For Quick Alerts
  ALLOW NOTIFICATIONS  
  For Daily Alerts

  ತಮ್ಮ 'ರಿಯಲ್ ಲವ್ ಸ್ಟೋರಿ' ಬಯಲು ಮಾಡಿದ ನಟ ಜಗ್ಗೇಶ್!

  By Harshitha
  |

  ಇಂದು ಮಾರ್ಚ್ 17, 'ನವರಸ ನಾಯಕ' ಜಗ್ಗೇಶ್ ರವರಿಗೆ 53ನೇ ವಸಂತಕ್ಕೆ ಕಾಲಿಟ್ಟ ಸಂಭ್ರಮ. ಇನ್ನೈದು ದಿನಗಳಲ್ಲಿ, ಅಂದ್ರೆ ಮಾರ್ಚ್ 22 ರಂದು ಜಗ್ಗೇಶ್ ರವರ ವಿವಾಹ ವಾರ್ಷಿಕೋತ್ಸವ. ಪರಿಮಳಾ ರವರನ್ನ ಜಗ್ಗೇಶ್ ಮದುವೆ ಆಗಿ 32 ವರ್ಷ ತುಂಬಲಿದೆ. ಈ ಡಬ್ಕಿ ಡಬಲ್ ಸಂಭ್ರಮದಲ್ಲಿರುವ ನಟ ಜಗ್ಗೇಶ್, ಮೂರು ದಶಕಗಳ ಹಿಂದಿನ ಫ್ಯ್ಲಾಶ್ ಬ್ಯಾಕ್ ಗೆ ತೆರಳಿದ್ದಾರೆ.

  ಶ್ರೀರಾಮಪುರದ ಪ್ರತಿಷ್ಠಿತ ಡೆಕ್ಕನ್ ಶಾಲೆಯ ಪ್ರಿನ್ಸಿಪಾಲ್ ರ ಮಗಳು ಪರಿಮಳಾ ಜೊತೆ ಪ್ರಣಯ ಗೀತೆ ಆರಂಭಿಸಿದ ರೋಮ್ಯಾಂಟಿಕ್ ಸ್ಟೋರಿಯನ್ನ ನಟ ಜಗ್ಗೇಶ್ ಬಿಚ್ಚಿಟ್ಟಿದ್ದಾರೆ.

  ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಮತ್ತೆ ಸಕ್ರಿಯರಾಗಿರುವ ನಟ ಜಗ್ಗೇಶ್ ತಮ್ಮ ಪ್ರೇಮ್ ಕಹಾನಿ ಬಗ್ಗೆ ಸುದೀರ್ಘ ಸ್ಟೇಟಸ್ ಹಾಕಿಕೊಂಡಿದ್ದಾರೆ. [ನವರಸ ನಾಯಕ ಜಗ್ಗೇಶ್ ಬಗ್ಗೆ ಅಪಹಾಸ್ಯ ಮಾಡಿದವರು ಯಾರು?]

  ತಮ್ಮ ಲವ್ ಸ್ಟೋರಿ ಬಗ್ಗೆ ಹೇಳುತ್ತಾ ಇಂದಿನ ಪೀಳಿಗೆಗೆ ಕಿವಿ ಮಾತು ಹೇಳಿದ್ದಾರೆ ನಟ ಜಗ್ಗೇಶ್. ಅದೆಲ್ಲವನ್ನೂ ಜಗ್ಗೇಶ್ ರವರ ಪದಗಳಲ್ಲೇ ಓದಿ...ಕೆಳಗಿರುವ ಸ್ಲೈಡ್ ಗಳಲ್ಲಿ....

  ಶ್ರೀರಾಮಪುರದ ಪರಿಚಯ

  ಶ್ರೀರಾಮಪುರದ ಪರಿಚಯ

  ''ಶ್ರೀರಾಮಪುರದ 7ನೇ ಮೇನ್ 1 ಮತ್ತು 2ನೇ ಕ್ರಾಸ್ ಮಧ್ಯೆ ಅಣ್ಣಯ್ಯಪ್ಪನ ಬ್ಲಾಕ್ ಮೇಕಿಂಗ್ ಅಂಗಡಿ, ಅದರಲ್ಲಿ ಸತ್ತವರ ಫೋಟೋ ಬ್ಲಾಕ್ಮಾಡಿ ತಿಥಿಗೆ ನೀಡುವ ಜಾಗ... ಆ ಜಾಗವೆ ನಾನು ಸಿನಿಮಾ, ಜೋತಿಷ್ಯ, ಪ್ರೀತಿಪ್ರೇಮ, ಜೀವನ, ಶ್ರೀರಾಮಪುರದ ಕರಿಯ, ಕಿಟ್ಟಿ, ಶಿವ, ಮಾಸ್ತಿ, ಆರ್ ಬೆರಳು ಬಾಬು, ಕೊತ್ವಾಲ್ ರಾಮಚಂದ್ರ ಸಂಗಡ ಮಾತಾಡಿ ಸ್ನೇಹವಾದ ಜಾಗ... ಇಲ್ಲಿ ಯಾರೆ ಕೂತರು ಅವರೆಲ್ಲಾ ಪರೋಡಿಗಳು ಎಂದು ನಿರ್ಣಯವಾಗುತಿತ್ತು ಆ ಕಾಲ... ಅಂತ ಯೂವ್ನಿವರ್ಸಿಟಿಯಲ್ಲಿ ದಿನ miss ಮಾಡದೆ attendance ಬೀಳುತ್ತಿತ್ತು'' - ಜಗ್ಗೇಶ್ [ಜಗ್ಗೇಶ್'ರ ನಡೆ ಅವರ ಬಂಧುಗಳಿಗೆ ಹೇಸಿಗೆ ಉಂಟುಮಾಡಿತ್ತಂತೆ]

  ಅಲ್ಲಿ ಜಗ್ಗೇಶ್ ಗೆ ಪರಿಚಯರಾದವರು

  ಅಲ್ಲಿ ಜಗ್ಗೇಶ್ ಗೆ ಪರಿಚಯರಾದವರು

  ''ಆ ಬಳಗದಲ್ಲಿ ಇತ್ತೀಚೆಗೆ ಕಾಲವಾದ ಸ್ನೇಹಿತ ರವಿ, USA ಲಿ ಇಂದು ಉತ್ತುಂಗದಲ್ಲಿ ಇರುವ ಚಂದ್ರಶೇಖರ್ ಆರಾಧ್ಯ, ಸಿನಿಮಾ ಛಾಯಾಗ್ರಾಹಕ ಜೆಜಿ ಕೃಷ್ಣ..ದಿವಂಗತ ನಿರ್ದೇಶಕ ರಾಜ್ ಕಿಶೋರ್ ಪರಿಚಿತರಾದರು'' - ಜಗ್ಗೇಶ್

  ಪರಿಮಳಾ ರನ್ನ ಮೊದಲು ನೋಡಿದ್ದು....

  ಪರಿಮಳಾ ರನ್ನ ಮೊದಲು ನೋಡಿದ್ದು....

  ''ಮಠಮಠ ಮಧ್ಯಾಹ್ನ ನನ್ನ ಕಣ್ಣಿಗೆ ಬಿದ್ದವಳೇ ಕುಮಾರಿ ಪರಿಮಳಾ ಉರುಪ್ ಇಂದಿನ ಶ್ರೀಮತಿ ಪರಿಮಳಾ ಜಗ್ಗೇಶ್'' - ಜಗ್ಗೇಶ್

  ಆಗಿನ್ನೂ ಆಕೆ 9th ಕ್ಲಾಸ್

  ಆಗಿನ್ನೂ ಆಕೆ 9th ಕ್ಲಾಸ್

  ''ಪರಿಮಳ 9ನೇ ತರಗತಿಯ ಹುಡುಗಿ ಹಾಗು ಶ್ರೀರಾಮಪುರದ ಪ್ರತಿಷ್ಠಿತ ಡೆಕ್ಕನ್ ಶಾಲೆಯ ಪ್ರಿನ್ಸಿಪಾಲರ ಮಗಳು'' - ಜಗ್ಗೇಶ್

  ಸಿನಿಮಾ-ಪಾರ್ಕ್ ಸುತ್ತಲಿಲ್ಲ!

  ಸಿನಿಮಾ-ಪಾರ್ಕ್ ಸುತ್ತಲಿಲ್ಲ!

  ''ಸಾಮಾನ್ಯ ನೋಟ ಇಷ್ಟು ದೂರ ಬೆಳೆಯುತ್ತೆ ಅಂತ ಊಹಿಸಿರಲಿಲ್ಲ..ಅವಳ ಸ್ನೇಹ ಆದಾಗ ಸಿನಿಮಾ ಪಾರ್ಕ್ ಹೋಗದೆ ದೇವಸ್ಥಾನ ಸುತ್ತುತ್ತಿದ್ದ ನಾವು ಮಾತಾಡುತ್ತಿದ್ದದ್ದು ಎಲ್ಲಾ future ಮಾತ್ರ present ಅಲ್ಲವೆ ಅಲ್ಲಾ'' - ಜಗ್ಗೇಶ್

  ಸ್ನೇಹಿತರು ರೇಗಿಸ್ತಾಯಿದ್ದದ್ದು...

  ಸ್ನೇಹಿತರು ರೇಗಿಸ್ತಾಯಿದ್ದದ್ದು...

  ''ಸ್ನೇಹಿರೆಲ್ಲಾ ಮಚ್ಚಾ ಡೌನ ಸಿನಿಮಾಗೆ ಕರ್ಕೊಂಡು ಹೋಗೋದ್ ಬಿಟ್ಟು ದೇವಸ್ಥಾನ ಸತ್ತುಸ್ತಿಯಲ್ಲೊ ದರ್ವೇಸಿ ಅಂತ ರೇಗಿಸುತ್ತಿದ್ದರು. ಅದೇನೊ ನನಗೆ ಅದೆ ಚಂದ ಅನ್ನಿಸುತ್ತಿತ್ತು.'' - ಜಗ್ಗೇಶ್

  ಸೀರೆಯುಟ್ಟು ಬರ್ತಿದ್ದ ಪರಿಮಳಾ

  ಸೀರೆಯುಟ್ಟು ಬರ್ತಿದ್ದ ಪರಿಮಳಾ

  ಅಂದು ಜಗ್ಗೇಶ್ ರನ್ನ ನೋಡಲು, 10ನೇ ಕ್ಲಾಸ್ ನಲ್ಲೇ ಸೀರೆಯುಟ್ಟು ಬರ್ತಿದ್ರಂತೆ ಪರಿಮಳಾ.

  ನಾವಿಬ್ಬರು ಚಿಕ್ಕವರು; ನಮಗೊಬ್ಬ ಪಾಪು

  ನಾವಿಬ್ಬರು ಚಿಕ್ಕವರು; ನಮಗೊಬ್ಬ ಪಾಪು

  ''1987, ಜನವರಿ 5...ಗುರುರಾಜ ಹುಟ್ಟಿದ್ದು. ಆಗ ನನಗೆ ಸಿಕ್ಕಿದ್ದು ತಂದೆಯ ಸ್ಥಾನ. ಆಗ ನನಗೆ 24 ವರ್ಷ. ಪರಿಮಳಗೆ 17 ವರ್ಷ. ನಾವಿಬ್ಬರೂ ಚಿಕ್ಕವರು, ನಮಗೊಬ್ಬ ಪಾಪು. ಕೆಲಸವಿಲ್ಲ, ಹಣವಿಲ್ಲ!! ಶತೃಗಳಿಗೂ ಬೇಡ ಆ ದಿನ. 250ರೂಪಾಯಿಯಲ್ಲಿ ಜೀವನ ಮಾಡುತ್ತಿದ್ದ ದಿನಗಳು... ದೇವರಲ್ಲಿ ನನ್ನ ಪ್ರಾರ್ಥನೆ 30 ದಿನಕ್ಕಾಗುವ ದುಡ್ಡು ಕೊಡು ಎಂದು. ಕಾರಣ ನನಗೆ ದೇವರ ಮೇಲೆ ಅಷ್ಟು ನಂಬಿಕೆ... ನನಗರಿಯದೆ ಕಳೆದವು ದಿನಗಳು..250 ಪಕ್ಕದಲ್ಲಿ ಅನೇಕ ಶೂನ್ಯ ಸೇರಿ ಬೆಳೆದು ಕನಸಿನ ಕಲ್ಪನೆಯೆಲ್ಲಾ ನನಸಾಯಿತು'' - ಜಗ್ಗೇಶ್

  ನಟ ಜಗ್ಗೇಶ್ ಫ್ಲ್ಯಾಶ್ ಬ್ಯಾಕ್ ಗೆ ಹೋಗಲು ಕಾರಣ...

  ನಟ ಜಗ್ಗೇಶ್ ಫ್ಲ್ಯಾಶ್ ಬ್ಯಾಕ್ ಗೆ ಹೋಗಲು ಕಾರಣ...

  ''ಇದೆಲ್ಲಾ ನೆನಪಾಗಲು ಕಾರಣ ಬೆಳಿಗ್ಗೆ ಎಂ.ಇ.ಎಸ್ ಕಾಲೇಜು ಮುಂದೆ ಹೋಗಬೇಕಾದರೆ ಒಬ್ಬ ಮುತ್ತೊಬ್ಬನಿಗೆ ನೋಡು ಬಾಸ್ ಇನ್ಮೇಲೆ ಇವ್ಳನ್ನ ನೋಡ್ಬೇಡ. ಇನ್ಮೇಲೆ ಇವ್ಳು ನನ್ ಡೌ ಅಂದ. ಅದಕ್ಕೆ ಆ ಹುಡುಗಿ ನೀವಿಬ್ರು decide ಮಾಡ್ಕೂಳಿಪ್ಪ..ನಮಗ್ ಆ ರಿಸ್ಕ್ ಬೇಡ ಅನ್ನುತ್ತಿದ್ದಳು. ವಿಷಯ ವಿಕೋಪಕ್ಕೆ ಹೋಗೋ ಸ್ಥಿತಿ ಇತ್ತು ಅಷ್ಟರಲ್ಲಿ ನಾನು 'ಹೇ' ಎಂದು ಗದರಿಸಿದೆ. ನನ್ನನ್ನು ನೋಡಿ ಎಲ್ಲರೂ ಬೆದರಿದರು. ನಾನು ಆಗ, ಅಪ್ಪ-ಅಮ್ಮ ಬೆವರು ಸುರಿಸಿ ದುಡಿದು ಓದಕ್ಕೆ ಕಳಿಸಿದರೆ ನಿಮಗ್ ಇದು ಬೇಕಿತ್ತಾ. ಅಲ್ಲಮ್ಮ ಇಬ್ಬರಿಗೆ ತಂದಿಕ್ಕಿ ಈ ರೀತಿ ಇಷ್ಟು ಚಿಕ್ಕ ವಯಸ್ಸಿಗೇ ಆಡ್ತೀಯಲ್ಲಾ. do u know whats life ಅಂತ ಸುಮ್ಮನೆ ಆರಕ್ಷಕರ ಹತ್ತಿರ ಮೂಬೈಲ್ ನಲ್ಲಿ ಮಾತಾಡೊ ತರ act ಮಾಡಿ ಬೇಗ ಬನ್ನಿ ಅಂದೆ. ಆಷ್ಟೇ..ಒಂದೇ ಉಸಿರಿನಲ್ಲಿ sorry uncle we stop everything pls dont spoil our life ಎಂದು ಗೋಳಾಡಿಬಿಟ್ಟರು. ಆಗ ನಾನು ಅವರಿಗೆ ಸಣ್ಣ ಜೀವನದ ಪಾಠ ಹೇಳಿ life is beautiful dont miss use. ಅಂತ ನನ್ನ ಕಥೆ ಹೇಳಿ. ಸಾದ್ಯವಾದಷ್ಟು ತಂದೆ ಮಾಡುವ ಕೆಲಸಮಾಡಿದೆ'' - ಜಗ್ಗೇಶ್

  ಜಗ್ಗೇಶ್ ಪ್ರಕಾರ ಮದುವೆ ಅಂದ್ರೆ...

  ಜಗ್ಗೇಶ್ ಪ್ರಕಾರ ಮದುವೆ ಅಂದ್ರೆ...

  ''ಮದುವೆ ಸಂಸಾರ ಅನ್ನೋದು ಭವಸಾಗರ ದಾಟಿದಂತೆ. ಯಾವುದೋ ದಿಕ್ಕಿನ ಎರಡು ಮನ ಒಟ್ಟಾಗಿ ಬಾಳಲು ನಿರ್ಧಾರ ದೈವಪ್ರೇರಿತ ಅಂತಾರೆ ಹಿರಿಯರು. ಆದರೆ ನನ್ನ ಪ್ರಕಾರ ನಮ್ಮ ಪ್ರೇರಿತವೆ ಮದುವೆ. ಗಂಡು ಹೆಣ್ಣು ಮದುವೆ ಆಗಬೇಕಾದರೆ ಇರಬೇಕಾದ ಮಾನದಂಡ ಹಣ-ಹೆಸರು ಇರಲಿ ಇಲ್ಲದಿರಲಿ ನಮ್ಮ ನಡೆ ಆರಂಭದಂತೆ ಅಂತ್ಯದವರೆಗೆ ಇರುವ ಗುಣ ನಮ್ಮಲ್ಲಿರಬೇಕು'' - ಜಗ್ಗೇಶ್

  ಜಗ್ಗೇಶ್ ಹಿತವಚನ

  ಜಗ್ಗೇಶ್ ಹಿತವಚನ

  ''ಗಂಡು ಸಾಮಾನ್ಯವಾಗಿ ತಪ್ಪುಮಾಡುವ ಪ್ರಾಣಿ ಆದರೆ ಹೆಣ್ಣು ಸಹನಾಶೀಲಳು ಅದನ್ನ ನಿಭಾಯಿಸುವ ಗುಣ ಹೊಂದಿರಬೇಕು. ಜೊತೆಗೆ ಇತಿಹಾಸ ನಿರ್ಮಿಸುವ ಸ್ಥಾನ ದೇವರು ಕೊಟ್ಟಿದ್ದು ಹೆಣ್ಣಿಗೆ ಮಾತ್ರ. ಜನ್ಮ ಕೊಡಬೇಕಾದರೆ ಹೆಣ್ಣು ಪಡುವ ನೋವು ಎಷ್ಟು ಜನ್ಮ ಎತ್ತಿದರೂ ಸಹಿಸಲು ಗಂಡಿಂದ ಸಾಧ್ಯವಿಲ್ಲ. ಹಾಗಾಗಿ ಹೆಣ್ಣನ್ನು ದೇವರಿಗೆ ಹೋಲಿಸೋದು. ತಪ್ಪು ಮಾಡುವ ಗಂಡಸರು ಒಮ್ಮೆ ಅಮ್ಮನನ್ನು ನೆನಪು ಮಾಡಿಕೊಳ್ಳಿ ನಿಮ್ಮನ್ನ ಸಲಹಲು ಆಕೆ ಪಟ್ಟ ಕಷ್ಟದ ದಿನವ. ಹಾಗೆ ಅಲ್ಲವೆ ಪುನರಾವರ್ಥನೆ. ಮದುವೆ ಆಗಬೇಕಾದರೆ ಕಾಮೇಷ ಅರ್ಥೇಷ ನಾತಿಚರಾಮಿ ಅಂತ ಪುರೋಹಿತರು ಹೇಳಿದ್ದು ಗಿಳಿಯಂತೆ ಒಪ್ಪಿಸಿ, ಆಕಾಶದಲ್ಲಿ ಕಾಣದ ಅಶ್ವಿನಿ ನಕ್ಷತ್ರ ನೋಡಿ, ನೋಡಿದಂತೆ ನಟಿಸಿ ಮೊದಲ ರಾತ್ರಿಗೆ ಜೀವನ ಸಾರ್ಥಕಭಾವ ಮಾಡಿಕೊಂಡಾಗ ಮಾತ್ರಕ್ಕೆ ಮದುವೆಯಲ್ಲ!!!'' - ಜಗ್ಗೇಶ್

  ಗಂಡ ಹೇಗಿರಬೇಕು?

  ಗಂಡ ಹೇಗಿರಬೇಕು?

  ''ಇಲ್ಲದಾಗ ಹೆಂಡತಿಯನ್ನು ಹೇಗೆ ಸಮಾಧಾನ ಪಡಿಸಬೇಕು. ಇದ್ದಾಗ ಹೇಗೆ ತಾನು ಹೆಂಡತಿಯೊಂದಿಗೆ ಖುಷಿ ಪಡಬೇಕು ಅಂತ ಕಲಿಯದಿದ್ದರೆ ಅವನು ಎಷ್ಟೇ ಶ್ರೀಮಂತನಾದರು ಬಡವನೆ. ನೆನಪಿಡಿ ಸಂಸಾರ ಸಾಗರ ದಾಟಲಾಗದೆ ವಿಮುಕ್ತಿಯಾಗಿ ಅಬ್ಬಾ ಕಾಟತಪ್ಪಿತು ಅಂತ ನಿಟ್ಟುಸಿರು ಬಿಟ್ಟು ಮತ್ತೊಬ್ಬಳ ಪಡೆದರೆ ಮತ್ತೆ ಬಾವಿಯಿಂದ ಬಾಣಲೆಗೆ ಬಿದ್ದಂತೆ. ಸಂಸಾರ ಒಡೆಯಲು ನಾನಾಕಾರಣ ಹುಟ್ಟುತ್ತೆ ಆದರೆ ಅದು ಒಬ್ಬ ಗಂಡಿಂದಲೋ, ಹೆಣ್ಣಿಂದಲೋ ಆಗಿಬಿಟ್ಟರಂತೂ ದೌರ್ಭಾಗ್ಯವೆ. ಆ ತಪ್ಪು ದೇವರಿಂದ ಅಂತು ಅಲ್ಲಾ. ಬದಲಿಗೆ ನಮ್ಮ ದೌರ್ಬಲ್ಯದಿಂದ. ಕೆಲವು ತಪ್ಪು ನಡೆಯೋದು ಮದುವೆಯಾದ ಗಂಡು ಹೆಣ್ಣು ಇಬ್ಬರಿಗೂ ಅಪರಿಚಿತರ ಭೇಟಿ!!'' - ಜಗ್ಗೇಶ್

  ಡಿವೋರ್ಸ್ ಕೇಸ್ ಹೆಚ್ಚಾಗಲು ಕಾರಣ...

  ಡಿವೋರ್ಸ್ ಕೇಸ್ ಹೆಚ್ಚಾಗಲು ಕಾರಣ...

  ''ಆರಂಭ ಸ್ನೇಹ ನಂತರ ತಪ್ಪುಗಳು. ಯಾಕೆ ಮನುಕುಲ ಹೀಗಾಗುತ್ತೆ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತೆ. ಹಾಗಾಗಿಯೇ ಹಿರಿಯ ಪರಂಪರೆ ದೇವರು ಎಂಬ ಭಯವನ್ನ ಬಾಲ್ಯದಿಂದ ಬಿತ್ತಿದ್ದು. ಎಲ್ಲಿ ಭಯವಿರುತ್ತೆ ಅಲ್ಲಿ ಸರಿನಡೆಯಿರುತ್ತೆ. ಇದೆಲ್ಲಾ ಸೈನ್ಟಿಫಿಕ್ ಥಿಂಕ್ಕಿಂಗ್ ಆಫ್ ಎಲ್ಡರ್ಸ್. ಇಂದಿನ ಸಮುದಾಯ ಈಸಿ ಥಿಂಕ್ಕಿಂಗ್ ದಾರಿ ತುಳಿದಿರುವುದೆ ಅಪಾಯಕಾರಿ. ಇಂದು ಬೆಂಗಳೂರು ಸಿಟಿಯಲ್ಲಿ ಒಂದು ದಿನಕ್ಕೆ 2,000 ಡೈವರ್ಸ್ ಕೇಸ್ ಬುಕ್ಕಾಗ್ತಿದೆ. ಹೀಗಾದರೆ ಮುಂದಿನ ಪೀಳಿಗೆ ಹೇಗಿರಬಹುದು. ಇದೆಲ್ಲಾ ಪಾಶ್ಚಾತ್ಯರ ನಡಾವಳಿಯಿಂದ ನಮಗೆ ಸಿಕ್ಕುತ್ತಿರುವ ಬಳುವಳಿ. ತಮಾಷೆ ಎಂದರೆ ಪಾಶ್ಚಾತ್ಯರು ನಮ್ಮ ಹಳೆತಲೆಮಾರಿನ ಏಕಮದುವೆ ಸಿದ್ಧಾಂತಕ್ಕೆ ಮೋರೆಹೋಗಿ ಸಸ್ಯಾಹಾರಿಗಳಾಗುತ್ತಿದ್ದಾರೆ. ನಾವು ಭಾರತೀಯರು ಅವರಾಗುತ್ತಿದ್ದೇವೆ ದುರಂತ. ನೆನಪಿಡಿ ನಿಮ್ಮ ತಪ್ಪು ನಿರ್ಧಾರಕ್ಕೆ ನೀವೊಬ್ಬರೆ ಕೊರಗ್ಗೋಲ್ಲಾ ಬದಲಿಗೆ ನಿಮ್ಮ ಮಕ್ಕಳು ಹೆತ್ತವರು ಒಡಹುಟ್ಟಿದವರು ಕೊರಗುತ್ತಾರೆ. ಮದುವೆ ತಮಾಷೆ ಬಂಧನವಲ್ಲಾ..ಬದಲಾಗಿ ಜನುಮದ ಬಂಧನ.'' - ಜಗ್ಗೇಶ್

  ಜಗ್ಗೇಶ್ ಮದುವೆ ಆಗಿ 32 ವರ್ಷ.!

  ಜಗ್ಗೇಶ್ ಮದುವೆ ಆಗಿ 32 ವರ್ಷ.!

  ಈ ಮಾರ್ಚ್ 22ಕ್ಕೆ ನಾನು ಪರಿಮಳಾ ಮದುವೆಯಾಗಿ 32ವರ್ಷ. ಅಂದು ಇಂದು ಮುಂದು ನಾವು ಹೀಗೆ ಇರುತ್ತೇವೆ. ಕಾರಣ ಇದ್ದಾಗ ಇಲ್ಲದಾಗ ಅನುಸರಿಸಿ ಹೋಗೊದು ಅಮ್ಮ ನನಗೆ ಬಿಟ್ಟುಹೋದ ಬಳುವಳಿ.

  English summary
  Kannada Actor Jaggesh is celebrating his 53rd Birthday today (March 17th). On this occasion, Jaggesh has taken his facebook account to reveal his love story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X