»   » 'ತಾರಕ್' ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದ ನಟ ಜಗ್ಗೇಶ್

'ತಾರಕ್' ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದ ನಟ ಜಗ್ಗೇಶ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ 'ತಾರಕ್' ಇಂದು ರಾಜ್ಯಾದ್ಯಂತ ತೆರೆಗೆ ಬಂದಿದೆ. ಹೇಳಿ ಕೇಳಿ 'ತಾರಕ್' ದರ್ಶನ್ ಸಿನಿಮಾ. ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ ರವರ 'ತಾರಕ್' ಚಿತ್ರಕ್ಕೆ ನಿರೀಕ್ಷೆಯಂತೆಯೇ ಭರ್ಜರಿ ಓಪನ್ನಿಂಗ್ ಸಿಕ್ಕಿದೆ.

ಎಲ್ಲ ಚಿತ್ರಮಂದಿರಗಳಲ್ಲೂ 'ತಾರಕೋತ್ಸವ' ಜೋರಾಗಿ ನಡೆಯುತ್ತಿದೆ. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ 'ತಾರಕ್' ಚಿತ್ರ ಯಶಸ್ವಿ ಆಗಲಿ ಎಂದು ನವರಸ ನಾಯಕ ಜಗ್ಗೇಶ್ ಶುಭ ಹಾರೈಸಿದ್ದಾರೆ.

Kannada Actor Jaggesh wishes good luck for Darshan movie 'Tarak'

''ತಾರಕ್' ಸಿನಿಮಾ ಅದ್ಭುತ ಯಶಸ್ಸು ಕಂಡು, ಕನ್ನಡಿಗರನ್ನು ರಂಜಿಸಲಿ. ಜಮಾಯ್ಸಿ, ಚಿಂದಿ ಮಾಡಿ'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ದರ್ಶನ್ ವ್ಯಕ್ತಿತ್ವದ ಬಗ್ಗೆ ನಟ ಜಗ್ಗೇಶ್ ಮಾಡಿದ ಕಾಮೆಂಟ್ ಇದು.!

'ಡಿ ಬಾಸ್' ಚಿತ್ರಕ್ಕೆ ಶುಭ ಕೋರಿರುವ ನಟ ಜಗ್ಗೇಶ್ ಗೆ ದರ್ಶನ್ ಅಭಿಮಾನಿಗಳು ಥ್ಯಾಂಕ್ಸ್ ಹೇಳಿದ್ದಾರೆ.

'ಮಿಲನ' ಪ್ರಕಾಶ್ ಆಕ್ಷನ್ ಕಟ್ ಹೇಳಿರುವ 'ತಾರಕ್' ಸಿನಿಮಾ ಪಕ್ಕಾ ಕ್ಲಾಸ್ ಹಾಗೂ ಫ್ಯಾಮಿಲಿ ಎಂಟರ್ ಟೇನರ್. ದರ್ಶನ್, ಶಾನ್ವಿ, ಶ್ರುತಿ ಹರಿಹರನ್, ದೇವರಾಜ್ ಮುಖ್ಯಭೂಮಿಕೆಯಲ್ಲಿ ಇರುವ 'ತಾರಕ್' ಸಿನಿಮಾಗೆ ಪ್ರೇಕ್ಷಕರಂತೂ ಜೈಕಾರ ಹಾಕುತ್ತಿದ್ದಾರೆ.

English summary
Kannada Actor Jaggesh wishes good luck for Darshan movie 'Tarak'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada