»   » ಬಿಟ್ಟಿ ಪ್ರಚಾರ ಕೊಟ್ಟ ನವರಸ ನಾಯಕ ಜಗ್ಗೇಶ್.!

ಬಿಟ್ಟಿ ಪ್ರಚಾರ ಕೊಟ್ಟ ನವರಸ ನಾಯಕ ಜಗ್ಗೇಶ್.!

Posted By:
Subscribe to Filmibeat Kannada

ಒಂದ್ ಸಿನಿಮಾಗೆ ಕಥೆ ಎಷ್ಟು ಮುಖ್ಯವೋ...ಪಬ್ಲಿಸಿಟಿ ಕೂಡ ಅಷ್ಟೇ ಮುಖ್ಯ. ಸಿನಿಮಾನ ಚೆನ್ನಾಗಿ ಪ್ರಮೋಟ್ ಮಾಡಿದಾಗಲೇ ಜನರಿಗೆ ತಲುಪುದು. ಆದ್ರೆ, ಆ ಪ್ರಮೋಷನ್ ಮಾಡುವ ಭರದಲ್ಲೇ ವಿವಾದಗಳೂ ಎಳುತ್ತವೆ.

ಹಾಗ್ನೋಡಿದ್ರೆ, ಇತ್ತೀಚಿನ ದಿನಗಳಲ್ಲಿ ನೆಗೆಟಿವ್ ಪಬ್ಲಿಸಿಟಿನೇ ಜಾಸ್ತಿ. ಚಿತ್ರತಂಡ ಸಿಡಿಸುವ ಒಂದು ಬಾಂಬ್ ಗೆ ಇಡೀ ಕರ್ನಾಟಕ ಅಲ್ಲಾಡಬೇಕು. ಹಾಗಾದ್ರೆ ಮಾತ್ರ ಸಿನಿಮಾ ಗೆಲ್ಲೋದು ಅನ್ನೋದು ಈಗಿನ ಫಾರ್ಮುಲಾ.


ಆದ್ರೆ, ಈ ಫಾರ್ಮುಲಾ ಬೇಡವೇ ಬೇಡ ಅಂತ ರಿಯಲ್ ಸ್ಟಾರ್ ಉಪೇಂದ್ರ ಇಲ್ಲಿಯವರೆಗೂ ಸುಮ್ಮನೆ ಇದ್ದರು. 'ಉಪ್ಪಿ-2' ಚಿತ್ರ ಸೆಟ್ಟೇರಿದ್ದು ಕಳೆದ ವರ್ಷ. ಹೋದ ವರ್ಷದಿಂದ ಇಲ್ಲಿಯವರೆಗೂ ಚಿತ್ರದ ಬಗ್ಗೆ ಉಪೇಂದ್ರ ತುಟಿಕ್ ಪಿಟಿಕ್ ಅಂದಿಲ್ಲ.


Kannada Actor Jaggesh's possessiveness ; Says no place for 'Uppi-2' Promotions

ಅಸಲಿಗೆ, ತಮ್ಮದೇ ಶೈಲಿಯಲ್ಲಿ ಪೋಸ್ಟರ್ ಮತ್ತು ವಿಡಿಯೋ ತಯಾರಿಸುವ ಮೂಲಕ ಉಪೇಂದ್ರ ಫ್ಯಾನ್ಸ್ 'ಉಪ್ಪಿ-2' ಚಿತ್ರಕ್ಕೆ ಹೈಪ್ ಕ್ರಿಯೇಟ್ ಮಾಡುತ್ತಿದ್ದಾರೆ. ಮೊನ್ನೆ ಮೊನೆಯಷ್ಟೇ ಅದ್ದೂರಿಯಾಗಿ ಉಪೇಂದ್ರ 'ಉಪ್ಪಿ-2' ಚಿತ್ರದ ಆಡಿಯೋ ರಿಲೀಸ್ ಮಾಡಿದರು.


ಅಲ್ಲಿಂದಲೇ ನೋಡಿ, ಎಲ್ಲರ ಬಾಯಲ್ಲೂ 'ಉಪ್ಪಿ-2' ನುಲಿದಾಡೋಕೆ ಶುರು ಮಾಡಿದ್ದು. ನಿಜ ಹೇಳ್ಬೇಕು ಅಂದ್ರೆ, 'ಉಪ್ಪಿ-2' ಚಿತ್ರದ ಹಾಡುಗಳು ಅದ್ಭುತ ಅನ್ನೋ ಹಾಗೇನಿಲ್ಲ. ಆದರೂ, ಮಾರ್ಕೆಟ್ ನಲ್ಲಿ ಆಡಿಯೋ ಸೂಪರ್ ಹಿಟ್ ಆಗಿದೆ. ಅದಕ್ಕೆಲ್ಲಾ ಕಾರಣ, ಕಳೆದ ಮೂರು ದಿನಗಳಿಂದ ಆಗುತ್ತಿರುವ ವಿವಾದ. [ಟ್ವಿಟ್ಟರ್ ನಲ್ಲಿ ಜಗ್ಗೇಶ್ ವಿರುದ್ಧ ಉಪೇಂದ್ರ ಅಭಿಮಾನಿಗಳ ಯುದ್ಧ]


ನವರಸ ನಾಯಕ ಜಗ್ಗೇಶ್, 'ಉಪ್ಪಿ-2' ಚಿತ್ರದ 'ನೋ ಎಕ್ಸ್ ಕ್ಯೂಸ್ ಮೀ' ಹಾಡು ಕೇಳಿ ರೊಚ್ಚಿಗೆದ್ದರು. ಟ್ವಿಟ್ಟರ್ ನಲ್ಲಿ ತಮಗನಿಸಿದ್ದನ್ನ ನೇರವಾಗಿ ಹೇಳಿಯೇ ಬಿಟ್ಟರು. ಅಂದು ಟ್ವಿಟ್ಟರ್ ನಲ್ಲಿ ಎದ್ದ ಸುನಾಮಿ ಇನ್ನೂ ತಣ್ಣಗಾಗಿಲ್ಲ. [ಉಪೇಂದ್ರ ವಿರುದ್ಧ ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದ ಜಗ್ಗೇಶ್]


ನೆಗೆಟಿವ್ ಪಬ್ಲಿಸಿಟಿಯ ವಾಸ್ತವ ಜಗ್ಗೇಶ್ ಅವರಿಗೆ ಇದೀಗ ಅರ್ಥವಾಗಿರುವ ಹಾಗಿದೆ. ಅದನ್ನೂ ಕಿಂಡಲ್ ಮಾಡಿ ಜಗ್ಗೇಶ್ ಒಂದು ಟ್ವೀಟ್ ಮಾಡಿದ್ದಾರೆ.


Kannada Actor Jaggesh's possessiveness ; Says no place for 'Uppi-2' Promotions

''ನನ್ನ ಒಂದು ಟ್ವೀಟ್ ನಿಂದ ಒಂದು ಕನ್ನಡ ಚಿತ್ರಕ್ಕೆ ಪ್ರಚಾರದ ಹಣ ಉಳಿಯಿತು. ಒಂದು ಕೋಟಿ ಕೊಟ್ಟರೂ ಈ ಪ್ರಚಾರ ಯಾರಿಗೂ ಸಿಗುತ್ತಿರಲಿಲ್ಲ. ಉಪಯೋಗ ಆದರೆ ಥ್ಯಾಂಕ್ಸ್ ಅನ್ನಿ ಸಾಕು'' ಅಂತ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. [ಜಗ್ಗೇಶ್ ಬಾಯಲ್ಲಿ ಬ್ರಾಹ್ಮಣ V/S ಗೌಡ - ಟ್ವಿಟ್ಟರ್ ನಲ್ಲಿ ರಾದ್ಧಾಂತ.!]


ಏನಿದರ ಅರ್ಥ, ಇದೆಲ್ಲವೂ ಪ್ರೀ ಪ್ಲಾನ್ಡಾ? ಅಂತ ಅಪಾರ್ಥ ಮಾಡಿಕೊಳ್ಳಬೇಡಿ. ಎಲ್ಲವನ್ನೂ ಕ್ಲಿಯರ್ ಆಗಿ ಜಗ್ಗೇಶ್ ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.


Kannada Actor Jaggesh's possessiveness ; Says no place for 'Uppi-2' Promotions

ಯಾರಿಗೂ ಜಗ್ಗೇಶ್ ಬಿಟ್ಟಿ ಪಬ್ಲಿಸಿಟಿ ಕೊಡುತ್ತಿಲ್ಲ ಅನ್ನೋದು ಈ ಟ್ವೀಟ್ ನಿಂದ ಪಕ್ಕಾ ಆಗಿದೆ. ಈಗಲಾದರೂ ಉಪೇಂದ್ರ ಮಾತನಾಡಿದ್ರೆ, ವಿವಾದಕ್ಕೆ ಫುಲ್ ಸ್ಟಾಪ್ ಬೀಳಬಹುದೇನೋ.

English summary
Kannada Actor Jaggesh has taken his twitter account again to comment on Upendra directorial Kannada Movie 'Uppi-2'. This time Jaggesh clearly mentioned that his twitter account is not for 'Uppi-2' promotions.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada