'ಪೈಲ್ವಾನ್' ಮುಂಗಡ ಟಿಕೆಟ್ ಬುಕ್ಕಿಂಗ್ ಓಪನ್: ಮೊದಲ ಶೋ ಎಷ್ಟೊತ್ತಿಗೆ ಗೊತ್ತಾ?
Recommended Video
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಈ ವಾರ ದೊಡ್ಡ ಹಬ್ಬ. ಸುದೀಪಿಯನ್ಸ್ ಅಂತೂ ಪೈಲ್ವಾನ್ ಚಿತ್ರ ನೋಡುವ ಸಮಯ ಹತ್ತಿರ ಬಂದಿದೆ. ಈಗಾಗಲೆ ಪೈಲ್ವಾನ್ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ. ಅಭಿಮಾನಿಗಳಿಗೀಗ ಸಂತಸದ ಸುದ್ದಿ ಅಂದ್ರೆ ಇಂದಿನಿಂದ ಪೈಲ್ವಾನ್ ಮುಂಗಡ ಬುಕ್ಕಿಂಗ್ ಓಪನ್ ಆಗಿದೆ.
ಬುಕ್ ಮೈ ಶೋನಲ್ಲಿ ಪೈಲ್ವಾನ್ ಚಿತ್ರದ ಮುಂಗಡ ಬುಕ್ಕಿಂಗ್ ಮಾಡಬಹುದು. ಈಗಾಗಲೆ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ ಪೈಲ್ವಾನ್ ಐದು ಭಾಷೆಯಲ್ಲಿ ಸುಮಾರು 3000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ.
ಬುಕ್ ಮೈ ಶೋನಲ್ಲಿ ಸದ್ಯ ಕನ್ನಡ ಮತ್ತು ತಮಿಳು ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಇನ್ನು ಪೈಲ್ವಾನ್ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೆ ಮೊದಲ ಪ್ರದರ್ಶನ ಆಗಲಿದೆ. ಬೆಂಗಳೂರಿನ ಜಿಪಿ ನಗರದಲ್ಲಿರುವ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಬೆಳಗ್ಗೆ 5.30ಕ್ಕೆ ಮೊದಲ ಶೋ ಪ್ರಾರಂಭವಾಗುತ್ತಿದೆ.

ಕಾವೇರಿ ಚಿತ್ರಮಂದಿರ, ವಿದ್ಯಾ ಪೀಠ ಸರ್ಕಲ್ ಬಳಿ ಇರುವ ಚಂದ್ರೋದಯ ಚಿತ್ರಮಂದಿರ ಸೇರಿದಂತೆ ಅನೇಕ ಕಡೆ ಅರ್ಲಿ ಮಾರ್ನಿಂಗ್ ಶೋ ಇದೆ. ಅಲ್ಲದೆ ಅಭಿಮಾನಿಗಳಿಗಾಗಿ ಮಧ್ಯ ರಾತ್ರಿಯಿಂದನೆ ಪೈಲ್ವಾನ್ ಪ್ರದರ್ಶನ ಆದರು ಅಚ್ಚರಿ ಇಲ್ಲ. ಆದ್ರೆ ಬುಕ್ ಮೈ ಶೋನಲ್ಲಿ ಸದ್ಯ 5.30ಕ್ಕೆ ಮೊದಲ ಪ್ರದರ್ಶನ ತೋರಿಸುತ್ತಿದೆ.
ಮೊದಲ ಬಾರಿಗೆ ಕಿಚ್ಚ ಸುದೀಪ್ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಂಡು ಕುಸ್ತಿ ಅಖಾಡಕ್ಕೆ ಇಳಿದು ತೊಡೆ ತಟ್ಟಿ ನಿಂತಿದ್ದಾರೆ. ಹಾಗಾಗಿ ಪೈಲ್ವಾನ್ ಕಿಚ್ಚನನ್ನು ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಪೈಲ್ವಾನ್ ಗೆ ಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ.


Click it and Unblock the Notifications











