''ಕೆ.ಜಿ.ಎಫ್ ಫ್ಲಾಪ್ ಆಗುತ್ತೆ'' ಅಂದೋರಿಗೆ ಮಾತಲ್ಲೇ ಬಿಸಿ ಮುಟ್ಟಿಸಿದ ನಟ ಜಗ್ಗೇಶ್.!
Recommended Video

ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರ ಯಾವುದು ಅಂದ್ರೆ ನಿಸ್ಸಂಶಯವಾಗಿ ಹೇಳಬಹುದು 'ಕೆ.ಜಿ.ಎಫ್' ಅಂತ.! ಅಷ್ಟರಮಟ್ಟಿಗೆ ಮೇಕಿಂಗ್ ಹಂತದಿಂದಲೇ ಕುತೂಹಲ ಕೆರಳಿಸಿದ ಸಿನಿಮಾ 'ಕೆ.ಜಿ.ಎಫ್'.
'ಉಗ್ರಂ' ಚಿತ್ರದ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ 'ಕೆ.ಜಿ.ಎಫ್'. ಅಲ್ಲದೇ ಇದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಚಿತ್ರ. 70-80 ರ ದಶಕದ ಪೀರಿಯಾಡಿಕ್ ಚಿತ್ರ ಇದಾಗಿದ್ದು, ಹಲವಾರು ವಿಶೇಷತೆಗಳಿಂದ ಈಗಾಗಲೇ 'ಕೆ.ಜಿ.ಎಫ್' ಸದ್ದು ಮಾಡಿದೆ.
ಇದೇ ತಿಂಗಳು 'ಕೆ.ಜಿ.ಎಫ್' ಟ್ರೈಲರ್ ರಿಲೀಸ್ ಆಗಲಿದ್ದು, ಡಿಸೆಂಬರ್ 21 ರಂದು ಚಿತ್ರ ಬಿಡುಗಡೆ ಆಗಲಿದೆ. ಅತ್ತ ಬಾಲಿವುಡ್ ನಲ್ಲಿ 'ಝೀರೋ' ಚಿತ್ರ ಕೂಡ ಡಿಸೆಂಬರ್ 21 ರಂದೇ ರಿಲೀಸ್ ಆಗುತ್ತಿದೆ. ಹೀಗಾಗಿ, ''ಝೀರೋ' ಮುಂದೆ ಯಶ್ ನಟನೆಯ 'ಕೆ.ಜಿ.ಎಫ್' ಫ್ಲಾಪ್ ಆಗುತ್ತೆ'' ಅಂತ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಅಂಥವರಿಗೆ ನವರಸ ನಾಯಕ ಜಗ್ಗೇಶ್ ತಮ್ಮ ಟ್ವೀಟ್ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಮುಂದೆ ಓದಿರಿ...
ಜಗ್ಗೇಶ್ ಮಾಡಿರುವ ಟ್ವೀಟ್ ಏನು.?
''ಕೆಲವರು ''ಝೀರೋ' ಮುಂದೆ 'ಕೆ.ಜಿ.ಎಫ್' ಫ್ಲಾಪ್ ಆಗುತ್ತೆ'' ಅಂತ ಮಾತನಾಡುತ್ತಿದ್ದಾರೆ'' ಎಂದು ಶ್ರೀನಿಧಿ ಎಂಬುವರು ಜಗ್ಗೇಶ್ ಹ್ಯಾಂಡಲ್ ಹಾಕಿ ಟ್ವೀಟ್ ಮಾಡಿದ್ದರು. ಅದಕ್ಕೆ ಜಗ್ಗೇಶ್ ಕೊಟ್ಟಿರುವ ಪ್ರತಿಕ್ರಿಯೆ - ''ಕನ್ನಡದ ಬೆಳವಣಿಗೆಗೆ ಶ್ರಮಿಸುವ ಯಾರೇ ಆಗಲಿ ಅವರ ಭುಜ ತಟ್ಟಿ ಹುರಿದುಂಬಿಸುವವನೇ ನಿಜವಾದ ಕನ್ನಡಿಗ. ಅಸೂಯೆ ಪಡುವವನು ಸಾಧಿಸಲಾಗದ ಸಾಧಿಸಿದವರನ್ನು ಸಹಿಸಲಾಗದ ನಿಶ್ಪ್ರಯೋಜಕ. ನಮ್ಮ ಕಲಾಬಂಧುಗಳಿಂದ ಕನ್ನಡ ಚಿತ್ರರಂಗ ಮುಂಚೂಣಿಗೆ ನುಗ್ಗುತ್ತಿದೆ ಹೆಮ್ಮೆಪಡಿ. ಪರಭಾಷಿಕರಿಗೆ ಕನ್ನಡ ಚಿತ್ರರಂಗ ಕುತೂಹಲ ಮೂಡಿಸುತ್ತಿದೆ. ಹೆಮ್ಮೆಯಿಂದ ಜೈ ಅನ್ನಿ''
ಜಗ್ಗೇಶ್ ಗೆ ಧನ್ಯವಾದ
''ಸ್ಯಾಂಡಲ್ ವುಡ್ ನ ಒಗ್ಗಟ್ಟಿಗೆ ಸಪೋರ್ಟ್ ಮಾಡಿದ ಜಗ್ಗೇಶ್ ಗೆ ಧನ್ಯವಾದ'' ಎಂದು ಚಂದನ್ ಎಂಬುವರು ಮಾಡಿದ ಟ್ವೀಟ್ ಗೆ, ''ನನ್ನ ಕನ್ನಡ ಚಿತ್ರರಂಗ ಸಹಸ್ರಾರು ವರ್ಷ ಪರಂಜ್ಯೋತಿಯಂತೆ ಪ್ರಜ್ವಲಿಸಬೇಕು. ಅದಕ್ಕಾಗಿ ನನ್ನ ಎಲ್ಲಾ ಕಲಾಬಂಧುಗಳಿಗೆ ನನ್ನ ಅರ್ಧ ಆಯುಷ್ಯ ಧಾರೆ ಎರೆಯಲು ಸಿದ್ಧ. ಹೆಮ್ಮೆಯಿದೆ ನನ್ನ ಕಲಾ ಕುಟುಂಬದ ಬಗ್ಗೆ'' ಅಂತ ಜಗ್ಗೇಶ್ ಟ್ವೀಟಿಸಿದ್ದಾರೆ.
ಬೆನ್ನಿಗೆ ಚೂರಿ ಹಾಕುವವರು
''ಬೇರೆಯವರಿಗಿಂತ ನಮ್ಮ ಕನ್ನಡದವರೇ ನಮ್ಮವರನ್ನ ತುಳಿಯೋದು ಜಾಸ್ತಿ'' ಅಂತ ವಿರಾಟ್ ಎಂಬುವರು ಟ್ವೀಟ್ ಮಾಡಿದ್ದರು. ಅದಕ್ಕೆ ನಟ ಜಗ್ಗೇಶ್, ''ಕನ್ನಡತಿ ಕಿತ್ತೂರು ಚೆನ್ನಮ್ಮನ ಬೆನ್ನಿಗೆ ಚೂರಿ ಹಾಕಿದವನು ಕನ್ನಡನಾಡಿನ ಅನ್ನ ತಿಂದ ಮಲ್ಲಪ್ಪನೇ ಅಲ್ಲವೇ.! ಎಲ್ಲಾ ಕಾಲದಲ್ಲೂ ಇಂತಹ ಮುಖವಾಡ ತೊಟ್ಟು ಬೆನ್ನಿಗೆ ಚೂರಿ ಹಾಕುವವರು ಇದ್ದೇ ಇರುತ್ತಾರೆ. ಅವರ ಸಂಖ್ಯೆ ಕಮ್ಮಿ. ಶಬ್ಧ ಜಾಸ್ತಿ.! ಉದಾಸೀನವೇ ಶ್ರೇಷ್ಠ.! ಅಂಥವರು ಅಭಿಮಾನದ ಕೋಟಿ ಹಸ್ತಗಳ ಚಪ್ಪಾಳೆ ಸದ್ದಿನಲ್ಲಿ ಕಳೆದು ಹೋಗುತ್ತಾರೆ.!'' ಎಂದು ಟ್ವೀಟ್ ಮಾಡಿದ್ದಾರೆ.

ನೀವೇನಂತೀರಿ.?
ರಾಷ್ಟ್ರಾದ್ಯಂತ ಸದ್ದು-ಸುದ್ದಿ ಮಾಡಿರುವ 'ಕೆ.ಜಿ.ಎಫ್' ಚಿತ್ರ 'ಝೀರೋ' ಮುಂದೆ ಝೀರೋ ಆಗುತ್ತಾ.? 'ಕೆ.ಜಿ.ಎಫ್' ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೀವು ನೋಡ್ತೀರಾ.? ಕನ್ನಡ ಚಿತ್ರಗಳನ್ನು ಕನ್ನಡಿಗರಾಗಿ ನೀವು ಚಿತ್ರಮಂದಿರಗಳಲ್ಲೇ ನೋಡಿ ಪ್ರೋತ್ಸಾಹಿಸುತ್ತೀರಾ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.


Click it and Unblock the Notifications











