ನಟಿ ಮಡೋನ್ನಾ ಜೊತೆ ಐಸ್ ಕ್ರೀಮ್ ಪಾರ್ಲರ್ ನಲ್ಲಿ 'ಕೋಟಿಗೊಬ್ಬ' ಸುದೀಪ

Recommended Video

ಸುದೀಪ್ ಅವರ ಕೋಟಿಗೊಬ್ಬ 3 ಸಿನಿಮಾದ ಮೇಕಿಂಗ್ ಫೋಟೋಸ್ ರಿಲೀಸ್ | FILMIBEAT KANNADA

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅಭಿನಯದ ಬಹು ನಿರೀಕ್ಷೆಯ 'ಕೋಟಿಗೊಬ್ಬ-3' ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಸುದೀಪ ಸದ್ಯ 'ಪೈಲ್ವಾನ್' ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಸಲ್ಮಾನ್ ಖಾನ್ ಜೊತೆ 'ದಬಾಂಗ್-3' ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಇದರ ನಡುವೆ ಈಗ 'ಕೋಟಿಗೊಬ್ಬ-3' ಚಿತ್ರ ಕೂಡ ಸದ್ದು ಮಾಡುತ್ತಿದೆ.

'ಕೋಟಿಗೊಬ್ಬ-3' ಸದ್ಯ ಐದನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು ಚಿತ್ರದ ಆಕ್ಷನ್ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆಯಂತೆ. ಇದರ ನಡುವೆ ಚಿತ್ರದ ಒಂದಿಷ್ಟು ಮೇಕಿಂಗ್ ಫೋಟೋಗಳು ರಿಲೀಸ್ ಆಗಿವೆ.

ಸುದೀಪ ಮತ್ತು ನಟಿ ಮಡೋನ್ನಾ ಸೆಬಾಸ್ಟಿಯನ್ ಇಬ್ಬರು ಐಸ್ ಕ್ರೀಮ್ ಪಾರ್ಲರ್ ನಲ್ಲಿ ಕುಳಿತಿರುವ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇಬ್ಬರ ರೋಮ್ಯಾಂಟಿಕ್ ದೃಶ್ಯ ಇದಾಗಿದ್ದು ಈ ಫೋಟೋ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

Kannada actor Kiccha Sudeep starrer Kotigobba-3 making photos released

ಮೊದಲ ಬಾರಿಗೆ 'ಕೋಟಿಗೊಬ್ಬ-3' ಚಿತ್ರದ ಮೇಕಿಂಗ್ ಫೋಟೋಗಳು ರಿಲೀಸ್ ಆಗಿದ್ದು ಕಿಚ್ಚನ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿದೆ. ಒಂದೆಡೆ 'ಪೈಲ್ವಾನ್' ಅಬ್ಬರ ಮತ್ತೊಂದೆಡೆ ಸಲ್ಮಾನ್ ಖಾನ್ ಜೊತೆ ಅಭಿನಯಿಸಿರುವ 'ದಬಾಂಗ್-3' ಚಿತ್ರದ ಹವಾ. ಇದರ ನಡುವೆ ಈಗ 'ಕೋಟಿಗೊಬ್ಬ-3' ಚಿತ್ರದ ಲುಕ್ ಕೂಡ ರಿವೀಲ್ ಆಗಿರುವುದು ಅಭಿಮಾನಿಗಳಿಗೆ ಧಮಾಕವಾಗಿದೆ.

Kannada actor Kiccha Sudeep starrer Kotigobba-3 making photos released

'ಕೋಟಿಗೊಬ್ಬ-3' ಶಿವ ಕಾರ್ತಿಕ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರಕ್ಕೆ ಸೂರಪ್ಪ ಬಾಬು ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಅಫ್ ತಾಬ್ ಶಿವದಾಸಾನಿ, ನವಾಬ್ ಶಾ ಮತ್ತು ಶ್ರದ್ಧಾ ದಾಸ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದೆ.

More from Filmibeat

English summary
Kannada actor Kiccha Sudeep starrer Kotigobba-3 making photos released. This movie is directed by Shiva Karthik.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X