»   » ಫೇಸ್ ಬುಕ್ ನಲ್ಲಿ ನಟ ಜಗ್ಗೇಶ್ ಬಯಲು ಮಾಡಿದ ಸತ್ಯ

ಫೇಸ್ ಬುಕ್ ನಲ್ಲಿ ನಟ ಜಗ್ಗೇಶ್ ಬಯಲು ಮಾಡಿದ ಸತ್ಯ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ನವರಸ ನಾಯಕ ಜಗ್ಗೇಶ್ 'ಉಪ್ಪಿ-2' ಚಿತ್ರದ 'ನೋ ಎಕ್ಸ್ ಕ್ಯೂಸ್ ಮೀ' ಹಾಡಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕೆಲ ಟ್ವೀಟ್ ಗಳನ್ನ ಮಾಡಿದ್ದರು.

  ಅದಕ್ಕೆ ಪ್ರತಿಕ್ರಿಯೆ ನೀಡಿರುವ ಉಪೇಂದ್ರ ಅಭಿಮಾನಿಗಳು, ನಟ ಜಗ್ಗೇಶ್ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದಕ್ಕೆ ಉಪೇಂದ್ರ ಕಾರಣ ಅಂತ ವಾದ ಮಾಡುತ್ತಿದ್ದಾರೆ. ಸಾಲದಕ್ಕೆ ಜಗ್ಗೇಶ್ ಅವರ ವಿರುದ್ಧ ಟ್ವಿಟ್ಟರ್ ನಲ್ಲಿ ಸಮರ ಸಾರಿದ್ದಾರೆ. ಬಾಯಿಗೆ ಬಂದ ಹಾಗೆ ಜಗ್ಗೇಶ್ ಅವರನ್ನ ನಿಂದಿಸುತ್ತಿದ್ದಾರೆ. [ಟ್ವಿಟ್ಟರ್ ನಲ್ಲಿ ಜಗ್ಗೇಶ್ ವಿರುದ್ಧ ಉಪೇಂದ್ರ ಅಭಿಮಾನಿಗಳ ಯುದ್ಧ]

  ಎಲ್ಲದಕ್ಕೂ ಬೇಸೆತ್ತ ನಟ ಜಗ್ಗೇಶ್ ಇದೀಗ ತಮ್ಮ ಫೇಸ್ ಬುಕ್ ನಲ್ಲಿ ಒಂದು ಸತ್ಯ ಕಥೆಯನ್ನ ಬಿಚ್ಚಿಟ್ಟಿದ್ದಾರೆ. ಅದರಲ್ಲಿ ಉಪೇಂದ್ರ ಅವರಿಗೆ ಒಂದು ಕಾಲದಲ್ಲಿ ಮನೆ ಬಾಡಿಗೆ ಕಟ್ಟೋಕೆ ದುಡ್ಡು ಇರಲಿಲ್ಲ ಅನ್ನುವ ಅನೇಕ ಸಂಗತಿಗಳನ್ನ ಬಯಲು ಮಾಡಿದ್ದಾರೆ. ಮುಂದೆ ಓದಿ....

  ಫೇಸ್ ಬುಕ್ ನಲ್ಲಿ ಜಗ್ಗೇಶ್ ಬಿಚ್ಚಿಟ್ಟ ಸತ್ಯ ಕಥೆ

  ಕನ್ನಡ ಚಿತ್ರರಂಗದಲ್ಲಿ ನವರಸ ನಾಯಕ ಜಗ್ಗೇಶ್ ಬೇಡಿಕೆ ಕಂಡುಕೊಂಡಿದ್ದು ಹೇಗೆ. ಉಪೇಂದ್ರ ಮತ್ತು ಜಗ್ಗೇಶ್ ಅವರ ಕಾಂಬಿನೇಷನ್ ನ 'ತರ್ಲೆ ನನ್ ಮಗ' ಚಿತ್ರ ಶುರುವಾಗಿದ್ದು ಹೇಗೆ ಅನ್ನುವ ಬಗ್ಗೆ ಸುದೀರ್ಘ ಸ್ಟೇಟಸ್ ಹಾಕಿದ್ದಾರೆ ನವರಸ ನಾಯಕ ಜಗ್ಗೇಶ್. ಅದನ್ನ ಅವರ ಸಾಲುಗಳಲ್ಲೇ ಹೇಳ್ತೀವಿ, ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

  ಜಗ್ಗೇಶ್ 2 ಲಕ್ಷ ಸಂಭಾವನೆ ಪಡೆಯುತ್ತಿದ್ದ ಕಾಲ

  ''ನಡೆದ ಒಂದು ಸತ್ಯಕತೆ. ಅದು 1990, ನಾನು ಒಂದು ಚಿತ್ರಕ್ಕೆ 2 ಲಕ್ಷ ಸಂಭಾವನೆ ಪಡೆಯುತ್ತಿದ್ದ ದಿನಗಳು. ನಿದ್ರೆ ಮಾಡಲು ಸಮಯವಿಲ್ಲದೆ ಸೆಟ್ಟಿನ ಯಾವುದೋ ಮೂಲೆಯಲ್ಲಿ ಮಲಗಿ ಆಯಾಸ ತಣಿಸಿಕೊಳ್ಳುತ್ತಿದ್ದೆ, ವರ್ಷಕ್ಕೆ 300 ದಿನ ಬಣ್ಣ ಹಚ್ಚಿ ನಟಿಸುತ್ತಿದ್ದೆ. 'ಪೋಲಿಸ್ ಬೆಲ್ಟ್', 'ಪೋಲಿಸ್ ಫೈಲ್', ಇಬ್ಬರು ನಾಯಕತ್ವದ ಚಿತ್ರ ಮೆಗಾಹಿಟ್.'' - ಜಗ್ಗೇಶ್ [ಜಗ್ಗೇಶ್ ಬಾಯಲ್ಲಿ ಬ್ರಾಹ್ಮಣ V/S ಗೌಡ - ಟ್ವಿಟ್ಟರ್ ನಲ್ಲಿ ರಾದ್ಧಾಂತ.!]

  ಟಿವಿ ಸೀರಿಯಲ್ ನಲ್ಲೂ ನಟನೆ

  ''ಆ ಸಮಯದಲ್ಲಿ ಸಾ.ರಾ. ಗೋವಿಂದ್ ರವರು ವೀರಪ್ಪ ಮರಳುವಾಡಿ ನಿರ್ದೇಶನದ ಒಂದು ಟಿವಿ ಸೀರಿಯಲ್ ನಲ್ಲಿ ನನ್ನನ್ನು ಅಭಿನಯಿಸಲು ಒತ್ತಾಯಿಸಿದರು. ವಿಧಿಯಿಲ್ಲದೆ ನಟಿಸಿದೆ, ಅದು ಎಲ್ಲರಿಗೂ ಇಷ್ಟವಾಯಿತು. ಅದರಲ್ಲಿ ಡಾ.ರಾಜ್ ರವರ 100ನೇ ಚಿತ್ರದ ನಿರ್ಮಾಪಕರು ಆರಾಧನ ಶ್ರೀನಿವಾಸ್ ಕೂಡಾ ಒಬ್ಬರು'' - ಜಗ್ಗೇಶ್ [ಉಪೇಂದ್ರ ವಿರುದ್ಧ ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದ ಜಗ್ಗೇಶ್]

  ಉಪೇಂದ್ರ ಪರಿಚಯ ಆಗಿದ್ದು ಹೇಗೆ?

  ''ಒಂದು ಯುವಪಡೆ ಆರಾಧನ ಶ್ರೀನಿವಾಸ್ ಬಳಿ ಬಹಳ ದಿನದಿಂದ ಒಂದು ಚಿತ್ರಕತೆ ಇದೆ, ಸಿನಿಮಾ ಮಾಡಿ ಎಂದು ಪೀಡಿಸುತ್ತಿದ್ದರಂತೆ. ಅವರೆ ಆರ್.ಎಸ್.ಗೌಡ ಹಾಗು ಸೂರಪ್ಪಬಾಬು. ಡೈರೆಕ್ಟ್ ಯಾರು ಮಾಡುತ್ತಾರೆ ಎಂದಾಗ ಇವನೆ ಎಂದು ಉಪೇಂದ್ರನನ್ನು ಪರಿಚಯ ಮಾಡಿಸಿದ್ದಾರೆ. ಆಗ ಶ್ರೀನಿವಾಸ್, ಜಗ್ಗೇಶ್ ಡೇಟ್ ತನ್ನಿ ಆಮೇಲೆ ಮಾತಾಡೋಣ ಎಂದು ಕಳಿಸಿದ್ದಾರೆ.'' - ಜಗ್ಗೇಶ್ [ಗಾಂಧಿನಗರದ ಎಲ್ಲಾ 'ರಿಯಲ್' ನಟರ ಕಾಲೆಳೆದ ಉಪೇಂದ್ರ]

  'ತರ್ಲೆ ನನ್ ಮಗ' ಶುರುವಾಯ್ತು

  ''ಆಗ ಬಾಬು 'ರಾಣಿ ಮಹಾರಾಣಿ'ಯಲ್ಲಿ ನಿರ್ಮಾಪಕ ಜೈಜಗದೀಶ್ ಮ್ಯಾನೇಜರ್ ಅಗಿ ಪರಿಚಯವಿತ್ತು. ಅದನ್ನು ಬಳಸಿ ನನ್ನ ಒಪ್ಪಿಗೆ ಪಡೆಯಲು ತುಂಬಾ ಶ್ರಮ ಪಟ್ಟರು. ಕಾರಣ ಕೈಯಲ್ಲಿ ಸುಮಾರು ಚಿತ್ರ ಇತ್ತು. ಅದನ್ನು ಮುಗಿಸಿ "ತರ್ಲೆ ನನ್ನ ಮಗ" ಶುರು ಮಾಡಿದರು ಉಪೇಂದ್ರ'' - ಜಗ್ಗೇಶ್

  ''ನಾನು ಮನಸ್ಸು ಮಾಡದೇ ಇದ್ದಿದ್ದರೆ, ಇತಿಹಾಸದಲ್ಲಿ ಬಹುತೇಕರು ಇರುತ್ತಿರಲಿಲ್ಲ''

  ''ತುಂಬಾ ಚೆನ್ನಾಗಿ ಕೆಲಸಮಾಡುತ್ತಿದ್ದ ಉಪೇಂದ್ರ. ಆದರೆ ನಿರ್ಮಾಪಕರಿಗೆ ಹಣದ ಸಮಸ್ಯೆ ಇತ್ತು, ಆ ದಿನ ನಾನು ಮನಸ್ಸು ಮಾಡದಿದ್ದಿದ್ದರೆ ಇಂದು ಇತಿಹಾಸದಲ್ಲಿ ಬಹುತೇಕರು ಇರುತ್ತಿರಲಿಲ್ಲ. ಆಗ ಪರಿಮಳಾನನ್ನು ನಿಧಾನವಾಗಿ ಒಪ್ಪಿಸಿ ನಾನು ಹಣ ನೀಡಿ ನಿರ್ಮಾಪಕರಿಗೆ ಸಹಾಯ ಮಾಡಿದೆ. ನಂತರ ಆ ಸಿನಿಮಾಗೆ ಮಾಲಾಶ್ರೀ ರಾಮು ಕೂಡ ಹಣ ಹೂಡಿದರು, ಕಾರಣ ನನ್ನ ಒಂದು ಚಿತ್ರ 'ರೌಡಿ MLA' ಅವರಿಗೆ ವಿತರಣೆ ಮಾಡಲು ಸಣ್ಣ ಪ್ರಯತ್ನ ಮಾಡಿದ್ದೆ.

  ಉಪೇಂದ್ರಗೆ ಮನೆ ಬಾಡಿಗೆ ಕಟ್ಟಲು ದುಡ್ಡು ಇರಲಿಲ್ಲ.

  ''ಹೇಗೊ ಸಿನಿಮಾ ಮುಗಿಯಿತು. ಆದರೆ ಬಿಡುಗಡೆ ಮಾಡಲು ಅವರಿಗೆ ಹಣ ಹೊಂದಿಸಲು ಕಷ್ಟವಾಯಿತು. ಈ ಸಮಯದಲ್ಲಿ ನನಗೆ ಉಪೇಂದ್ರ ತನ್ನ ಮನೆ ಬಾಡಿಗೆ ಕಟ್ಟಲು ಹಣ ನಿರ್ಮಾಪಕರು ನೀಡಿಲ್ಲಾ ಎಂದು ಕೊರಗಿದಾಗ, ಆ ಸ್ಥಿತಿಯಿಂದ ಬೆಳೆದ ನನಗೆ ಬಹಳ ಸಂಕಟವಾಗಿ ಮಲ್ಲೇಶ್ವರ 8ನೇ ಕ್ರಾಸ್ ರಾಯರ ಮಠಕ್ಕೆ ಕರೆದುಕೊಂಡು ಹೋಗಿ ರಾಯರ ಮುಂದೆ 5,000ರೂಗಳು ನೀಡಿ ರಾಯರಿದ್ದಾರೆ ಹೋಗಿ ಎಂದು ಕಳಿಸಿದೆ.'' - ಜಗ್ಗೇಶ್

  ಜಗ್ಗೇಶ್ ಕೂಡ ಕೊರಗಿದ್ದರು.!

  ''ನಂತರ ನನ್ನ ಮೊದಲ ಸಿನಿಮಾ ರಿಲೀಸ್ ಆಗಲಿಲ್ಲವೆ ಎಂದು ಕೊರಗುತ್ತಿದ್ದೆ. ಆಗಲೂ ಅಣಕ ಮಾಡೋ ಮಹನೀಯರು ಬಹುತೇಕರಿದ್ದರು.'' - ಜಗ್ಗೇಶ್

  ಅದೃಷ್ಟ ಬದಲಾಯಿಸಿದ 'ಭಂಡ ನನ್ನ ಗಂಡ'

  ''ತೋರಿಸುವೆ ನೋಡಿ ಎಂದು ಶುರುವಾಗಿದ್ದೆ ನನ್ನ ಅದೃಷ್ಟದ ಚಿತ್ರ "ಭಂಡ ನನ್ನ ಗಂಡ". 14 ಲಕ್ಷದಲ್ಲಿ ತಯಾರಾದ ಆ ಚಿತ್ರ ಮೊದಲು ಬಿಡುಗಡೆಯಾಗಿ 67ಲಕ್ಷ ವ್ಯಾಪಾರವಾಗಿ ನನ್ನ ಇಂದಿನ ಬಹುತೇಕ ಆಸ್ತಿಗೆ ಆಸರೆಯಾಯಿತು. ಅಂದು ಕೊಂಡ ಜಾಗ ಇಂದು 3ಲಕ್ಷ ಬಾಡಿಗೆ ನೀಡುತ್ತಿದೆ. ಇಂದಿನ 18 ಕೋಟಿಯ ಆಸ್ತಿ. ಅಭಿಮಾನಕ್ಕೆ ಹೇಳಿದೆ.'' - ಜಗ್ಗೇಶ್

  'ತರ್ಲೆ ನನ್ ಮಗ ರಿಲೀಸ್ ಆಯ್ತು'

  ''ನನ್ನ ಚಿತ್ರ ಹಿಟ್ ಆದ ಮೇಲೆ ಪಂಚೆ ಒದರಿ ಎದ್ದರು 'ತರ್ಲೆ ನನ್ನ ಮಗ' ಟೀಂ... ನನ್ನ "ಭಂಡ ನನ್ನ ಗಂಡ" ಚಿತ್ರ ಎಲ್ಲರ ಸಹಾಯಕ್ಕೆ ಬಂತು.'' - ಜಗ್ಗೇಶ್

  ಡಬಲ್ ಮೀನಿಂಗ್ ಡೈಲಾಗ್ ಗೆ ಬ್ರ್ಯಾಂಡ್ ಆದೆ.!

  ''ಆದರೆ ಅಲ್ಲಿಯವರೆ ನನ್ನ ಮೇಲೆ ಇದ್ದ ಕಾಳಜಿ ಈ ಚಿತ್ರ ಬಂದ ಮೇಲೆ ಡಬಲ್ ಮೀನಿಂಗ್ ಅಂತ ಬ್ರಾಂಡ್ ಮಾಡಿಬಿಟ್ಟಿತು. ಅದರಿಂದ ಹೊರ ಬರಲು ನಾನು ಒಂದು ದಶಕ ಕಷ್ಟಪಟ್ಟೆ.'' - ಜಗ್ಗೇಶ್

  ಯಾರಿಂದ ಯಾರು?

  ''ಎಲ್ಲ ಬಲ್ಲ ನನ್ನ ಹಿತೈಶಿಗಳು ಕೆಲ ಸ್ವಯಂ ಸೃಷ್ಟಿತ ಬಳಗದ ಅವಿವೇಕಿಗಳ ಮಾತುಗಳು ಜಾಲತಾಣದಲ್ಲಿ ನೋಡಿ ನಿಮ್ಮ ಒಳ್ಳೆಯತನ ದಶಕಗಳಿಂದ ತುಟಿ ಬಿಚ್ಚದೆ ಕಂಡೋರ ಬಾಯಲ್ಲಿ ಆಡಿಸುತ್ತಿದ್ದಾರೆ. ಹಳೆಯ ದಿನ ಬರಹವಾಗಲಿ. ಯಾರಿಂದ ಯಾರು ಎಂದಾಗ ಮನಸಿನ ಮಾತು ಬರಹವಾಯಿತು.'' ಹೀಗಂತ ಫೇಸ್ ಬುಕ್ ನಲ್ಲಿ ಜಗ್ಗೇಶ್ ಬರೆದುಕೊಂಡಿದ್ದಾರೆ. ಅವರ ಸ್ಟೇಟಸ್ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ.

  English summary
  Kannada Actor Jaggesh has taken his Facebook account to reveal few facts about the making of Upendra's first directorial venture 'Tharle Nan Maga' and how he helped Upendra during those days.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more