'8MM' ಬುಲೆಟ್ ಹಾರಿಸಲಿದ್ದಾರೆ ನವರಸ ನಾಯಕ ಜಗ್ಗೇಶ್
Recommended Video

ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮೂರು ದಶಕಗಳಲ್ಲಿ ಭಿನ್ನ ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತ ಬಂದಿರುವ ನವರಸ ನಾಯಕ ಜಗ್ಗೇಶ್ ಇದೀಗ ಹೊಚ್ಚ ಹೊಸ ಅವತಾರ ತಾಳಿದ್ದಾರೆ.
ಹೇಳಿ ಕೇಳಿ ಸ್ಲಿಮ್ ಆಗಿರುವ ನಟ ಜಗ್ಗೇಶ್ ಈಗ ಕಪ್ಪು ಬಣ್ಣದ ಪ್ಯಾಂಟು, ಶರ್ಟು, ಬೂಟು ತೊಟ್ಟು.. ಕೈಯಲ್ಲಿ ಗನ್ ಹಿಡಿದು ಖಡಕ್ ಪೋಸ್ ಕೊಟ್ಟಿದ್ದಾರೆ. ಮುಂದೆ ಓದಿರಿ...

'8MM' ಪೋಸ್ಟರ್ ರಿಲೀಸ್
'ವಾಸ್ತು ಪ್ರಕಾರ', 'ನೀರ್ ದೋಸೆ' ಚಿತ್ರಗಳ ಬಳಿಕ ನಟ ಜಗ್ಗೇಶ್ ಗ್ರೀನ್ ಸಿಗ್ನಲ್ ನೀಡಿರುವ ಸಿನಿಮಾ '8MM'. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆ ಆಗಿದೆ.

ವೃತ್ತಿಜೀವನದಲ್ಲಿಯೇ ವಿಭಿನ್ನ ಪಾತ್ರ
ನಟ ಜಗ್ಗೇಶ್ ರವರ ವೃತ್ತಿ ಜೀವನದಲ್ಲಿಯೇ ಇದು ವಿಭಿನ್ನ ಪಾತ್ರ ಅಂತ ಹೇಳಲಾಗಿದೆ. ಒಂದು ಕ್ರೈಂ ಸುತ್ತ ಹೆಣೆದಿರುವ '8MM' ಚಿತ್ರಕ್ಕೆ ಹರಿಕೃಷ್ಣ ಎಂಬುವರು ಆಕ್ಷನ್ ಕಟ್ ಹೇಳಲಿದ್ದಾರೆ. ಅಷ್ಟಕ್ಕೂ '8MM' ಅನ್ನೋದು ಬುಲೆಟ್ ಸೈಜ್.

ಎರಡು ವರ್ಷ ಕಷ್ಟಪಟ್ಟಿರುವ ನಟ ಜಗ್ಗೇಶ್
ತಮ್ಮ 55ನೇ ವಯಸ್ಸಿನಲ್ಲಿ ತೂಕ ಇಳಿಸಲು ನಟ ಜಗ್ಗೇಶ್ ತುಂಬಾ ಕಷ್ಟಪಟ್ಟಿದ್ದಾರೆ. ಈ ಕುರಿತು ಜಗ್ಗೇಶ್ ಟ್ವೀಟ್ ಮಾಡಿರುವುದು ಹೀಗೆ - ''ಈ ಲುಕ್ ಪಡೆಯಲು ನಾನು ತುಂಬಾ ಇಷ್ಟ ಪಟ್ಟಿದ್ದೇನೆ. ಎರಡು ವರ್ಷ ನಾನು ಉಪವಾಸ ಮಾಡಿ ವರ್ಕೌಟ್ ಮಾಡಿದ್ದೇನೆ''

ಸೆಪ್ಟೆಂಬರ್ 22 ರಂದು ಮುಹೂರ್ತ
ಸೆಪ್ಟೆಂಬರ್ 22 ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಮಧ್ಯಾಹ್ನ 12 ಗಂಟೆಗೆ '8MM' ಚಿತ್ರದ ಮುಹೂರ್ತ ನಡೆಯಲಿದೆ. ಮುಹೂರ್ತದ ಶಾಟ್ ಗೆ ರಾಕಿಂಗ್ ಸ್ಟಾರ್ ಯಶ್ ಕ್ಲಾಪ್ ಮಾಡಲಿದ್ದಾರೆ. ರಾಕ್ ಲೈನ್ ವೆಂಕಟೇಶ್ ಕ್ಯಾಮರಾ ಸ್ವಿಚ್ ಆನ್ ಮಾಡಲಿದ್ದಾರೆ. ಹೊಸ ಪ್ರಯೋಗಕ್ಕೆ ಮುಂದಾಗಿರುವ '8MM' ಚಿತ್ರಕ್ಕೆ ನಮ್ಮ ಕಡೆಯಿಂದಲೂ ಆಲ್ ದಿ ಬೆಸ್ಟ್.


Click it and Unblock the Notifications











