Don't Miss!
- News Bengaluru Rain: ಬೆಂಗಳೂರಿನ ಹಲವೆಡೆ ಗುಡುಗು ಜಿನುಗು ಮಳೆ.. ಮನೆಯಿಂದ ಹೊರಬಂದು ಕುಣಿದು ಕುಪ್ಪಳಿಸಿದ ಮಕ್ಕಳು
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಜಾಗಕ್ಕೂ ಜಗ್ಗೇಶ್ ಗೂ ಅವಿನಾಭಾವ ಸಂಬಂಧ: ಯಾವುದು ಈ ಸ್ಥಳ.?
ನವರಸ ನಾಯಕ ಜಗ್ಗೇಶ್ ಅವರು ಇತ್ತೀಚಿಗಷ್ಟೆ ತಮ್ಮ ಮನೆಯ ಒಳಾಂಗಣವನ್ನ ಹೊಸದಾಗಿ ವಿನ್ಯಾಸ ಮಾಡಿಸಿದ್ದರು. ಜಗ್ಗೇಶ್ ಪತ್ನಿ ಪರಿಮಳ ಅವರ ಕಲ್ಪನೆಯಂತೆ ಮನೆಯ ಹಾಲ್, ಕಿಚ್ಚನ್, ರೂಂಗಳನ್ನ ನವೀಕರಣ ಮಾಡಲಾಗಿತ್ತು.
ಆ ಫೋಟೋಗಳನ್ನ ಸ್ವತಃ ಜಗ್ಗೇಶ್ ಅವರೇ ಟ್ವಿಟ್ಟರ್ ನಲ್ಲಿ ಈ ಹಿಂದೆ ಹಂಚಿಕೊಂಡಿದ್ದರು. ಇದೀಗ, ತಮ್ಮ ಮನೆಯ ಮತ್ತೊಂದು ಹೊಸ ಫೋಟೋವನ್ನ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿರುವ ಸ್ಥಳ ಬಗ್ಗೆ ಒಂದು ಇಂಟ್ರೆಸ್ಟಿಂಗ್ ವಿಚಾರವನ್ನ ಕೂಡ ಬಿಟ್ಟುಕೊಟ್ಟಿದ್ದಾರೆ.
In pics: ಜಗ್ಗೇಶ್ ಮನೆಯೊಳಗೆ ಬದಲಾಯ್ತು ವಿನ್ಯಾಸ
ಹೌದು, ಜಗ್ಗೇಶ್ ಅವರು ಶೇರ್ ಮಾಡಿಕೊಂಡಿರುವ ಸ್ಥಳ, ಅವರ ಖಾಸಗಿ ಜಾಗವಂತೆ. ಇಲ್ಲಿ ಯಾರಿಗೂ ಪ್ರವೇಶ ಕೂಡ ಇಲ್ವಂತೆ. ಪತ್ನಿ ಪರಿಮಳ ಅವರಿಗೆ ಮಾತ್ರ ಎಂಟ್ರಿ ಎಂಬ ವಿಷ್ಯವನ್ನ ಜಗ್ಗಣ್ಣ ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ, ಟ್ವಿಟ್ಟರ್ ನಲ್ಲಿ ಸದಾ ಸಕ್ರೀಯರಾಗಿರುವ ಜಗ್ಗೇಶ್ ಅವರು ''ಇದೇ ಸ್ಥಳದಲ್ಲಿ ಕೂತು ನಿಮ್ಮ ಜೊತೆ ಟ್ವಿಟ್ಟರ್ ಸಂದೇಶ ವಿನಿಮಯ ಮಾಡಿಕೊಳ್ಳುತ್ತಾರಂತೆ. ಈ ಜಾಗದಲ್ಲಿ ಕೂತರೇ ಜಗ್ಗೇಶ್ ಅವರು ವಿಶ್ವವನ್ನೇ ಮರೆತು ಬಿಡುತ್ತಾರೆ ಎಂದು'' ಟ್ವೀಟ್ ಮಾಡಿದ್ದಾರೆ.
ಅಂದ್ಹಾಗೆ, ಜಗ್ಗೇಶ್ ಅವರು ತಮ್ಮ ಜೀವನದ ಬಹುತೇಕ ವಿಷ್ಯಗಳನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ, ತಮ್ಮ ಖಾಸಗಿ ವಿಷ್ಯವನ್ನ ಬಹಿರಂಗಪಡಿಸಿದ್ದಾರೆ.
ನನ್ನ ಖಾಸಗಿ ಜಾಗ ಇಲ್ಲಿ ಪರಿಮಳ ಬಿಟ್ಟರೆ ಯಾರು ಬರುವುದಿಲ್ಲಾ..!!
— ನವರಸನಾಯಕ ಜಗ್ಗೇಶ್ (@Jaggesh2) June 25, 2018
ಏಕಾಂತದಲ್ಲಿ ನಾನು ಓದುತ್ತ ಕೂರುವಜಾಗ..ಇಲ್ಲಿಂದಲೆ ನಿಮ್ಮ ಜೊತೆ ಟ್ವಿಟ್ಟರ್ ಪ್ರೀತಿ ಸಂದೇಶ ವಿನಿಯೋಗ ನಡೆಯೋದು..
ಇಲ್ಲಿ ಕೂತರೆ ನಾನು ವಿಶ್ವಮರೆತು ಮೈಮರೆಯುವೆ..
ಏಕಾಂತ ಓದು ಧ್ಯಾನಕ್ಕೆ ನನಗಾಗಿ ಪರಿಮಳನ ಕಲ್ಪನೆ.12/14 ಜಾಗದಿಂದ ಇಲ್ಲಿಯವರೆಗು 35ವರ್ಷದ ಶ್ರಮ.ಶುಭರಾತ್ರಿ pic.twitter.com/PyIZDgXJe5
ಇನ್ನುಳಿದಂತೆ ಜಗ್ಗೇಶ್ ಅವರು '8ಎಂಎಂ' ಚಿತ್ರದ ಚಿತ್ರೀಕರಣ ಮುಗಿಸಿ, 'ಪ್ರೀಮಿಯರ್ ಪದ್ಮಿನಿ' ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಇದರ ಜೊತೆಗೆ 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್' ಕಿರುತೆರೆ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕೆಲಸ ನಿರ್ವಹಿಸಲಿದ್ದಾರೆ.