twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರರಂಗದ ದಿಕ್ಕು ಬದಲಿಸಿದ ಕಾಶಿನಾಥ್ ಅವರ 11 ಚಿತ್ರಗಳು

    By Bharath Kumar
    |

    ಕಾಶಿನಾಥ್ ಅವರ ಸಿನಿಮಾಗಳು ಅಂದ್ರೆ ಚಿತ್ರರಂಗದಲ್ಲಿ ಒಂದು ರೀತಿಯ ಕೆಟ್ಟ ಸಿನಿಮಾ ಎಂದು ನೋಡುವ ಮನೋಭಾವ ಇತ್ತು. ಮಡಿವಂತಿಕೆ, ಸಂಸ್ಕ್ರತಿ, ಆಚಾರ, ವಿಚಾರ, ಸಂಪ್ರದಾಯವನ್ನ ಬಿಂಬಿಸುವ ಸಿನಿಮಾಗಳು ಹೆಚ್ಚಾಗಿದ್ದ ಸಮಯದಲ್ಲಿ, ಅದಕ್ಕೆ ವಿರುದ್ಧವಾಗಿ ಕಾಶಿನಾಥ್ ಚಿತ್ರಗಳು ಬಂದವು. ಚಿತ್ರರಂಗವೆಲ್ಲ ಒಂದು ದಿಕ್ಕಿನಲ್ಲಿ ಹೋಗುತ್ತಿದ್ದರೇ, ಕಾಶಿನಾಥ್ ಅವರೇ ಇನ್ನೊಂದು ದಿಕ್ಕಿನಲ್ಲಿ ಸಾಗಿದರು.

    ಕೆಳವರ್ಗದ, ಮಧ್ಯಮ ವರ್ಗದ ಜನಗಳ ಚಿಕ್ಕ ಚಿಕ್ಕ ಸಮಸ್ಯೆಗಳನ್ನ ಕಥೆಯನ್ನಾಗಿಸಿ ಸಿನಿಮಾ ಮಾಡಿದರು. ವರದಕ್ಷಿಣೆ, ವಿಧವಾ ವಿವಾಹ, ಹೆಣ್ಣು ಭ್ರೂಣ ಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯ ಅಂತಹ ಸಾಮಾಜಿಕ ಸಮಸ್ಯೆಗಳನ್ನ ಹಾಸ್ಯದ ಮೂಲಕ ತೆರೆಮೇಲೆ ತರುತ್ತಿದ್ದರು. ಇಂದಿನ ಡಬಲ್ ಮೀನಿಂಗ್ ಡೈಲಾಗ್ ಗಳ ಟ್ರೆಂಡ್ ನ್ನ ಕಾಶಿನಾಥ್ ಆಗಲೇ ಪರಿಚಯಿಸಿದ್ದರು.

    ಕಾಶಿನಾಥ್ : ಪ್ರತಿಭಾವಂತ, ಸ್ವಾಭಿಮಾನಿ ಮತ್ತು ರೆಬೆಲ್

    ಒಬ್ಬ ಹೀರೋ, ಹೀಗೆ ದೇಹ ಹೊಂದಿರಬೇಕು, ಇಷ್ಟೇ ಹೈಟ್, ಇಷ್ಟೇ ತೂಕ, ಬಣ್ಣ, ಧ್ವನಿ ಹೊಂದಿರಬೇಕು ಎಂಬ ಕಟ್ಟಳೆಯನ್ನ ಮುರಿದ 'ಮನ್ಮಥರಾಜ'. ಕಾಶಿನಾಥ್ ಅವರು ನಟನೆ ಹಾಗೂ ನಿರ್ದೇಶನದಲ್ಲಿ ಯಶಸ್ಸು ಕಂಡಿದ್ದರು. 36ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಕಾಶಿನಾಥ್, ಕನ್ನಡ ಭಾಷೆಯಲ್ಲಿ 11, ಹಿಂದಿ, ತೆಲುಗಿನಲ್ಲಿ ತಲಾ 1 ಚಿತ್ರ ನಿರ್ದೇಶನ ಮಾಡಿದ್ದರು. ಕನ್ನಡ-13, ಹಿಂದಿ-2, ತೆಲುಗು-1 ಸಿನಿಮಾಗಳಿಗೆ ಚಿತ್ರಕಥೆ ಬರೆದು ನಿರ್ದೇಶನ ವನ್ನೂ ಮಾಡಿದ್ದರು. ಕಾಶಿನಾಥ್ ಇಷ್ಟು ಚಿತ್ರಗಳ ಪೈಕಿ ಅತ್ಯುತ್ತಮವೆನಿಸುವ 11 ಚಿತ್ರಗಳನ್ನ ಪಟ್ಟಿ ಮಾಡಲಾಗಿದೆ. ನಿಮಗೆ ಇಷ್ಟವಾದ ಚಿತ್ರಗಳನ್ನ ನೀವು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಬಹುದು. ಮುಂದೆ ಓದಿ.....

    ಚಿತ್ರರಂಗದ ದಿಕ್ಕು ಬದಲಿಸಿದ 'ಅನುಭವ'

    ಚಿತ್ರರಂಗದ ದಿಕ್ಕು ಬದಲಿಸಿದ 'ಅನುಭವ'

    1984ರಲ್ಲಿ ತೆರೆಕಂಡ ಮೆಗಾ ಹಿಟ್ ಸಿನಿಮಾ 'ಅನುಭವ'. ಕಾಶಿನಾಥ್ ನಿರ್ದೇಶನ ಮಾಡಿದ್ದ ಚೊಚ್ಚಲ ಸಿನಿಮಾ. ಉಮಾಶ್ರೀ ಮತ್ತು ಅಭಿನಯ ಎಂಬ ಇಬ್ಬರು ನಟಿಯರು ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾಗಿದ್ದರು. ವಿ.ಮನೋಹರ್ ಅದ್ಭುತ ಸಂಗೀತ ನೀಡಿದ್ದರು. ಯಶಸ್ವಿ 37 ವಾರಗಳು ಪ್ರದರ್ಶನವಾಗಿತ್ತು. ಹದಿಹರೆಯದ ಯುವಕ ಮತ್ತು ಯುವತಿಯ ಭಾವನೆಗಳು ಹೇಗಿರುತ್ತೆ ಎಂಬುದನ್ನ ಈ ಚಿತ್ರದಲ್ಲಿ ರೊಮ್ಯಾಂಟಿಕ್ ಆಗಿ ತೋರಿಸಲಾಗಿತ್ತು.

    ಕಾಶಿನಾಥ್ ಅಗಲಿಕೆಗೆ ಕಂಬನಿ ಮಿಡಿದ ಶಿವರಾಜ್ ಕುಮಾರ್ಕಾಶಿನಾಥ್ ಅಗಲಿಕೆಗೆ ಕಂಬನಿ ಮಿಡಿದ ಶಿವರಾಜ್ ಕುಮಾರ್

    ಅನಂತನ ಅವಾಂತರ

    ಅನಂತನ ಅವಾಂತರ

    1989 ರಲ್ಲಿ ಬಿಡುಗಡೆಯಾದ ಮತ್ತೊಂದು ಸೂಪರ್ ಹಿಟ್ ಸಿನಿಮಾ 'ಅನಂತನ ಅವಾಂತರ'. ಈ ಚಿತ್ರವನ್ನ ಕೂಡ ಕಾಶಿನಾಥ್ ನಿರ್ದೇಶನ ಮಾಡಿ, ನಟನೆ ಮಾಡಿದ್ದರು. ಹೊಸದಾಗಿ ಮದುವೆಯಾದ ಜೋಡಿಯ ಕಥೆ ಇದಾಗಿತ್ತು. ಈ ಚಿತ್ರದ 'ಕಮಾನ್ ಕಮಾನ್ ಕಾಮಣ್ಣ' ಹಾಡಂತೂ ಸೂಪರ್ ಡೂಪರ್ ಹಿಟ್ ಆಗಿತ್ತು.

    'ಸಾಮಾನ್ಯ'ರಂತೆ ಬಂದು 'ಅಸಾಮಾನ್ಯ'ರಾಗಿ ಹೊರಟ ಕಾಶಿನಾಥ್'ಸಾಮಾನ್ಯ'ರಂತೆ ಬಂದು 'ಅಸಾಮಾನ್ಯ'ರಾಗಿ ಹೊರಟ ಕಾಶಿನಾಥ್

    ಲವ್ ಮಾಡಿ ನೋಡು

    ಲವ್ ಮಾಡಿ ನೋಡು

    1989ರಲ್ಲಿ ತೆರೆಕಂಡಿದ್ದ ಇನ್ನೊಂದು ಕಾಮಿಡಿ ಸಿನಿಮಾ 'ಲವ್ ಮಾಡಿ ನೋಡು'. ಈ ಚಿತ್ರದಲ್ಲಿ ಕಾಶಿನಾಥ್, ಮಾಸ್ಟರ್ ಮಂಜುನಾಥ್ ಮತ್ತು ಶ್ರೀಲತಾ ಅಭಿನಯಿಸಿದ್ದರು. ಬಾಡಿಗೆ ಮನೆಯಲ್ಲಿರುವ ಯುವಕ ಮತ್ತು ಮನೆ ಮಾಲೀಕನ ಮಗಳ ನಡುವಿನ ಪ್ರೇಮಕಥೆ ಇದಾಗಿತ್ತು.

    ಮನ್ಮಥ ರಾಜ

    ಮನ್ಮಥ ರಾಜ

    1989ರಲ್ಲೇ ಬಿಡುಗಡೆಯಾದ ಚಿತ್ರ 'ಮನ್ಮಥ ರಾಜ'. ಈ ಚಿತ್ರದಲ್ಲಿ ಕಾಶಿನಾಥ್, ಸುಧಾರಾಣಿ, ಜಗ್ಗೇಶ್ ಅಭಿನಯಿಸಿದ್ದರು. ಇದೊಂದು ಲವ್ ಸ್ಟೋರಿಯಾಗಿದ್ದು, ನಾಯಕಿಯನ್ನ ಮೆಚ್ಟಿಸುವ ಯುವಕನಾಗಿ ಕಾಶಿನಾಥ್ ಕಾಣಿಸಿಕೊಂಡಿದ್ದರು.

    ಸುರ ಸುಂದಾರಂಗ

    ಸುರ ಸುಂದಾರಂಗ

    ನಾಲ್ಕು ನಟಿಯರ ನೆಚ್ಚಿನ ನಾಯಕನಾಗಿ ಕಾಣಿಸಿಕೊಂಡಿದ್ದ ಸಿನಿಮಾ 'ಸುರ ಸುಂದರಾಂಗ'. 1989ರಲ್ಲಿ ಸಿನಿಮಾ ರಿಲೀಸ್ ಆಗಿತ್ತು. ನಾಲ್ಕು ಬೇರೆ ಬೇರೆ ಯವತಿಯರ ಜೊತೆ ಚೆಲ್ಲಾಟ ಆಡುವ ಯುವಕನಾಗಿ ಕಾಶಿನಾಥ್ ಮಿಂಚಿದ್ದರು.

    ಪೋಲಿ ಕಿಟ್ಟಿ

    ಪೋಲಿ ಕಿಟ್ಟಿ

    1990ರಲ್ಲಿ ಮೂಡಿಬಂದಿದ್ದ ಸಿನಿಮಾ ಪೋಲಿ ಕಿಟ್ಟಿ. ಕಾಶಿನಾಥ್, ದೇವರಾಜ್, ಮಂಜುಳ ಶರ್ಮಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ರೋಮ್ಯಾಂಟಿಕ್ ಸಿನಿಮಾ. ರಸಿಕನಾಗಿದ್ದರೂ, ಯಾವ ಹುಡುಗಿ ಸಹವಾಸ ಇರುವುದಿಲ್ಲ. ನಂತರ ದೇವರಾಜ್ ಪ್ರೋತ್ಸಾಹದಿಂದ ಹುಡುಗಿಯನ್ನ ಹುಡುಕಿ, ಲವ್ ಮಾಡುವ ಕಿಟ್ಟಿ ಸಖತ್ ರಂಜಿಸಿದ್ದರು.

    ಚಪಲ ಚೆನ್ನಿಗರಾಯ

    ಚಪಲ ಚೆನ್ನಿಗರಾಯ

    1990ರಲ್ಲಿ ತೆರೆಕಂಡಿದ್ದ ಚಿತ್ರ 'ಚಪಲ ಚೆನ್ನಿಗರಾಯ'. ಕಾಶಿನಾಥ್, ವನಿತಾವಾಸು, ಕಲ್ಪನಾ ಮುಖ್ಯಭುಮಿಕೆಯಲ್ಲಿ ಅಭಿನಯಿಸಿದ್ದರು. ಅಪ್ಸರೆಯಂತಹ ಹೆಂಡ್ತಿ ಬೇಕು ಎಂದು ಕಾಯುತ್ತಿದ್ದ ನಾಯಕ, ನಿರೀಕ್ಷೆನೇ ಮಾಡದಂತಹ ದಡೂತಿ ಹೆಂಡ್ತಿ ಸಿಕ್ಕಾಗ ಹೇಗಾಗುತ್ತೆ ಎಂಬ ಕಥೆಯನ್ನ ಈ ಚಿತ್ರದಲ್ಲಿ ಹಾಸ್ಯದ ಮೂಲಕ ತೆರೆಮೇಲೆ ತಂದಿದ್ದರು.

    ಅಜಗಜಾಂತರ

    ಅಜಗಜಾಂತರ

    1991 ರಲ್ಲಿ ಬಿಡುಗಡೆಯಾದ ಚಿತ್ರ ಅಜಗಜಾಂತರ. ಕಾಶಿನಾಥ್, ಬ್ಯಾಂಕ್ ಜನಾರ್ಧನ್, ಅಂಜನಾ, ಸತ್ಯಭಾಮ ಅಭಿನಯಿಸಿದ್ದ ಯಶಸ್ವಿ ಚಿತ್ರ. ಶ್ರೀಮಂತ ಅತ್ತೆಗೆ ಮೋಸ ಮಾಡಿ ಮಗಳನ್ನ ಮದುವೆಯಾಗುವ ಯುವಕನ ಪಾತ್ರದಲ್ಲಿ ಕಾಶಿನಾಥ್ ಬಣ್ಣಹಚ್ಚಿದ್ದರು. ಈ ಚಿತ್ರವನ್ನ ಸ್ವತಃ ಕಾಶಿನಾಥ್ ಅವರೇ ನಿರ್ದೇಶನ ಮಾಡಿದ್ದರು.

    ಲವ್ ಟ್ರೈನಿಂಗ್

    ಲವ್ ಟ್ರೈನಿಂಗ್

    ಲವ್ ಮಾಡೋದು ಹೇಗೆ, ಲವ್ ಮಾಡೋಕೆ ಏನು ಅರ್ಹತೆ ಇರ್ಬೇಕು ಎಂಬ ಕಥೆಯೊಂದಿಗೆ ಮೂಡಿಬಂದ ಸಿನಿಮಾ 'ಲವ್ ಟ್ರೈನಿಂಗ್'. 1993 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಕಾಶಿನಾಥ್, ತಾರಾ, ಅಭಿನಯ, ಅಂಜಲಿ ಅಭಿನಯಿಸಿದ್ದರು.

    ಹಲೋ ಯಮ

    ಹಲೋ ಯಮ

    ಕಾಶಿನಾಥ್ ಅವರ ಕಾಮಿಡಿ ಕಲ್ಪನೆಗೆ ಹೊಸತನ ನೀಡಿದ್ದು 'ಹಲೋ ಯಮ' ಸಿನಿಮಾ. 1998 ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಸತ್ತ ಮೇಲೆ ಯಮನಿಂದ ವರ ಪಡೆದು ಮತ್ತೆ ಭೂಲೋಕಕ್ಕೆ ಬಂದು, ಯಮನಿಗೆ ಹೇಗೆಲ್ಲ ಆಟವಾಡಿಸುತ್ತಾನೆ ಎಂಬುದನ್ನ ಹಾಸ್ಯಮಯವಾಗಿ ತೋರಿಸಲಾಗಿತ್ತು. ಯಮನ ಪಾತ್ರದಲ್ಲಿ ದೊಡ್ಡಣ್ಣ ಹಾಗೂ ಚಿತ್ರಗುಪ್ತನ ಪಾತ್ರದಲ್ಲಿ ಸಾಧುಕೋಕಿಲಾ ಅಭಿನಯಿಸಿದ್ದರು.

    ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

    ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

    1999ರಲ್ಲಿ ತೆರೆಗೆ ಬಂದ ''ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು'' ಸಿನಿಮಾ ಟೈಟಲ್ ನಿಂದಲೇ ಸಂಚಲನ ಸೃಷ್ಟಿಸಿತ್ತು. ಈ ಇತ್ರದಲ್ಲಿ ವರದಕ್ಷಿಣೆ ಸುತ್ತ ಕಥೆ ಮಾಡಲಾಗಿತ್ತು. ಮದುವೆ ಎಂಬುದು ಒಂದು ವ್ಯವಹಾರ ಎಂದು ತೋರಿಸಲಾಗಿತ್ತು. ಸತ್ಯಭಾಮಾ, ಟೆನ್ನಿಸ್ ಕೃಷ್ಣ, ಕಾಶಿನಾಥ್ ಜೊತೆ ಅಭಿನಯಿಸಿದ್ದರು. ಈ ಚಿತ್ರವನ್ನ ಕೂಡ ಸ್ವತಃ ಕಾಶಿನಾಥ್ ಅವರೇ ನಿರ್ದೇಶನ ಮಾಡಿದ್ದರು.

    English summary
    Top 11 movies directed and acted by Kannada veteran actor kashinath. Kashinath passed away on Jan 18th in Shankara Cancer hospital, Chamarajpet Bengaluru.
    Thursday, January 18, 2018, 22:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X