»   » 'ಉಪೇಂದ್ರ' ವಿರುದ್ಧ ಜಗ್ಗೇಶ್ 'ಜಿತೇಂದ್ರ' ಆಗಿದ್ದು ಹೇಗೆ?

'ಉಪೇಂದ್ರ' ವಿರುದ್ಧ ಜಗ್ಗೇಶ್ 'ಜಿತೇಂದ್ರ' ಆಗಿದ್ದು ಹೇಗೆ?

Posted By:
Subscribe to Filmibeat Kannada

ಸಾಮಾಜಿಕ ಜಾಲತಾಣದಲ್ಲಿ ನವರಸ ನಾಯಕ ಜಗ್ಗೇಶ್ ಹಾಟ್ ಟಾಪಿಕ್ ಆಗಿದ್ದಾರೆ. ಎಲ್ಲರೂ ಉಪೇಂದ್ರ ಮತ್ತು ಜಗ್ಗೇಶ್ ಬಗ್ಗೆ ಚರ್ಚಿಸುತ್ತಿದ್ದಾರೆ. ಜಗ್ಗೇಶ್ ಮಾಡುತ್ತಿರುವ ಟ್ವೀಟ್ ಗಳು, ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡುತ್ತಿರುವ ಸ್ಟೇಟಸ್ ಸಿನಿ ಪ್ರಿಯರಿಗೆ ಬಾಯಿಗೆ ಸಿಹಿ ಕಡಲೆ ಸಿಕ್ಕಂತಾಗಿದೆ.

''ಉಪ್ಪಿನ್ ಕಾಯಿ' ಅನ್ನ ತಿಂದಿಲ್ಲ'' ಅಂತ ನೇರವಾಗಿ ಉಪೇಂದ್ರಗೆ ಬೆಟ್ಟು ಮಾಡಿ ಟ್ವೀಟ್ ಮಾಡಿದ ಜಗ್ಗೇಶ್, ತಾವು ಕನ್ನಡ ಚಿತ್ರರಂಗದಲ್ಲಿ ಬೆಳೆದ ಬಗ್ಗೆ ಫೇಸ್ ಬುಕ್ ನಲ್ಲಿ ಸುದೀರ್ಘ ಸ್ಟೇಟಸ್ ಹಾಕಿದ್ದಾರೆ.[ಫೇಸ್ ಬುಕ್ ನಲ್ಲಿ ನಟ ಜಗ್ಗೇಶ್ ಬಯಲು ಮಾಡಿದ ಸತ್ಯ]

ಸಿನಿಮಾ ಮಾಡುವುದಕ್ಕೆ ಉಪೇಂದ್ರ ಪರದಾಡುತ್ತಿರುವಾಗ ಅವರ ಕೈಹಿಡಿದದ್ದು 'ನಾನು' ಅಂತ ಜಗ್ಗೇಶ್ ಹೇಳಿಕೊಂಡಿದ್ದಾರೆ. ಹಾಗಿದ್ಮೇಲೆ ಅದೇ ಉಪೇಂದ್ರ ವಿರುದ್ಧ ಜಗ್ಗೇಶ್ 'ಜಿತೇಂದ್ರ' ಅಂತಹ ಸಿನಿಮಾ ಮಾಡಿದ್ದು ಯಾಕೆ? ಅನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಆ ಗುಟ್ಟನ್ನ ಖುದ್ದು ಜಗ್ಗೇಶ್ ರಟ್ಟು ಮಾಡಿದ್ದಾರೆ. ಮುಂದೆ ಓದಿ.....

ಉಪೇಂದ್ರ V/S ಜಿತೇಂದ್ರ

ರಿಯಲ್ ಸ್ಟಾರ್‌ ಉಪೇಂದ್ರ ನಿರ್ದೇಶನದ 'ಉಪೇಂದ್ರ' ಚಿತ್ರವನ್ನ ಅಣಕ ಮಾಡಿದಂತಿರುವ ಸಿನಿಮಾ 'ಜಿತೇಂದ್ರ'. ಥೇಟ್ ಉಪ್ಪಿ ಸ್ಟೈಲ್ ನಲ್ಲೇ ಹೇರ್ ಸ್ಟೈಲ್, ಕಾಸ್ಟ್ಯೂಮ್ಸ್ ತೊಟ್ಟು, 'ಉಪೇಂದ್ರ' ಸಿನಿಮಾದಲ್ಲಿ ಉಪ್ಪಿ ಹೊಡೆದಿದ್ದ ಡೈಲಾಗ್ಸ್ ಜಗ್ಗೇಶ್ ಬಾಯಲ್ಲಿ ಬಂದವು. ಈ ಚಿತ್ರದಿಂದ ಉಪೇಂದ್ರ ಮತ್ತು ಜಗ್ಗೇಶ್ ನಡುವೆ ದೊಡ್ಡ ಕಂದಕ ಸೃಷ್ಟಿಯಾಯ್ತು. ಅಷ್ಟಕ್ಕೂ 'ಜಿತೇಂದ್ರ' ಐಡಿಯಾ ಯಾರದ್ದು? ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ಫೇಸ್ ಬುಕ್ ನಲ್ಲಿ ಸತ್ಯ ಬಯಲು

'ಜಿತೇಂದ್ರ' ಚಿತ್ರದ ಮೇಕಿಂಗ್ ಬಗ್ಗೆ ನಟ ಜಗ್ಗೇಶ್ ತಮ್ಮ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ. ಜಗ್ಗೇಶ್ ಹಾಕಿರುವ ಸ್ಟೇಟಸ್ ನ ಯಥಾವತ್ ರೂಪ ಇಲ್ಲಿದೆ, ಮುಂದಿನ ಸ್ಲೈಡ್ ಕ್ಲಿಕ್ ಮಾಡಿ.... [ಜಗ್ಗೇಶ್ ಬಾಯಲ್ಲಿ ಬ್ರಾಹ್ಮಣ V/S ಗೌಡ - ಟ್ವಿಟ್ಟರ್ ನಲ್ಲಿ ರಾದ್ಧಾಂತ.!]

ಒತ್ತಾಯದಿಂದ ಮಾಡಿದ ಚಿತ್ರ

''ಜಿತೇಂದ್ರದ ವಿಷಯಕ್ಕೆ ಬಂದರೆ ಅದು ಹೆಚ್.ಡಿ.ಕುಮಾರಸ್ವಾಮಿಯವರ ನಿರ್ಮಾಣ. ಅಂದು ನಾನು ಮಾಡಲು ಒಪ್ಪದಿದ್ದಾಗ, ಅಗ್ನಿ ಶ್ರೀಧರ್ ಅವರ ಮನೆಯಲ್ಲಿ ನನ್ನ ಕರೆಸಿ ನೀವ್ ಇದನ್ನು ಮಾಡಲೆಬೇಕು ಎಂಬ ಒತ್ತಾಯದಿಂದ ಒಲ್ಲದ ಮನಸ್ಸಿನಿಂದ ಮಾಡಿದ ಚಿತ್ರ'' - ಜಗ್ಗೇಶ್ [ಟ್ವಿಟ್ಟರ್ ನಲ್ಲಿ ಜಗ್ಗೇಶ್ ವಿರುದ್ಧ ಉಪೇಂದ್ರ ಅಭಿಮಾನಿಗಳ ಯುದ್ಧ]

ಕಂದಕ ಸೃಷ್ಟಿಯಾಯ್ತು.!

''ಅಂದಿನಿಂದ ನಮ್ಮಿಬ್ಬರ ನಡುವೆ ಕಂದಕ ಸೃಷ್ಟಿಯಾಯಿತು. ಆದರೆ ಕಾರಣಿಭೂತರು ಯಾರೂ ತೇಪೆ ಹಚ್ಚಲು ಯತ್ನಿಸಲಿಲ್ಲ'' - ಜಗ್ಗೇಶ್ [ಉಪೇಂದ್ರ ವಿರುದ್ಧ ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದ ಜಗ್ಗೇಶ್]

ಜಗ್ಗೇಶ್ ಮುಂದಾಗಲಿಲ್ವಾ?

ಉಪೇಂದ್ರ ಮತ್ತು ಜಗ್ಗೇಶ್ ನಡುವೆ ದೊಡ್ಡ ಕಂದಕ ಸೃಷ್ಟಿಯಾದ್ಮೇಲೆ, ಅದಕ್ಕೆ ಕಾರಣರಾದವರು ತೇಪೆ ಹಚ್ಚಲಿಲ್ಲ ನಿಜ. ಆದ್ರೆ, ಜಗ್ಗೇಶ್ ಅವರು ಒಂದು ಹೆಜ್ಜೆ ಮುಂದೆ ಇಡಲಿಲ್ಲವಾ? ಗೊತ್ತಿಲ್ಲ. ಆದ್ರೆ, ಜಗ್ಗೇಶ್ ಪುತ್ರ ನಟಿಸುತ್ತಿರುವ 'ತರ್ಲೆ ನನ್ ಮಕ್ಳು' ಚಿತ್ರಕ್ಕೆ ಉಪೇಂದ್ರ ಶುಭಾಶಯ ಕೋರೋಕೆ ಬಂದಿದ್ದರು. ಇಬ್ಬರು ಎದುರಿಗೆ ಚೆನ್ನಾಗೇ ಇದ್ದಾರೆ. ಅಂದ್ಮೇಲೆ ಈಗ ಈ ವಿವಾದ ಯಾಕೆ ಅನ್ನೋದು ಜಗ್ಗಿ-ಉಪ್ಪಿಗೇ ಗೊತ್ತು.!

English summary
Kannada Actor Jaggesh has taken his Facebook account to reveal the facts about how Kannada Movie 'Jitendra' was been made. Jaggesh clearly stated that 'Jitendra' was not his choice.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada