For Quick Alerts
  ALLOW NOTIFICATIONS  
  For Daily Alerts

  ಕಷ್ಟದ ದಿನದಲ್ಲಿ ಕೆಲಸ ಕೊಟ್ಟು ಸಂಭಾವನೆ ನೀಡಿದ ರವಿಮಾಮನಿಗೆ ಜಗ್ಗೇಶ್ ಶುಭಾಶಯ

  By Harshitha
  |
  ರವಿಚಂದ್ರನ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಜಗ್ಗಣ್ಣ | Filmibeat kannada

  ಹೆಸರಿಗೆ 'ಏಕಾಂಗಿ' ಆದರೂ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ನಟ ಕ್ರೇಜಿ ಸ್ಟಾರ್ ರವಿಚಂದ್ರನ್. 'ಸಿನಿಮಾನೇ ಉಸಿರು' ಎಂದು ನಂಬಿರುವ ರವಿಚಂದ್ರನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ.

  80-90 ರ ದಶಕದಲ್ಲಿಯೇ ಲಕ್ಷಾಂತರ ರೂಪಾಯಿ ಬಂಡವಾಳ ಸುರಿದು ಸದಭಿರುಚಿಯ ಸಿನಿಮಾ ಮಾಡಿದವರು ರವಿಚಂದ್ರನ್. ಚಿತ್ರರಂಗದಲ್ಲಿ ತಾವು ಬೆಳೆಯುವುದರ ಜೊತೆಗೆ ಅನೇಕ ನಟ-ನಟಿಯರು ಹಾಗೂ ತಂತ್ರಜ್ಞರಿಗೂ ಭದ್ರ ಬುನಾದಿ ಹಾಕಿಕೊಟ್ಟವರು ರವಿಚಂದ್ರನ್.

  ನವರಸ ನಾಯಕ ಜಗ್ಗೇಶ್ ಕೂಡ ಕಷ್ಟದ ಸಮಯದಲ್ಲಿದ್ದಾಗ, ಅವರನ್ನ ಕೈಹಿಡಿದವರು ಇದೇ ರವಿಚಂದ್ರನ್. ಇಂತಿಪ್ಪ ರವಿಚಂದ್ರನ್ ಗೆ ಧನ್ಯವಾದ ಸಲ್ಲಿಸುವುದರ ಜೊತೆಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ ನಟ ಜಗ್ಗೇಶ್.

  'ರವಿಮಾಮ'ನಿಗೆ ವಿಭಿನ್ನವಾಗಿ ಶುಭಕೋರಿದ ದರ್ಶನ್, ಮನೋರಂಜನ್, ಸುನಿ'ರವಿಮಾಮ'ನಿಗೆ ವಿಭಿನ್ನವಾಗಿ ಶುಭಕೋರಿದ ದರ್ಶನ್, ಮನೋರಂಜನ್, ಸುನಿ

  ''1984 ರ ಕಷ್ಟದ ದಿನಗಳಲ್ಲಿ ಕೆಲಸ ಕೊಟ್ಟು, ಸಂಭಾವನೆ ನೀಡಿ ಬದುಕಿಗೆ ನಂಬಿಕೆ ಹುಟ್ಟಿಸಿದ ಕನ್ನಡದ ರಿಯಲ್ ಶೋ ಮ್ಯಾನ್ ಸಹೋದರ ರವಿಚಂದ್ರನ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನೂರ್ಕಾಲ ಸುಖವಾಗಿ ಬಾಳಿ. ನನ್ನಂತೆ ಅನೇಕರ ಆಶಾಜ್ಯೋತಿಯಾಗಿ.. ಲವ್ ಯು ಬ್ರೋ'' ಎಂದು ಟ್ವೀಟ್ ಮಾಡಿದ್ದಾರೆ ನಟ ಜಗ್ಗೇಶ್.

  ರವಿಚಂದ್ರನ್ ಸಿಕ್ಕಾಪಟ್ಟೆ ಕ್ರೇಜಿ, ಅಷ್ಟೇ ಮಿಸ್ಟರಿ ಎಂದ ಕಿಚ್ಚ ಸುದೀಪ್.!ರವಿಚಂದ್ರನ್ ಸಿಕ್ಕಾಪಟ್ಟೆ ಕ್ರೇಜಿ, ಅಷ್ಟೇ ಮಿಸ್ಟರಿ ಎಂದ ಕಿಚ್ಚ ಸುದೀಪ್.!

  ಅಂದ್ಹಾಗೆ, ಇಂದು ತಮ್ಮ 57 ನೇ ಜನ್ಮದಿನವನ್ನ ಅಭಿಮಾನಿಗಳ ಜೊತೆಗೆ ರವಿಚಂದ್ರನ್ ಸಂಭ್ರಮದಿಂದ ಆಚರಿಸಿಕೊಂಡರು.

  English summary
  Kannada Actor Jaggesh has taken his twitter account to wish Crazy Star Ravichandran.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X