'ದಿ ವಿಲನ್'ಗೆ ಉಘೇ ಎಂದು ಹಾರೈಸಿ: ಕೋಟ್ಯಾಂತರ ಕನ್ನಡಿಗರಲ್ಲಿ ಜಗ್ಗೇಶ್ ಮನವಿ.!

By Harshitha

Recommended Video

TheVillain : ದಿ ವಿಲನ್ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಜಗ್ಗೇಶ್ ಹೇಳಿದ್ದೇನು..? v| Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯಿಸಿರುವ ಬಹು ಕೋಟಿ ವೆಚ್ಚದಲ್ಲಿ ತಯಾರಾಗಿರುವ ಸಿನಿಮಾ 'ದಿ ವಿಲನ್'. 'ಜೋಗಿ ಪ್ರೇಮ್' ಸಿನಿಮಾದಲ್ಲಿ ಸುದೀಪ್ ಹಾಗೂ ಶಿವಣ್ಣ ಒಂದಾಗ್ತಾರೆ ಎಂಬ ಸುದ್ದಿ ಬ್ರೇಕ್ ಆದಾಗಿನಿಂದಲೂ, 'ದಿ ವಿಲನ್' ಸಿನಿಮಾದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ.

ಬಹುತೇಕ ವಿದೇಶದಲ್ಲಿ ತಯಾರಾಗಿರುವ 'ದಿ ವಿಲನ್' ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದೇ ಭಾನುವಾರ (ಆಗಸ್ಟ್ 19) ಸಂಜೆ 5 ಗಂಟೆಗೆ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ವೈಟ್ ಆರ್ಕಿಡ್ ನಲ್ಲಿ 'ದಿ ವಿಲನ್' ಆಡಿಯೋ ರಿಲೀಸ್ ಸಮಾರಂಭ ನಡೆಯಲಿದೆ.

Kannada Actor Jaggesh tweets about Kannada Movie The Villain

'ದಿ ವಿಲನ್' ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಲಿ, 'ದಿ ವಿಲನ್' ಸಿನಿಮಾ ಧೂಳೆಬ್ಬಿಸಲಿ ಎಂದು ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

''ನನ್ನ ಮೂವರು ಸಹೋದರರು ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಹಾಗೂ ಜೋಗಿ ಪ್ರೇಮ್ ಸೇರಿ ಕನ್ನಡ ಚಿತ್ರರಂಗಕ್ಕೆ ಅದ್ಧೂರಿ ಚಿತ್ರ 'ದಿ ವಿಲನ್' ತಯಾರಿಸಿ ಭಾರತೀಯ ಚಿತ್ರರಂಗ ಕರ್ನಾಟಕದ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ. ಕನ್ನಡಿಗರು ಒಮ್ಮತದಿಂದ ಉಘೇ ಎಂದು ಹಾರೈಸಿ, ಹರಸಿ. ಭಾನುವಾರದ ಧ್ವನಿಸುರಳಿ ಬಿಡುಗಡೆಗೆ ನನ್ನ ಶುಭ ಹಾರೈಕೆ. ಧೂಳ್ ಎಬ್ಬಿಸಿ ಸಹೋದರರೇ..'' ಎಂದು ನಟ ಜಗ್ಗೇಶ್ ಟ್ವೀಟಿಸಿದ್ದಾರೆ.

ಅಂದ್ಹಾಗೆ, 'ದಿ ವಿಲನ್' ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಫೈನಲ್ ಆಗಿಲ್ಲ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ರೆಕಾರ್ಡ್ ವ್ಯೂಸ್ ಪಡೆದಿವೆ.

More from Filmibeat

English summary
Kannada Actor Jaggesh tweets about Kannada Movie 'The Villain'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X