twitter
    For Quick Alerts
    ALLOW NOTIFICATIONS  
    For Daily Alerts

    'ಕೊಡಗಿಗೆ ಸುಸಜ್ಜಿತ ಆಸ್ಪತ್ರೆ ಬೇಕು' ಅಭಿಯಾನಕ್ಕೆ ಸುದೀಪ ಬೆಂಬಲ

    |

    Recommended Video

    ಉತ್ತಮ ಆಸ್ಪತ್ರೆಗಾಗಿ ಅಭಿಯಾನ ಶುರು | FILMIBEAT KANNADA

    ಕೊಡಗು ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಇಲ್ಲ ಎಂದು ಕೊಡಗು ಮಂದಿ ಉತ್ತಮ ಆಸ್ಪತ್ರೆಗಾಗಿ ಅಭಿಯಾನ ಶುರು ಮಾಡಿದ್ದಾರೆ. ಈ ಅಭಿಯಾನ ಪ್ರಾರಂಭವಾಗಿ ಕೆಲವು ದಿನಗಳಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ಈ ಅಭಿಯಾನಕ್ಕೀಗ ಕಿಚ್ಚ ಸುದೀಪ ಕೂಡ ಕೈ ಜೋಡಿಸಿದ್ದಾರೆ. #WeNeedEmergencyHospitalInKodagu ಹ್ಯಾಶ್ ಟ್ಯಾಗ್ ಬಳಸಿ ಸಾಕಷ್ಟು ಜನ ಟ್ವೀಟ್ ಮಾಡುವ ಮೂಲಕ ಬೆಂಬಲ ಸೂಚಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಪ್ರಾರಂಭವಾದ ಈ ಅಭಿಯಾನ ಸರ್ಕಾರ ಹಾಗು ಜನ ಪ್ರತಿನಿಧಿಗಳ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಲಾಗುತ್ತಿದೆ.

    ಕೊಡಗಿಗೆ ಸುಸಜ್ಜಿತ ಆಸ್ಪತ್ರೆ ಬೇಕು ಅಭಿಯಾನಕ್ಕೆ ಶಿವಣ್ಣ ಬೆಂಬಲ ಕೊಡಗಿಗೆ ಸುಸಜ್ಜಿತ ಆಸ್ಪತ್ರೆ ಬೇಕು ಅಭಿಯಾನಕ್ಕೆ ಶಿವಣ್ಣ ಬೆಂಬಲ

    ಈ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಟ್ವೀಟ್ ಮಾಡಿದ್ದಾರೆ. "ಕೊಡಗು ಸ್ನೇಹಿತರು ಮತ್ತು ಕುಟುಂಬದವರ ಬೆಂಬಲಕ್ಕೆ ಯಾವಾಗಲು ಇರುತ್ತೇನೆ. ನಾನು ಖಂಡಿತವಾಗಿ ಈ ಅಭಿಯಾನಕ್ಕೆ ಸಹಾಯ ಮಾಡುತ್ತೇನೆ. ನನ್ನ ಸಹಾಯ ಯಾವಾಗಲು ನನ್ನ ಜನತೆಗೆ ಇರುತ್ತೆ" ಎಂದು ಹೇಳುತ್ತಾ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.

    Kannada actor Kiccha Sudeep supports WeNeedEmergencyHospitalInKodagu campaign

    ಈಗಾಗಲೆ ಅನೇಕ ನಟ-ನಟಿಯರು ಬೆಂಬಲ ಸೂಚಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಶ್ಮಿಕಾ ಮಂದಣ್ಣ, ಕೃಷಿ ತಾಪಂಡ, ಹರ್ಷಿಕಾ ಪೂಣಚ್ಚ, ಸೇರಿದಂತೆ ಅನೇಕ ಕಲಾವಿದರು ಕೊಡಗು ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು ಅಭಿನಯಕ್ಕೆ ಕೈ ಜೋಡಿಸಿದ್ದಾರೆ.

    ಕೊಡಗು ಜಿಲ್ಲೆಯಲ್ಲಿ ಸರಿಯಾದ ಆಸ್ಪತ್ರೆಯ ವ್ಯವಸ್ಥೆ ಇಲ್ಲ. ಅನಾರೋಗ್ಯವಾದರೆ ಅಲ್ಲಿನ ಜನ ಮಂಗಳೂರು, ಬೆಂಗಳೂರು ಮೈಸೂರಿಗೆ ಹೋಗಬೇಕು.ಅಷಅಟು ದೂರ ರೋಗಿಗಳನ್ನು ಕರೆದುಕೊಂಡು ಹೋಗುವಾಗಲೆ ಎಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಒಂದು ಉತ್ತಮ ಆಸ್ಪತ್ರೆ ಕೊಡಗು ಜಿಲ್ಲಗೆ ಅಗತ್ಯವಿದೆ ಎಂದು ಅಭಿಯಾನ ಶುರು ಮಾಡಲಾಗಿದೆ.

    English summary
    Kannada actor Kiccha Sudeep supports WeNeedEmergencyHospitalInKodagu campaign. The campaign is to request the government for a hospital.
    Friday, June 14, 2019, 17:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X