ಜೆ.ಕೆ ಹುಟ್ಟುಹಬ್ಬಕ್ಕೆ ಸಿಕ್ತು ಸರ್ಪ್ರೈಸ್ ಉಡುಗೊರೆಗಳು

By Bharath Kumar

ಕಿರುತೆರೆಯ 'ಸೂಪರ್ ಸ್ಟಾರ್', ಅಭಿಮಾನಿಗಳ ಪಾಲಿನ 'ಜೆಕೆ', ಸ್ಯಾಂಡಲ್ ವುಡ್ ನ 'ಹ್ಯಾಂಡ್ಸಮ್', ಬಾಲಿವುಡ್ 'ರಾವಣ' ಕಾರ್ತಿಕ್ ಜಯರಾಂಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ಜನುಮದಿನವನ್ನ ಆಚರಿಸಿಕೊಳ್ಳುತ್ತಿರುವ ಜೆಕೆಗೆ ಅಭಿಮಾನಿಗಳು, ಸ್ನೇಹಿತರು ಎಲ್ಲರೂ ವಿಶ್ ಮಾಡಿದ್ದಾರೆ. ಜೆಕೆಗೆ ಆತ್ಮೀಯರಾಗಿರುವ ಕಿಚ್ಚ ಸುದೀಪ್ ಕೂಡ ಶುಭಕೋರಿದ್ದಾರೆ. ಇನ್ನು ಜೆಕೆ ಹುಟ್ಟುಹಬ್ಬವನ್ನ ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತು ತಂಡ ವಿಶೇಷವಾಗಿ ಆಚರಿಸಿದೆ.

ಜೊತೆಗೆ ಜೆಕೆ ಅಭಿನಯದ 'ಕರಾಳ ರಾತ್ರಿ' ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಿದೆ. ಒಂದು ಸಮಯದಲ್ಲಿ ಯಶಸ್ಸಿಗಾಗಿ ಹುಡುಕುತ್ತಿದ್ದ ಜೆಕೆ ಅವರನ್ನ ಬೆನ್ನತ್ತಿ ಇಂದು ಯಶಸ್ಸು ಬರ್ತಿದೆ. ಸದ್ಯ, ಇಂಡಸ್ಟ್ರಿಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಜೆಕೆ ಹೊಸ ಭರವಸೆ ಮೂಡಿಸಿದ್ದಾರೆ. ವಿಭಿನ್ನ ಪಾತ್ರ, ವಿಭಿನ್ನ ಸಿನಿಮಾಗಳ ಮೂಲಕ ಹೊಸ ಸ್ಟೈಲ್ ನಲ್ಲಿ ಬರಲಿದ್ದಾರೆ. ಜೆಕೆ ಹುಟ್ಟುಹಬ್ಬ ಆಚರಣೆ ಹೇಗಿದೆ.? ಮುಂದೆ ಓದಿ....

ವೃದ್ಧಾಶ್ರಮದಲ್ಲಿ ಹುಟ್ಟುಹಬ್ಬ ಆಚರಣೆ

ವೃದ್ಧಾಶ್ರಮದಲ್ಲಿ ಹುಟ್ಟುಹಬ್ಬ ಆಚರಣೆ

ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತು ತಂಡದಿಂದ ಕಾರ್ತಿಕ್ ಜಯರಾಂ ಅವರ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಿಸಲಾಯಿತು. ವೃದ್ಧಾಶ್ರಮವೊಂದರಲ್ಲಿ ಹಿರಿಯರಿಗೆ ಊಟ ಬಡಿಸಿ, ಅವರ ಜೊತೆಗೆ ಜೆಕೆ ತಮ್ಮ ಜನುಮದಿನವನ್ನ ಆಚರಿಸಿದರು.

'ಕರಾಳ ರಾತ್ರಿ' ಟ್ರೈಲರ್ ಬಿಡುಗಡೆ

'ಕರಾಳ ರಾತ್ರಿ' ಟ್ರೈಲರ್ ಬಿಡುಗಡೆ

ಕಾರ್ತಿಕ್ ಜಯರಾಂ ಬರ್ತಡೇ ಪ್ರಯುಕ್ತ ಜೆಕೆ ಅಭಿನಯದ 'ಕರಾಳ ರಾತ್ರಿ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ದಯಾಳ್ ಪದ್ಮನಾಭನ್ ನಿರ್ದೇಶನ ಮಾಡಿದ್ದು, ಅನುಪಮಾ ಗೌಡ, ರಂಗಾಯಣ ರಘು, ಜಯಶ್ರೀನಿವಾಸನ್, ನವೀನ್ ಕೃಷ್ಣ ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

'ಮೇ 1' ಆಡಿಯೋ ಬಿಡುಗಡೆ

'ಮೇ 1' ಆಡಿಯೋ ಬಿಡುಗಡೆ

ಇನ್ನು ಜೆಕೆ ಅಭಿನಯದ 'ಮೇ 1' ಸಿನಿಮಾದ ಆಡಿಯೋ ಬಿಡುಗಡೆ ಇಂದು ಆಗಲಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಈ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ನಾಗೇಂದ್ರ ಅರಸ್ ನಿರ್ದೇಶನದ ಈ ಚಿತ್ರದಲ್ಲಿ ಸ್ಕ್ರಿಪ್ಟ್ ಕೆಲಸದಲ್ಲೂ ಜೆಕೆ ಕೆಲಸ ಮಾಡಿದ್ದಾರೆ.

ಬಾಲಿವುಡ್ ಮೊದಲ ಸಿನಿಮಾ

ಬಾಲಿವುಡ್ ಮೊದಲ ಸಿನಿಮಾ

ಕನ್ನಡದ ಸಿನಿಮಾಗಳ ಜೊತೆ ಜೆಕೆ ಬಾಲಿವುಡ್ ನಲ್ಲೂ ಮಿಂಚಲಿದ್ದಾರೆ. ಬಿಟೌನ್ ಧಾರಾವಾಹಿಯೊಂದರಲ್ಲಿ ರಾವಣ ಪಾತ್ರ ನಿರ್ವಹಿಸಿ ಮೋಡಿ ಮಾಡಿದ್ದ ಜೆಕೆ, ಈಗ 'ಓ ಪುಷ್ಪ ಐ ಹೆಟ್ ಟಿಯರ್ಸ್' ಚಿತ್ರದಲ್ಲಿ ಬಹುಮುಖ್ಯ ಪಾತ್ರವದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಆ ಚಿತ್ರ ಆರಂಭವಾಗಿದ್ದು, ಪೋಸ್ಟರ್ ಕೂಡ ಬಿಡುಗಡೆಯಾಗಿದೆ.

ಗೆಳೆಯನಿಗೆ ಶುಭಕೋರಿದ ಸುದೀಪ್

ಇನ್ನು ಕಾರ್ತಿಕ್ ಜಯರಾಂ ಅವರ ಆತ್ಮೀಯ ಸ್ನೇಹಿತ, ಸಿಸಿಎಲ್ ತಂಡದ ನಾಯಕ, ಇಂಡಸ್ಟ್ರಿಯಲ್ಲಿ ಜೊತೆಯಾಗಿರುವ ಸುದೀಪ್, ಜೆಕೆಗೆ ವಿಶ್ ಮಾಡಿದ್ದಾರೆ. ಟ್ವಿಟ್ಟರ್ ಮೂಲಕ ಜೆಕೆ ಬರ್ತಡೇಗೆ ಶುಭಹಾರೈಸಿದ್ದಾರೆ.

More from Filmibeat

English summary
Kannada actor Karthik Jayaram celebrates his 38th birthday. director dayal padmanabhan and kannada actor sudeep wish to jk. and jk starrer 'karaala rathri' movie trailer has released for his birthday special.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X