ಗುಡಿ ಕಟ್ಟಿಸಿದ್ದಾರೆ.
#ಅಮ್ಮ ನಮ್ಮ ಅಗಲಿ 25ವರ್ಷವಾಯಿತು..ಅವಳು ಜನ್ಮಕೊಟ್ಟ ಎಲ್ಲಾ ಕುಡಿಗಳು ಒಟ್ಟು ಸೇರಿ ಅವಳ ನೆನೆದು ಆರಾಧಿಸಿದೆವು..
— ನವರಸನಾಯಕ ಜಗ್ಗೇಶ್ (@Jaggesh2) June 11, 2018
ಅಮ್ಮನಲ್ಲವೆ ನಮ್ಮ ನಿಜದೇವರು..#ಮಾತೃದೇವೋಭವ. pic.twitter.com/QQKL4i6SG6
ಅಂದಹಾಗೆ, ''ತಾಯಿಮಡಿಲಲ್ಲಿ ಇರುವವನೆ ಶ್ರೇಷ್ಠ. ತಾಯಿ ಇರುವ ಅದೃಷ್ಟವಂತರೆ ಪ್ರೀತಿಸಿ ಆ ದೇವರ ನಿರಂತರ. ಒಮ್ಮೆ ಕಳೆದುಕೊಂಡರೆ ಸಿಗೊಲ್ಲಾ ಮತ್ತೆ.'' ಎಂದು ಹೇಳಿರುವ ಜಗ್ಗೇಶ್ ನಿಜಕ್ಕೂ ತಾಯಿಗೆ ತಕ್ಕ ಮಗ.