ಎಂ.ಎಸ್ ಧೋನಿ ಹುಟ್ಟುಹಬ್ಬ: ಕಾಮನ್ ಡಿಪಿ ರಿಲೀಸ್ ಮಾಡಿ ಸುದೀಪ್ ಹೇಳಿದ್ದೇನು?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಕ್ರಿಕೆಟ್ ಅಂದರೆ ತುಂಬಾ ಇಷ್ಟ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿರುವುದೆ. ಅದರಲ್ಲೂ ಕಿಚ್ಚ, ಎಂ.ಎಸ್ ಧೋನಿಯ ಅಪ್ಪಟ ಅಭಿಮಾನಿ. ಆಗಾಗ ಧೋನಿ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತಿರುತ್ತಾರೆ. ಇದೀಗ ಧೋನಿ ಹುಟ್ಟುಹಬ್ಬ ಸಮೀಪಿಸುತ್ತಿದೆ. ಟೀ ಇಂಡಿಯಾದ ಮಾಜಿ ಕ್ಯಾಪ್ಟನ್ ಹುಟ್ಟಹಬ್ಬ ಸಂಭ್ರಮಕ್ಕೆ ಇನ್ನೇಳು ದಿನ ಬಾಕಿ ಇದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ನೆಚ್ಚಿನ ಕ್ರಿಕೆಟರ್ ಧೋನಿ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಧೋನಿ ಹುಟ್ಟುಹಬ್ಬ ಕಾಮನ್ ಡಿಪಿ ಸುದೀಪ್ ಬಿಡುಗಡೆ ಮಾಡಿದ್ದಾರೆ. ಟ್ವಿಟ್ಟರ್ ಧೋನಿ ಕಾಮನ್ ಡಿಪಿ ಶೇರ್ ಮಾಡಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.

ಅಂದಹಾಗೆ ಇಂದು ಸಂಜೆ ಸುದೀಪ್, ಧೋನಿ ಡಿಪಿ ಬಿಡುಗಡೆ ಮಾಡುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಕೊಂಚ ತಡವಾಗುತ್ತಿದ್ದಂತೆ ಧೋನಿ ಕಾಮನ್ ಡಿಪಿ ಎಲ್ಲಿ ಎಂದು ಪ್ರಶ್ನೆ ಮಾಡಲು ಪ್ರಾರಂಭಿಸಿದ್ದರು. ಬಳಿಕ ಸುದೀಪ್ ಟ್ವೀಟ್ ಮಾಡಿ, ಕೊಂಚ ತಡವಾಗುತ್ತಿದೆ ಎಂದು ಮಾಹಿತಿ ನೀಡಿದ್ರು.

Kannada Actor Kiccha Sudeep released MS Dhoni Common DP

ಬಳಿಕ ಕೆಲವೇ ಕ್ಷಣದಲ್ಲಿ ಧೋನಿ ಕಾಮನ್ ಡಿಪಿ ಬಿಡುಗಡೆ ಮಾಡಿದ್ರು. ಫೋಟೋ ಶೇರ್ ಮಾಡಿ, "ಎಲ್ಲರ ಹೀರೋ, ಎಲ್ಲರ ನೆಚ್ಚಿನ ಕ್ರಿಕೆಟರ್, ಪ್ರತಿಯೊಬ್ಬರ ಸ್ಟಾರ್, ಪ್ರತಿಯೊಬ್ಬರ ಸ್ಫೂರ್ತಿ. ಎಂ.ಎಸ್ ಧೋನಿ ಕಾಮನ್ ಡಿಪಿ ಬಿಡುಗಡೆ ಮಾಡುತ್ತಿರುವುದು ತುಂಬಾ ಸಂತಸವಾಗುತ್ತೆ. ಒಬ್ಬ ನಟನಾಗಿ ಅಲ್ಲ, ಅಭಿಮಾನಿಯಾಗಿ. ಹುಟ್ಟುಹಬ್ಬದ ಶುಭಾಶಯಗಳು" ಎಂದು ಹೇಳಿದ್ದಾರೆ.

Kannada Actor Kiccha Sudeep released MS Dhoni Common DP

Recommended Video

ಯಶ್ ಬೆಳೆದು ಬಂದ ಹಾದಿ | Filmibeat Kannada

ಟೀಂ ಇಂಡಿಯಾದ ಮಾಜಿ ಆಟಗಾರ ಎಂ.ಎಸ್ ಧೋನಿ ಜುಲೈ 7ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಅಭಿಮಾನಿಗಳು ಹಬ್ಬದಂತೆ ಹುಟ್ಟುಹಬ್ಬ ಸಂಭ್ರಮಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿ ವಿಶ್ ಮಾಡುವ ಮೂಲಕ ಅಭಿಮಾನ ಮೆರೆಯುತ್ತಾರೆ. ಇದೀಗ ಇನ್ನು ಏಳು ದಿನಗಳು ಬಾಕಿ ಇರುವಾಗಲೇ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

More from Filmibeat

English summary
Kannada Actor Kiccha Sudeep released MS Dhoni Common DP. MS Dhoni will celebrating his birthday on JUly 7th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X