For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ್ದು ಯಾಕೆ?

  By Naveen
  |
  ಚುನಾವಣೆ ಹೊಸ್ತಿಲಲ್ಲಿ ಸಿಎಂ ಭೇಟಿ ಮಾಡಿದ ಸುದೀಪ್ | Filmibeat Kannada

  ನಟ ಸುದೀಪ್ ಇತ್ತೀಚಿಗಷ್ಟೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು. ಚುನಾವಣೆ ಹೊತ್ತಿನಲ್ಲಿ ಇವರಿಬ್ಬರ ಬೇಟಿ ತುಂಬ ಕುತೂಹಲ ಮತ್ತು ಚರ್ಚೆ ಉಂಟು ಮಾಡಿತ್ತು. ಆದರೆ ಕುಮಾರಸ್ವಾಮಿ ನಂತರ ಸುದೀಪ್ ಇದೀಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಬೇಟಿ ಮಾಡಿದ್ದಾರೆ.

  ಸ್ಯಾಂಡಲ್ ವುಡ್ ನಲ್ಲಿ 'T-10' ಕ್ರಿಕೆಟ್ ಟೂರ್ನಿ ಸ್ಯಾಂಡಲ್ ವುಡ್ ನಲ್ಲಿ 'T-10' ಕ್ರಿಕೆಟ್ ಟೂರ್ನಿ

  ಇಂದು (ಗುರುವಾರ) ಬೆಳ್ಳಗೆ ಮುಖ್ಯಮಂತ್ರಿ ಅವರ ಅಧಿಕೃತ ನಿವಾಸ ಕಾವೇರಿಗೆ ಸುದೀಪ್ ಆಗಮಿಸಿದ್ದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜೊತೆಗೆ ಕೆಲ ಕಾಲ ಮಾತನಾಡಿದರು. ಇನ್ನು ಕರ್ನಾಟಕದಲ್ಲಿ ಎಲೆಕ್ಷೆನ್ ಹತ್ತಿರ ಇರುವ ಈ ಸಮಯದಲ್ಲಿ ಸುದೀಪ್ ರಾಜಕಾರಣಿಗಳನ್ನು ಯಾಕೆ ಭೇಟಿ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಮೂಡಿಸಿದೆ. ಜೊತೆಗೆ ಸುದೀಪ್ ರಾಜಕೀಯಕ್ಕೆ ಬರುತ್ತಾರಾ ಅಥವಾ ಅವರು ಈ ಬಾರಿಯ ಚುನಾವಣೆಗೆ ಯಾವ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಾರೆ ಎನ್ನುವ ಕುತೂಹಲ ಸಹ ಹೆಚ್ಚಾಗಿದೆ. ಆದರೆ ಸುದೀಪ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಬೇಟಿ ಮಾಡಿರುವ ಹಿಂದೆ ಯಾವುದೇ ರಾಜಕೀಯ ಕಾರಣಗಳು ಇಲ್ಲ.

  ನಟ ಸುದೀಪ್ ಸಾರಥ್ಯದಲ್ಲಿ ಬರುತ್ತಿರುವ 'ಕೆ ಸಿ ಸಿ' (ಕನ್ನಡ ಚಲನಚಿತ್ರ ಕಪ್) ಕ್ರಿಕೆಟ್ ಪಂದ್ಯದ ಉದ್ಗಾಟನೆಯ ಕಾರ್ಯಕ್ರಮ ಏಪ್ರಿಲ್ 7 ರಂದು ಅದ್ದೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬರಲು ಸಿಎಂ ಸಿದ್ಧರಾಮಯ್ಯ ಅವರನ್ನು ಸುದೀಪ್ ಆಹ್ವಾನಿಸಿದ್ದಾರೆ. ಅಂದಹಾಗೆ, 'ಕೆ ಸಿ ಸಿ' ಕ್ರಿಕೆಟ್ ಪಂದ್ಯ ಈ ವರ್ಷದಿಂದ ಶುರು ಆಗಿದೆ. ಕನ್ನಡ ಚಿತ್ರರಂಗದ ಕಲಾವಿದರು ಮತ್ತು ಪತ್ರಕರ್ತರ ನಡುವೆ ಪಂದ್ಯಗಳು ನಡೆಯುತ್ತದೆ. ಒಟ್ಟು ಆರು ತಂಡಗಳು ಈ ಟೂರ್ನಿ ಯಲ್ಲಿ ಭಾಗಿಯಾಗಲಿದ್ದು, ಸುದೀಪ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ನಿರ್ದೇಶಕ ನಂದಕಿಶೋರ್, ಇಂದ್ರಜೀತ್ ಲಂಕೇಶ್, ನಿರ್ಮಾಪಕ ಶ್ರೀಕಾಂತ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಇದು 'ಟಿ 10' ಪಂದ್ಯವಾಗಿದ್ದು, ಪ್ರತಿ ತಂಡಕ್ಕೆ 10 ಓವರ್ ನೀಡಲಾಗುವುದು.

  English summary
  Kannada Actor Sudeep met chief minister Siddaramaiah at the CM residence Today (Aprli 5th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X