»   » 'ಸರ್ವೇಜನಾ ಸುಖಿನೋಭವಂತೂ' ನಟ ಜಗ್ಗೇಶ್ ಆಶೀರ್ವಾದ

'ಸರ್ವೇಜನಾ ಸುಖಿನೋಭವಂತೂ' ನಟ ಜಗ್ಗೇಶ್ ಆಶೀರ್ವಾದ

Posted By:
Subscribe to Filmibeat Kannada

ಇವತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಅಂತ ಕನ್ನಡ ಸಿನಿ ಪ್ರಿಯರಿಗೆ ಗೊತ್ತು. ಆದ್ರೆ, ಇಂದೇ ನಟ ಜಗ್ಗೇಶ್ ಜನ್ಮದಿನ ಅನ್ನೋದು ನವರಸ ನಾಯಕನ ಭಕ್ತರಿಗೆ ಮಾತ್ರ ಗೊತ್ತು.

ಹುಟ್ಟುಹಬ್ಬವನ್ನ ಅಭಿಮಾನಿ ಬಳಗ ಮತ್ತು ಕುಟುಂಬದೊಂದಿಗೆ ಸರಳವಾಗಿ ಸೆಲೆಬ್ರೇಟ್ ಮಾಡುವ ನವರಸ ನಾಯಕ ಜಗ್ಗೇಶ್, ಇಂದು ತಮ್ಮ ಬರ್ತಡೇ ನಿಮಿತ್ತ ಮಂತ್ರಾಲಯಕ್ಕೆ ತೆರಳಿದ್ದಾರೆ.

kannada-actor-jaggesh-wishes-puneeth-rajkumar

ಮೊದಲಿನಿಂದಲೂ ಗುರು ರಾಯರ ಮೇಲೆ ಅಪಾರ ಭಕ್ತಿ ಹೊಂದಿರುವ ಜಗ್ಗೇಶ್, 'ಸರ್ವೇಜನಾ ಸುಖಿನೋಭವಂತೂ' ಅಂತ ಪ್ರಾರ್ಥಿಸುವುದಕ್ಕೆ ಮಂತ್ರಾಲಯಕ್ಕೆ ತೆರಳಿದ್ದಾರೆ. ಹಾಗಂತ ಖುದ್ದು ಟ್ವೀಟ್ ಮಾಡಿದ್ದಾರೆ ಜಗ್ಗೇಶ್.

ಇನ್ನೂ ನವರಸ ನಾಯಕನ ಹುಟ್ಟುಹಬ್ಬದಂದೇ ಅಪ್ಪು ಜನ್ಮದಿನ ಆದ್ರಿಂದ, ಜೂನಿಯರ್ ಗೆ ಸೀನಿಯರ್ ಜಗ್ಗು ವಿಶ್ ಮಾಡಿರುವ ಪರಿ ಇದು.

''ಯಾವ ಜನ್ಮದ ಪುಣ್ಯವೋ..ಡಾ.ರಾಜ್ ಮುದ್ದಿನ ಮಗ ಹಾಗು ಡಾ.ರಾಜ್ ಭಕ್ತನ ಹುಟ್ಟುಹಬ್ಬ ಒಂದೇ ದಿನ. ಆತ್ಮೀಯ ಪುನೀತ್ ಗೆ ಹುಟ್ಟುಹಬ್ಬದ ಶುಭಾಶಯ...ಲವ್ ಯೂ..'' ಅಂತ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. [ಶೇಷಾದ್ರಿ ವಿರುದ್ಧ 'ನವರಸ ನಾಯಕ'ನ ಟ್ವಿಟ್ಟರ್ ಪ್ರಹಾರ]

kannada-actor-jaggesh-wishes-puneeth-rajkumar

52 ನೇ ವಸಂತಕ್ಕೆ ಕಾಲಿಟ್ಟಿರುವ ಜಗ್ಗೇಶ್ ತಮ್ಮ ಜನ್ಮದಿನದ ಜೊತೆಗೆ 'ಸರ್ವೇಜನಾ ಸುಖಿನೋಭವಂತೂ' ಅಂತ ಎಲ್ಲರ ಒಳಿತಿಗಾಗಿ ಪ್ರಾರ್ಥನೆ ಮಾಡುತ್ತಿರುವುದು ಅವರ ಹೃದಯ ವೈಶಾಲ್ಯತೆಗೆ ಸಾಕ್ಷಿ. ನಮ್ಮ ಕಡೆಯಿಂದಲೂ ನವರಸ ನಾಯಕನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

English summary
Kannada Actor Jaggesh is celebrating his 52nd birthday along with Power Star Puneeth Rajkumar, who is also turning 40 today. Jaggesh has taken his twitter account to wish Puneeth Rajkumar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada