For Quick Alerts
  ALLOW NOTIFICATIONS  
  For Daily Alerts

  'ಇರುವವರೆಗು ಸಂಬಂಧಗಳು, ಹೋದಮೇಲೆ ನೆನಪು ಮಾತ್ರ' ಎಂದಿದ್ದೇಕೆ ನಟ ಜಗ್ಗೇಶ್

  |

  ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಇತ್ತೀಚಿಗೆ ತಮ್ಮ ಸುಂದರ ಕುಟುಂಬದ ಫೋಟೋವನ್ನು ಹಂಚಿಕೊಂಡಿದ್ದಾರೆ. ಪತ್ನಿ ಪರಿಮಳ, ಇಬ್ಬರು ಮಕ್ಕಳು, ಸೊಸೆ ಮತ್ತು ಮೊಮ್ಮಗನ ಫೋಟೋವನ್ನು ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

  ಅಂದ್ಹಾಗೆ ಜಗ್ಗೇಶ್ ಇತ್ತೀಚಿಗಷ್ಟೆ ಪತ್ನಿ ಪರಿಮಳ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಕುಟುಂಬದರೆಲ್ಲರು ಸೇರಿ ಸರಳವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. ಇಡೀ ಕುಟುಂಬ ಪರಿಮಳ ಅವರ ಹುಟ್ಟುಹಬ್ಬದ ಸಂಭ್ರಮವನ್ನು ಎಂಜಾಯ್ ಮಾಡಿದ್ದಾರೆ. ಈ ಬಗ್ಗೆ ಜಗ್ಗೇಶ್ ಮಡದಿ ಪರಿಮಳನಿಗೆ ಸಣ್ಣಸಂತೋಷ ನೀಡಿದ ಪುಟ್ಟ ಸಂಸಾರದ ಸದಸ್ಯರು ಎಂದು ಬರೆದುಕೊಂಡಿದ್ದಾರೆ. ಮುಂದೆ ಓದಿ...

  ಹಳೆಯ ಫೋಟೋ ಶೇರ್ ಮಾಡಿ ಪತ್ನಿಗೆ ವಿಶ್

  ಹಳೆಯ ಫೋಟೋ ಶೇರ್ ಮಾಡಿ ಪತ್ನಿಗೆ ವಿಶ್

  ಜಗ್ಗೇಶ್ ಪ್ರೀತಿಯ ಮಡದಿ ಪರಿಮಳ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿ ಹಳೆಯ ಫೋಟೋವನ್ನು ಹಂಚಿಕೊಂಡಿದ್ದರು. 37 ವರ್ಷಗಳ ಹಿಂದೆ ಪರಿಮಳ ಅವರನ್ನು ಭೇಟಿ ಮಾಡಿದ ಸಮಯದ ಫೋಟೋ ಹಂಚಿಕೊಂಡು ಹಳೆಯ ನೆನಪು ಮೆಲುಕು ಹಾಕಿದ್ದರು. ಇದೀಗ ಇಡೀ ಕುಟುಂಬದ ಫೋಟೋವನ್ನು ಶೇರ್ ಮಾಡಿ, ಸುಂದರವಾದ ಪುಟ್ಟ ಕುಟುಂಬದ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರೆ.

  ಇರುವವರೆಗು ಸಂಬಂಧಗಳು ಹೋದಮೇಲೆ ನೆನಪುಮಾತ್ರ- ಜಗ್ಗೇಶ್

  ಇರುವವರೆಗು ಸಂಬಂಧಗಳು ಹೋದಮೇಲೆ ನೆನಪುಮಾತ್ರ- ಜಗ್ಗೇಶ್

  "ಮಡದಿ ಪರಿಮಳನಿಗೆ ಸಣ್ಣ ಸಂತೋಷ ನೀಡಿದ ನನ್ನ ಪುಟ್ಟ ಸಂಸಾರದ ಸದಸ್ಯರು. ಭೂಮಿಯಲ್ಲಿ ಇರುವಷ್ಟು ದಿನ ಮಾತ್ರ ಸಂತೋಷ ಸಂಬಂಧ, ನಂತರ ನೆನಪು ಮಾತ್ರದ ನಶ್ವರ ಜಗತ್ತು.

  ಸಾಧ್ಯವಾದಷ್ಟು ಸಂತೋಷಪಡೆದು ಹಂಚಿ ಬಾಳಿಬಿಡಬೇಕು. ಇರುವವರೆಗು ಸಂಬಂಧಗಳು ಹೋದಮೇಲೆ ನೆನಪುಮಾತ್ರ" ಎಂದಿದ್ದಾರೆ.

  ಪತ್ನಿಯ ಹುಟ್ಟುಹಬ್ಬದ ಸಂಭ್ರಮದಲ್ಲಿ ಜಗ್ಗೇಶ್

  ಪತ್ನಿಯ ಹುಟ್ಟುಹಬ್ಬದ ಸಂಭ್ರಮದಲ್ಲಿ ಜಗ್ಗೇಶ್

  "ಬದುಕಿನ ಚಿತ್ರಕಥೆ ದೇವರಿಂದ ಬರೆಯಲ್ಪಟ್ಟ ಕಥಾಸಂಗಮ ನಾವೆಲ್ಲಾ ಪಾತ್ರದಾರಿಗಳು ಮಾತ್ರ. ನಮ್ಮ ಬದುಕಿನ ಅದ್ಭುತ ಚಿತ್ರಕಥೆ ಬರೆದು ಅದರಲ್ಲಿ ಕೋಟ್ಯಂತರ ಪ್ರೀತಿಸುವ ನಿಮ್ಮ ಆತ್ಮಗಳನ್ನು ನಮ್ಮ ಬದುಕಿಗೆ ಸೇರಿಸಿದ ದೇವರಿಗೆ ಧನ್ಯವಾದ. ಪ್ರೀತಿಸುತ್ತ ಬಾಳುವ. ಪ್ರೀತಿ ದೇವರ ಇನ್ನೊಂದು ರೂಪ" ಎಂದು ಬರೆದುಕೊಂಡಿದ್ದಾರೆ.

  ಮುನಿರತ್ನ ಈ ದೊಡ್ಡ ಗುಣಕ್ಕೆ ನಾನು ಅವರ ಬೆಂಬಲಕ್ಕೆ ನಿಂತಿದ್ದೇನೆ | Filmibeat Kannada
  52ನೇ ವರ್ಷದ ಸಂಭ್ರಮದಲ್ಲಿ ಪರಿಮಳ

  52ನೇ ವರ್ಷದ ಸಂಭ್ರಮದಲ್ಲಿ ಪರಿಮಳ

  ಜಗ್ಗೇಶ್ ಅವರು ಪರಿಮಳ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರಿಗೆ 15 ವರ್ಷ ವಯಸ್ಸು. ಇದೀಗ ಪರಿಮಳ 52ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜಗ್ಗೇಶ್ ಮತ್ತು ಪರಿಮಳ ಅವರದ್ದು ಪ್ರೇಮ ವಿವಾಹ. ಪರಿಮಳ ಅವರಿಗೆ ಹದಿನೆಂಟು ವರ್ಷ ತುಂಬುವ ಮೊದಲೇ ಜಗ್ಗೇಶ್ ಅವರು ವಿವಾಹವಾಗಿದ್ದರು. ಇವರಿಬ್ಬರ ದಾಂಪತ್ಯ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿ ಇತ್ಯಾರ್ಥ ಆಗಿತ್ತು.

  English summary
  Kannada actor jaggesh shares his family photo. Jaggesh celebrates his wife birthday with his family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X