ಈ ಜಾಗಕ್ಕೂ ಜಗ್ಗೇಶ್ ಗೂ ಅವಿನಾಭಾವ ಸಂಬಂಧ: ಯಾವುದು ಈ ಸ್ಥಳ.?
ನವರಸ ನಾಯಕ ಜಗ್ಗೇಶ್ ಅವರು ಇತ್ತೀಚಿಗಷ್ಟೆ ತಮ್ಮ ಮನೆಯ ಒಳಾಂಗಣವನ್ನ ಹೊಸದಾಗಿ ವಿನ್ಯಾಸ ಮಾಡಿಸಿದ್ದರು. ಜಗ್ಗೇಶ್ ಪತ್ನಿ ಪರಿಮಳ ಅವರ ಕಲ್ಪನೆಯಂತೆ ಮನೆಯ ಹಾಲ್, ಕಿಚ್ಚನ್, ರೂಂಗಳನ್ನ ನವೀಕರಣ ಮಾಡಲಾಗಿತ್ತು.
ಆ ಫೋಟೋಗಳನ್ನ ಸ್ವತಃ ಜಗ್ಗೇಶ್ ಅವರೇ ಟ್ವಿಟ್ಟರ್ ನಲ್ಲಿ ಈ ಹಿಂದೆ ಹಂಚಿಕೊಂಡಿದ್ದರು. ಇದೀಗ, ತಮ್ಮ ಮನೆಯ ಮತ್ತೊಂದು ಹೊಸ ಫೋಟೋವನ್ನ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿರುವ ಸ್ಥಳ ಬಗ್ಗೆ ಒಂದು ಇಂಟ್ರೆಸ್ಟಿಂಗ್ ವಿಚಾರವನ್ನ ಕೂಡ ಬಿಟ್ಟುಕೊಟ್ಟಿದ್ದಾರೆ.
ಹೌದು, ಜಗ್ಗೇಶ್ ಅವರು ಶೇರ್ ಮಾಡಿಕೊಂಡಿರುವ ಸ್ಥಳ, ಅವರ ಖಾಸಗಿ ಜಾಗವಂತೆ. ಇಲ್ಲಿ ಯಾರಿಗೂ ಪ್ರವೇಶ ಕೂಡ ಇಲ್ವಂತೆ. ಪತ್ನಿ ಪರಿಮಳ ಅವರಿಗೆ ಮಾತ್ರ ಎಂಟ್ರಿ ಎಂಬ ವಿಷ್ಯವನ್ನ ಜಗ್ಗಣ್ಣ ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ, ಟ್ವಿಟ್ಟರ್ ನಲ್ಲಿ ಸದಾ ಸಕ್ರೀಯರಾಗಿರುವ ಜಗ್ಗೇಶ್ ಅವರು ''ಇದೇ ಸ್ಥಳದಲ್ಲಿ ಕೂತು ನಿಮ್ಮ ಜೊತೆ ಟ್ವಿಟ್ಟರ್ ಸಂದೇಶ ವಿನಿಮಯ ಮಾಡಿಕೊಳ್ಳುತ್ತಾರಂತೆ. ಈ ಜಾಗದಲ್ಲಿ ಕೂತರೇ ಜಗ್ಗೇಶ್ ಅವರು ವಿಶ್ವವನ್ನೇ ಮರೆತು ಬಿಡುತ್ತಾರೆ ಎಂದು'' ಟ್ವೀಟ್ ಮಾಡಿದ್ದಾರೆ.
ಅಂದ್ಹಾಗೆ, ಜಗ್ಗೇಶ್ ಅವರು ತಮ್ಮ ಜೀವನದ ಬಹುತೇಕ ವಿಷ್ಯಗಳನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ, ತಮ್ಮ ಖಾಸಗಿ ವಿಷ್ಯವನ್ನ ಬಹಿರಂಗಪಡಿಸಿದ್ದಾರೆ.
ಇನ್ನುಳಿದಂತೆ ಜಗ್ಗೇಶ್ ಅವರು '8ಎಂಎಂ' ಚಿತ್ರದ ಚಿತ್ರೀಕರಣ ಮುಗಿಸಿ, 'ಪ್ರೀಮಿಯರ್ ಪದ್ಮಿನಿ' ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಇದರ ಜೊತೆಗೆ 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್' ಕಿರುತೆರೆ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕೆಲಸ ನಿರ್ವಹಿಸಲಿದ್ದಾರೆ.


Click it and Unblock the Notifications











