»   » ಗುಡುಗಿದ ಕಿಚ್ಚ ಸುದೀಪ್: 'ಕಾಮುಕನನ್ನ ಗುಂಡಿಟ್ಟು ಕೊಲ್ಲಬೇಕು'

ಗುಡುಗಿದ ಕಿಚ್ಚ ಸುದೀಪ್: 'ಕಾಮುಕನನ್ನ ಗುಂಡಿಟ್ಟು ಕೊಲ್ಲಬೇಕು'

Posted By:
Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ಸದ್ಯ, ಚಿತ್ರವಲಯದಲ್ಲಿ ಭಯದ ವಾತಾವರಣವನ್ನ ಉಂಟುಮಾಡಿದೆ.

ಈ ಘಟನೆಯಿಂದ ನಟಿಯರು ಭಯಭೀತಗೊಂಡಿದ್ದರೇ, ಮತ್ತೊಂದೆಡೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂತಹ ಕೃತ್ಯಗಳನ್ನ ಮಾಡುವ 'ಕಾಮುಕರನ್ನ ಗುಂಡಿಟ್ಟು ಕೊಲ್ಲಬೇಕು' ಎಂದು ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

ಕಾಮುಕರ ವಿರುದ್ಧ ಗುಡುಗಿದ 'ಕಿಚ್ಚ'

ನಟಿಯ ಮೇಲಿನ ದೌರ್ಜನ್ಯವನ್ನ ಖಂಡಿಸಿ ನಟ ಸುದೀಪ್ ಫುಲ್ ಗರಂ ಆಗಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ, ಕಾಮುಕರ ವಿರುದ್ಧ ಗುಡುಗಿದ್ದಾರೆ.

ಕಾಮುಕರನ್ನ ಗುಂಡಿಟ್ಟು ಕೊಲ್ಲಬೇಕು

"ನಾನು ಕೇಳಿದ ಸುದ್ದಿ ಸತ್ಯವೇ ಆಗಿದ್ದರೆ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯವಾಗಿರುವುದು ಸಾಬೀತಾಗಿದ್ದರೆ ಖಂಡಿತಾ ಆ ಕಾಮುಕನನ್ನು ಗುಂಡಿಟ್ಟು ಕೊಲ್ಲಬೇಕು'' ಎಂದು ಸುದೀಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಸ್ತ್ರೀಗೆ ಗೌರವ ಕೊಡದಿದ್ದರೇ, ತಾಯಿಗೂ ಕೊಡಲ್ಲ

''ಪರ ಸ್ತ್ರೀಯರನ್ನು ಗೌರವದಿಂದ ಕಾಣದವನು ತನ್ನ ತಾಯಿಗೂ ಗೌರವ ಕೊಡುವುದಿಲ್ಲ. ಇದು ಕೇವಲ ಓರ್ವ ನಟಿ ಎಂದಷ್ಟೇ ಅಲ್ಲ ಓರ್ವ ಮಹಿಳೆಗೆ ಆದ ನೋವಿಗಾಗಿ ನಾನು ಪ್ರತಿಕ್ರಿಯಿಸುತ್ತಿದ್ದೇನೆ'' ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಹೆಣ್ಣಿಗೆ ಹಿಂಸೆ ಮಾಡುವವರು ಮನುಷ್ಯರಲ್ಲ

''ದೈಹಿಕವಾಗಿ ಶಕ್ತಿವಂತನಾಗಿದ್ದೇನೆ ಎಂದು ಮಹಿಳೆಯರಿಗೆ ಕಿರುಕುಳ ನೀಡುವವರನ್ನ ಮನುಷ್ಯರು ಎನ್ನುವುದಿಲ್ಲ. ನೋವು ಅನುಭವಿಸಿದ ಮಹಿಳೆಗಷ್ಟೇ ತಾನು ಎಂತಹ ಪರಿಸ್ಥಿತಿಯಲ್ಲಿದ್ದೇನೆ ಎಂದು ತಿಳಿಯುತ್ತದೆ'' ಎಂದು ಬೇಸರ ವ್ಯಕ್ತಪಡಿಸಿದರು.

ಫೆಬ್ರವರಿ 17 ರಂದು ನಡೆದಿದ್ದ ಘಟನೆ

''ಫೆಬ್ರವರಿ 17 ರಂದು ರಾತ್ರಿ ಕೇರಳದ ಎರ್ನಾಕುಲಂನಿಂದ ಚಿತ್ರೀಕರಣ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿದ್ದ ನಟಿಯನ್ನ ಮಾರ್ಗ ಮಧ್ಯೆ ಅಪಹರಣ ಮಾಡಿದ ಹಾಲಿ ಮತ್ತು ಮಾಜಿ ಚಾಲಕರು ದುಷ್ಕರ್ಮಿಗಳ ನೆರವಿನಿಂದ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಪರಾರಿಯಾಗಿದ್ದರು.

ಕಿಚ್ಚನ ಜೊತೆ ಅಭಿನಯಿಸಿದ್ದ ನಟಿ

ಸುದೀಪ್ ಅಭಿನಯದ ಚಿತ್ರಗಳಲ್ಲಿ ಈ ಬಹುಭಾಷಾ ನಟಿ ಅಭಿನಯಿಸಿದ್ದರು.

English summary
Kannada Actor Kiccha Sudeep is annoyed with Actress Abduction and has reacted to the issue.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada