»   » ಜಲ್ಲಿಕಟ್ಟು ನಿ‍ಷೇಧದ ಬಗ್ಗೆ ಜಗ್ಗೇಶ್ ಹೇಳಿದ್ದೇನು?

ಜಲ್ಲಿಕಟ್ಟು ನಿ‍ಷೇಧದ ಬಗ್ಗೆ ಜಗ್ಗೇಶ್ ಹೇಳಿದ್ದೇನು?

Posted By:
Subscribe to Filmibeat Kannada

ಜಲ್ಲಿಕಟ್ಟು ಆಚರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದನ್ನ ಖಂಡಿಸಿ ಇಡೀ ತಮಿಳುನಾಡು ಬೀದಿಗಿಳಿದು ಹೋರಾಟ ಮಾಡುತ್ತಿದೆ.

ಸಂಕ್ರಾಂತಿ ಹಬ್ಬದ ವಿಶೇಷವಾಗಿ ಮಧುರೈ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿ ಜಲ್ಲಿಕಟ್ಟು ಆಟವನ್ನ ಆಚರಣೆ ಮಾಡಿಕೊಂಡು ಬರಲಾಗುತ್ತಿದ್ದು, ಈಗ ಇಂತಹ ಸಂಪ್ರಾದಯವನ್ನ ನಿಲ್ಲಿಸುವುದು ಸರಿಯಲ್ಲ ಎಂಬ ಕೂಗು ತಮಿಳುನಾಡಿನ ಜನತೆ ಹಾಗೂ ಹಲವು ಕಲಾವಿದರು ವ್ಯಕ್ತಪಡಿಸಿದ್ದಾರೆ.[ಜಲ್ಲಿಕಟ್ಟು ಕ್ರೀಡೆ ಬಗ್ಗೆ ಸುಗ್ರೀವಾಜ್ಞೆ ತನ್ನಿ: ಶಶಿಕಲಾ ಆಗ್ರಹ]

Kannada Actor Jaggesh Talk About Jallikattu

ಇದೀಗ, ಜಲ್ಲಿಕಟ್ಟು ಆಚರಣೆ ವಿರೋಧ ಮಾಡಿರುವುದನ್ನ ಕನ್ನಡದ ನಟ ಜಗ್ಗೇಶ್ ಕೂಡ ಖಂಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್ '' ಜಲ್ಲಿಕಟ್ಟು ತಮಿಳರ ಸನಾತನ ಸ್ವಾಭಿಮಾನದ ಗ್ರಾಮೀಣಕ್ರೀಡೆ. ಎತ್ತುಗಳನ್ನ ತಮ್ಮ ಮಕ್ಕಳಂತೆ ಪ್ರೀತಿಸಿ ಸಾಕುತ್ತಾರೆ. ಸಾನಾತನ ಕ್ರೀಡೆಗೆ ತಡೆಯೊಡ್ಡಿ ತಪ್ಪು ಮಾಡಿತು ನ್ಯಾಯಾಂಗ! ಎಂದು ಟ್ವೀಟ್ ಮಾಡಿದ್ದಾರೆ.

Kannada Actor Jaggesh Talk About Jallikattu

ಅಷ್ಟೇ ಅಲ್ಲ ''ಈ ದೇಶದಲ್ಲಿ"ತಡೆ, ಅನುಮಾನ, ಚರ್ಚೆ, ವಿರೋಧ" ಏನೆ ಇದ್ದರು ಅದು ನಮ್ಮ ಹಿಂದುಗಳ ಆಚರಣೆಗೆ ಮಾತ್ರ! ಮುಂದೆ ಇಂಥ ನಿರ್ಣಯದಿಂದ ಹಿಂದುಗಳು ಅನಾಥರಾಗುವುದು ನಿಶ್ಚಿತ! ದೌರ್ಭಾಗ್ಯ!...'' ಎಂದು ಜಗ್ಗೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
Kannada Actor jaggesh has taken his twitter account to express his opinion about jallikattu controversy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada