Don't Miss!
- News ಚುನಾವಣೆ ಹೊತ್ತಲ್ಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಕೋರ್ಟ್ ಸಮನ್ಸ್: ಯಾಕೆ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದಿ ವಿಲನ್'ಗೆ ಉಘೇ ಎಂದು ಹಾರೈಸಿ: ಕೋಟ್ಯಾಂತರ ಕನ್ನಡಿಗರಲ್ಲಿ ಜಗ್ಗೇಶ್ ಮನವಿ.!
Recommended Video
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯಿಸಿರುವ ಬಹು ಕೋಟಿ ವೆಚ್ಚದಲ್ಲಿ ತಯಾರಾಗಿರುವ ಸಿನಿಮಾ 'ದಿ ವಿಲನ್'. 'ಜೋಗಿ ಪ್ರೇಮ್' ಸಿನಿಮಾದಲ್ಲಿ ಸುದೀಪ್ ಹಾಗೂ ಶಿವಣ್ಣ ಒಂದಾಗ್ತಾರೆ ಎಂಬ ಸುದ್ದಿ ಬ್ರೇಕ್ ಆದಾಗಿನಿಂದಲೂ, 'ದಿ ವಿಲನ್' ಸಿನಿಮಾದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ.
ಬಹುತೇಕ ವಿದೇಶದಲ್ಲಿ ತಯಾರಾಗಿರುವ 'ದಿ ವಿಲನ್' ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದೇ ಭಾನುವಾರ (ಆಗಸ್ಟ್ 19) ಸಂಜೆ 5 ಗಂಟೆಗೆ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ವೈಟ್ ಆರ್ಕಿಡ್ ನಲ್ಲಿ 'ದಿ ವಿಲನ್' ಆಡಿಯೋ ರಿಲೀಸ್ ಸಮಾರಂಭ ನಡೆಯಲಿದೆ.
'ದಿ ವಿಲನ್' ಹೊಸ ಪೋಸ್ಟರ್ ಔಟ್: ಒಬ್ಬೊಬ್ಬರದ್ದು ಒಂದೊಂದು ಅವತಾರ.!
'ದಿ ವಿಲನ್' ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಲಿ, 'ದಿ ವಿಲನ್' ಸಿನಿಮಾ ಧೂಳೆಬ್ಬಿಸಲಿ ಎಂದು ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ನನ್ನ ಮೂವರು ಸಹೋದರರು #ಕಿಚ್ಚಸುದೀಪ #ಶಿವರಾಜಕುಮಾರ #ಜೋಗಿಪ್ರೇಮ್ ಸೇರಿ ಕನ್ನಡ ಚಿತ್ರರಂಗಕ್ಕೆ ಅದ್ದೂರಿ ಚಿತ್ರ #ವಿಲನ್ ತಯಾರಿಸಿ ಭಾರತೀಯ ಚಿತ್ರರಂಗ ಕರ್ನಾಟಕದ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ..ಕನ್ನಡಿಗರು ಒಮ್ಮತದಿಂದ ಹುಗೆ ಎಂದು ಹಾರೈಸಿ ಹರಸಿ..
— ನವರಸನಾಯಕ ಜಗ್ಗೇಶ್ (@Jaggesh2) August 17, 2018
ಭಾನುವಾರದ ದ್ವನಿಸುರಳಿ ಬಿಡುಗಡೆಗೆ ನನ್ನ ಶುಭಹಾರೈಕೆ..ಧೂಳ್ ಎಬ್ಬಿಸಿ ಸಹೋದರರೆ..
''ನನ್ನ ಮೂವರು ಸಹೋದರರು ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಹಾಗೂ ಜೋಗಿ ಪ್ರೇಮ್ ಸೇರಿ ಕನ್ನಡ ಚಿತ್ರರಂಗಕ್ಕೆ ಅದ್ಧೂರಿ ಚಿತ್ರ 'ದಿ ವಿಲನ್' ತಯಾರಿಸಿ ಭಾರತೀಯ ಚಿತ್ರರಂಗ ಕರ್ನಾಟಕದ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ. ಕನ್ನಡಿಗರು ಒಮ್ಮತದಿಂದ ಉಘೇ ಎಂದು ಹಾರೈಸಿ, ಹರಸಿ. ಭಾನುವಾರದ ಧ್ವನಿಸುರಳಿ ಬಿಡುಗಡೆಗೆ ನನ್ನ ಶುಭ ಹಾರೈಕೆ. ಧೂಳ್ ಎಬ್ಬಿಸಿ ಸಹೋದರರೇ..'' ಎಂದು ನಟ ಜಗ್ಗೇಶ್ ಟ್ವೀಟಿಸಿದ್ದಾರೆ.
'ದಿ ವಿಲನ್' ಟೀಸರ್ ನೋಡಿ ಶಾನ್ವಿ ಮಾಡಿರುವ ಕಾಮೆಂಟ್ ಏನು.?
ಅಂದ್ಹಾಗೆ, 'ದಿ ವಿಲನ್' ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಫೈನಲ್ ಆಗಿಲ್ಲ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ರೆಕಾರ್ಡ್ ವ್ಯೂಸ್ ಪಡೆದಿವೆ.