11 ಗಂಟೆಗೆ ಕಿಚ್ಚ ಸುದೀಪ ಕೊಡ್ತಾರೆ ಬಿಗ್ ಸರ್ಪ್ರೈಸ್

Recommended Video

ಕನ್ನಡ ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಕೊಡಲಿದ್ದಾರೆ ಸರ್ಪ್ರೈಸ್ ಗಿಫ್ಟ್ | Oneindia Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ನಿನ್ನೆ ಸಂಜೆ(ಜುಲೈ 9) ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ಕಿಚ್ಚ ಸುದೀಪ್ ನಾಳೆ 11 ಗಂಟೆಗೆ ಅಭಿಮಾನಿಗಳ ಜೊತೆ ಒಂದು ಸಂತೋಷದ ವಿಚಾರ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.

ಅಭಿನಯ ಚಕ್ರವರ್ತಿ ಟ್ವೀಟ್ ಮಾಡುತ್ತಿದ್ದಂತೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಸುದೀಪ್ ಯಾವ ಸಂತಸದ ವಿಚಾರವನ್ನು ಹಂಚಿಕೊಳ್ಳಲಿದ್ದಾರೆ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಸುದೀಪಿಯನ್ಸ್. ಮೊನ್ನೆ ಮೊನ್ನೆಯಷ್ಟೆ ಬಹುನಿರೀಕ್ಷೆಯ ಪೈಲ್ವಾನ್ ಚಿತ್ರದ ಆಡಿಯೋ ರಿಲೀಸ್ ಡೇಟ್ ಅನೌನ್ಸ್ ಮಾಡಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿತ್ತು ಚಿತ್ರತಂಡ.

ಇವತ್ತು ಕಿಚ್ಚ ಹೇಳುತ್ತಿರುವ ಸಂತಸದ ವಿಚಾರ ಆಡಿಯೋ ರಿಲೀಸ್ ಗೆ ಸಂಬಂದಪಟ್ಟಿದ್ದ ಅಥವಾ ಪೈಲ್ವಾನ್ ಸಿನಿಮಾಗೆ ಸಂಬಂದಪಟ್ಟ ವಿಚಾರ ಇದ್ದರು ಇರಬಹುದು ಎನ್ನುವ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ. ಅಲ್ಲದೆ ಆಡಿಯೋ ರಿಲೀಸ್ ಗೂ ಮುನ್ನವೆ ಪೈಲ್ವಾನ್ ಸಿನಿಮಾದ ಆಡಿಯೋ ಬಿಟ್ ಅನ್ನು ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ನೀಡಿದರು ಅಚ್ಚರಿ ಇಲ್ಲ.

Kannada actor Kiccha Sudeep will give Surprise gift for his fans

ಸುದೀಪ್ ಕಡೆಯಿಂದ ಯಾವ ಸುದ್ದಿ ಹೊರಬೀಳಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ. ಅಲ್ಲದೆ ನಾಳೆ (ಜುಲೈ 11) ಪೈಲ್ವಾನ್ ಚಿತ್ರದ ಮೊದಲ ಹಾಡನ್ನು ರಿಲೀಸ್ ಮಾಡಲಿದೆ ಚಿತ್ರತಂಡ. ಒಟ್ನಲ್ಲಿ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಗಳನ್ನು ನೀಡುತ್ತಿರುವ ಅಭಿಮಾನಿಯ ಚಕ್ರವರ್ತಿ ಇಂದು ನೀಡುವ ಸರ್ಪ್ರೈಸ್ ಏನಾಗಿರಲಿದೆ ಎನ್ನುವುದು 11ಗಂಟೆಗೆ ಗೊತ್ತಾಗಲಿದೆ.

More from Filmibeat

English summary
Kannada actor Kiccha Sudeep will give Surprise gift for his fans. Fan are very curious about Sudeep gift.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X