ಹಣೆ ಬರಹ ಚೆನ್ನಾಗಿದ್ದು ಚಪ್ಪಾಳೆ ಬೀಳುವವರೆಗು ಮಾತ್ರ ಕಲಾವಿದ ಕೈಲಾಸದಲ್ಲಿರುತ್ತಾನೆ; ನಟ ಜಗ್ಗೇಶ್

ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಚಾರಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ದೇವರನ್ನು ಅಪಾರವಾಗಿ ನಂಬುವ ಜಗ್ಗೇಶ್ ಗುರು ರಾಯರ ಅಪ್ಪಟ ಭಕ್ತ. ಸದಾ ರಾಯರನ್ನು ನೆನೆಯುವ ಜಗ್ಗೇಶ್, ತಂದೆ-ತಾಯಿಯನ್ನು ಅಷ್ಟೆ ನೆನಪಿಸಿಕೊಳ್ಳುತ್ತಾ ಅವರನ್ನು ಪೂಜಿಸುತ್ತಾ, ಆರಾಧಿಸುತ್ತಾರೆ.

Recommended Video

ಅಭಿಮಾನಿ ಪ್ರಶ್ನೆಗೆ ಅಚ್ಚರಿಯ ಉತ್ತರ ಕೊಟ್ಟ Jaggesh | Filmibeat Kannada

ಇತ್ತೀಚಿಗಷ್ಟೆ ತಂದೆಯ ಹಟ್ಟುಹಬ್ಬದ ದಿನ ಅಪ್ಪನ ಜೊತೆಗೆ ಇರುವ ಫೋಟೋ ಹಂಚಿಕೊಂಡು ತಂದೆ-ತಾಯಿಯ ಮಹತ್ವದ ಬಗ್ಗೆ ಯುವ ಜನತೆಗೆ ಹೇಳಿದ್ದರು. ಇದೀಗ ಮತ್ತೊಂದು ವಿಚಾರವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಯೊಬ್ಬರು ಜಗ್ಗೇಶ್ ಗೆ, ಸಾಮಾನ್ಯವಾಗಿ ಸ್ಟಾರ್ಸ್ ಬ್ರಾಂಡ್ ಪ್ರಚಾರ ಮಾಡುತ್ತಿರುತ್ತಾರೆ. ಆದರೆ ನೀವು ಯುವ ಜನತೆಗೆ ಮೌಲ್ಯಯುತವಾದ ವಿಚಾರವನ್ನು ಹೇಳುತ್ತೀರಿ ಎಂದು ಹೇಳಿದ್ದಾರೆ.

ಇದಕ್ಕೆ ಉತ್ತರಿಸಿದ ಜಗ್ಗೇಶ್ 'ಏನೇ ದುಡಿದರು ಮನುಷ್ಯ ತಿನ್ನೋದು ಒಪ್ಪತ್ತಿಗೆ 300 grm ಅನ್ನ ಮಾತ್ರ. ಎಷ್ಟೇ ಬೆಳೆದರು ಅವನ ತಂದೆ ತಾಯಿ ಬದಲಾಗರು. ಹಣೆಬರಹ ಚೆನ್ನಾಗಿದ್ದು ಚಪ್ಪಾಳೆ ಬೀಳುವವರೆಗು ಮಾತ್ರ ಕಲಾವಿದ ಕೈಲಾಸದಲ್ಲಿ. ಕೊನೆಗೆ ಮನುಷ್ಯನ ನೆನೆಯುವುದು ಗುಣ ನಡತೆಯಿಂದ ಮಾತ್ರ. ಅಪ್ಪ-ಅಮ್ಮ ಕಲಿಸಿದ ಗುಣವಿದು, ಕೊನೆಯವರೆಗು ಪಾಲಿಸಿ ಸತ್ತ ಮೇಲು ಬದುಕಲು ಯತ್ನಿಸುವೆ' ಎಂದು ಹೇಳಿದ್ದಾರೆ.

Kannada Actor Jaggesh talks about parents values

ಇತ್ತೀಚಿಗಷ್ಟೆ ತಂದೆ ತಾಯಿಯ ಬಗ್ಗೆ ಜಗ್ಗೇಶ್, 'ಜನ್ಮಕೊಟ್ಟ ತಂದೆಗೆ ತನ್ನ ಬೆಳವಣಿಗೆಗಿಂತ ಮಕ್ಕಳ ಬೆಳವಣಿಗೆ ನೋಡಲು ಶಬರಿಯಂತೆ ಕಾಯೋದು ಯಾಕೆ ಎಂದರೆ ಮಗ ಗೆದ್ದರೆ ತಾನು ಗೆದ್ದಂತೆ ತನ್ನ ವಂಶಗೆದ್ದಂತ ಭಾವ. ಎಲ್ಲಾ ಯುವ ಸಮಾಜಕ್ಕೂ ನನ್ನ ಸಂದೇಶ ದಯಮಾಡಿ ಎಷ್ಟೆ ಶ್ರಮವಾದರು ಅಪಮಾನವಾದರು, ಅವಮಾನವಾದರು ಸಹಿಸಿ ನಿಮ್ಮ ಮಿತಿಯಲ್ಲಿ ನಿಮ್ಮ ಇಷ್ಟ ಕ್ಷೇತ್ರದಲ್ಲಿ ಅಪ್ಪ ಬದುಕಿರುವಾಗಲೇ ಜೀವನ ಗೆದ್ದು ಅಪ್ಪನಿಗೆ ಹೆಮ್ಮೆ ಪಡುವಂತೆ ಮಾಡಿ' ಎಂದು ದೀರ್ಘವಾಗಿ ಬರೆದುಕೊಂಡಿದ್ದರು.

More from Filmibeat

English summary
Kannada Actor Jaggesh talks about parents values.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X