'ಅಂಬಿ' ಬಗ್ಗೆ ಪ್ರೀತಿಯ ಪತ್ರ ಬರೆದ ಕಿಚ್ಚ ಸುದೀಪ್

ರೆಬೆಲ್ ಸ್ಟಾರ್ ಅಂಬರೀಶ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಡೀ ಕುಟುಂಬ ಕೂತು ನೋಡಬಹುದಾದ ಚಿತ್ರ ಇದಾಗಿರುವ ಕಾರಣ, 'ಅಂಬಿ ನಿಂಗ್ ವಯಸ್ಸಾಯ್ತೋ' ಹಲವೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರ ನೋಡಿ ಕನ್ನಡ ಚಿತ್ರರಂಗದ ತಾರೆಯರು ಬಹುಪರಾಕ್ ಎಂದಿದ್ದಾರೆ. 'ಅಂಬಿಗೆ ವಯಸ್ಸೇ ಆಗಿಲ್ಲ' ಅಂತ ಎಷ್ಟೋ ಮಂದಿ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ.

ಈ ಎಲ್ಲದರ ನಡುವೆ 'ಅಂಬಿ' ಬಗ್ಗೆ ಕಿಚ್ಚ ಸುದೀಪ್ ಒಂದು ಪ್ರೀತಿಯ ಪತ್ರ ಬರೆದಿದ್ದಾರೆ. ಅಂಬರೀಶ್ ವ್ಯಕ್ತಿತ್ವದ ಬಗ್ಗೆ ಸುದೀಪ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರವನ್ನ ಯಾರೂ ಮಿಸ್ ಮಾಡ್ಬೇಡಿ ಅಂತ ಕೇಳಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಬರೆದಿರುವ ಪತ್ರದ ಅನುವಾದ ಇಲ್ಲಿದೆ, ಓದಿರಿ...

ಯಾವುದೂ ಸುಲಭ ಅಲ್ಲ

ಯಾವುದೂ ಸುಲಭ ಅಲ್ಲ

ಅಂಬಿ..

ರೆಬೆಲ್​ ಸ್ಟಾರ್​ ಅಂಬರೀಶ್​ ವಿಷಯದಲ್ಲಿ ಯಾವುದೂ ಸುಲಭ ಅಲ್ಲ, ಯಾವುದೂ ಸುಲಭವಾಗಿ ಆಗೋದಿಲ್ಲ.! ನಾನು ಇದನ್ನ ಹೇಳ್ತಾ ಇರೋದು ಅವರ ವೃತ್ತಿ ಬದುಕಿನ ಬಗ್ಗೆ ಅಲ್ಲ, ಬದಲಾಗಿ ಅವರ ವ್ಯಕ್ತಿತ್ವದ ಬಗ್ಗೆ ಮಾತ್ರ.

ಅವರಿಗೆ ಹೇಗೆ ಬೇಕೋ ಹಾಗೆ ಜೀವನ ಸಾಗಿಸಿದ್ದಾರೆ. ಎಲ್ಲಾ ನಿರ್ಧಾರಗಳನ್ನು ಅವರೇ ತೆಗೆದುಕೊಂಡಿದ್ದಾರೆ. ಯಾವುದೇ ತೊಂದರೆಗೆ ಅವರು ಸಿಕ್ಕಿ ಹಾಕೊಂಡಿಲ್ಲ, ಬೇರೆಯವರಿಗೆ ತೊಂದರೆ ಕೊಟ್ಟಿದ್ದೂ ಇಲ್ಲ.

ಅಂಬಿ ವ್ಯಕ್ತಿತ್ವ

ಅಂಬಿ ವ್ಯಕ್ತಿತ್ವ

ಅವರ ಮಾತು ಅಷ್ಟು ನಯವಾಗಿ, ಮೃದುವಾಗಿ ಇರೋದಿಲ್ಲ, ಅವರ ಹಾವ ಭಾವ ಕೂಡ ಅಷ್ಟು ನಾಜೂಕಾಗಿ ಇರೋದಿಲ್ಲ. ಅದ್ರೆ ಅವ್ರೊಳಗೊಬ್ಬ ತದ್ವಿರುದ್ಧ ವ್ಯಕ್ತಿ ಇದ್ದಾನೆ. ಸಹಾಯ ಮಾಡುವ, ಪ್ರೀತಿ ಮಾಡುವ, ಹಾರೈಕೆ ಮಾಡುವ ಆ ವ್ಯಕ್ತಿಯ ಬಗ್ಗೆ ನಾನು ಹೇಳುತ್ತಾ ಇದ್ದೇನೆ.

ನಿರ್ಲಕ್ಷ್ಯ ಮಾಡುವ ವ್ಯಕ್ತಿತ್ವ ಅಲ್ಲ

ನಿರ್ಲಕ್ಷ್ಯ ಮಾಡುವ ವ್ಯಕ್ತಿತ್ವ ಅಲ್ಲ

ಅವ್ರನ್ನ ಸಂಪೂರ್ಣವಾಗಿ ಅರ್ಥ ಮಾಡಿಕೊಂಡವರಿಲ್ಲ. ಆದ್ರೆ ಯಾರೂ ಅಂಬಿ ಬಗ್ಗೆ ನಂಗೆ ಗೊತ್ತಿಲ್ಲ ಅಂತ ಹೇಳೋದೂ ಇಲ್ಲ. ಅದು ನಮ್ಮೊಳಗಿನ ಗೊಂದಲ ಅಷ್ಟೇ. ಯಾರು ಅವರ ಬಗ್ಗೆ ಏನೇ ಅಂದುಕೊಂಡರೂ, ಅವರದ್ದು ನಿರ್ಲಕ್ಷ್ಯ ಮಾಡುವ ವ್ಯಕ್ತಿತ್ವ ಅಲ್ಲ.

ಟಾಸ್ಕ್ ಆಗಿತ್ತು

ಟಾಸ್ಕ್ ಆಗಿತ್ತು

ಅವರ ಈ ಎಲ್ಲಾ ಗುಣಗಳನ್ನ ಅಂಬಿ ನಿಂಗ್​ ವಯಸ್ಸಾಯ್ತು ಸಿನಿಮಾದ ಪಾತ್ರಕ್ಕೆ ಅಳವಡಿಸೋದು ಒಂದು ಟಾಸ್ಕ್ ಆಗಿತ್ತು​​​​. ಇದನ್ನ ಇಡೀ ಚಿತ್ರತಂಡ ಯಶಸ್ವಿಯಾಗಿ ಮಾಡಿದೆ. ತೆರೆಮೇಲೆ ಅವರ ವ್ಯಕ್ತಿತ್ವವನ್ನು ಬಿಂಬಿಸುವ ಪ್ರಯತ್ನ ಮಾಡಿದ್ವಿ. ಬಹುಶಃ ಅವರು ಮಾಡಿರೋ ಪಾತ್ರ, ಅವ್ರ ನಿಜ ಜೀವನಕ್ಕೆ ತುಂಬಾ ಸಾಮ್ಯತೆಯಿಂದ ಕೂಡಿರುವ ಕಾರಣ, ಅವರು ಅಷ್ಟು ಲೀಲಾಜಾಲವಾಗಿ ನಟಿಸಿದ್ದಾರೆ. ಇದು ನಿಮ್ಮನ್ನ ಖುಷಿಯಿಂದ ಥಿಯೇಟರ್​ನಿಂದ ಹೊರಬರುವಂತೆ ಮಾಡ್ತಿದೆ. ಸಿನಿಮಾವನ್ನ ಸುಲಭಯಾಗಿ ಚೆನ್ನಾಗಿ ಮಾಡಿಕೊಟ್ಟ ಅವ್ರ ಡೆಡಿಕೇಷನ್​​​, ಎಫರ್ಟ್ ​​​ಗೆ ನನ್ನ ಸಲ್ಯೂಟ್​.

ಯಾರೂ ಮಿಸ್ ಮಾಡಬೇಡಿ

ಯಾರೂ ಮಿಸ್ ಮಾಡಬೇಡಿ

ಅಂಬಿ ನಿಂಗ್​ ವಯಸ್ಸಾಯ್ತೋ ಸಿನಿಮಾ ಯಾರೂ ಕೂಡ ಮಿಸ್​ ಮಾಡುವಂಥದ್ದಲ್ಲ. ನಾನು ಈ ಸಿನಿಮಾದ ಭಾಗವಾಗಿದ್ದೇನೆ ಅಂತ ಈ ಮಾತನ್ನ ಹೇಳ್ತಾ ಇಲ್ಲ. ಇದರಲ್ಲಿ ನಮ್ಮೆಲ್ಲ ಭಾವನೆಗಳು ಅಡಗಿವೆ.

ಇಂತಿ ನಿಮ್ಮ ಪ್ರೀತಿಯ ಕಿಚ್ಚ ಸುದೀಪ್

More from Filmibeat

English summary
Kannada Actor Kiccha Sudeep writes letter about 'Ambi'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X