'ದಿ ವಿಲನ್' ಚಿತ್ರವನ್ನ ಉದಾರವಾಗಿ ಬರಮಾಡಿಕೊಂಡ ಎಲ್ಲರಿಗೂ ಪ್ರೀತಿಯ ಅಪ್ಪುಗೆ ನೀಡಿದ ಸುದೀಪ್

Recommended Video

The Villain : ಅಭಿಮಾನಿಗಳಿಗೆ ಹಾಗು ಎಲ್ಲರಿಗೂ ಪತ್ರ ಬರೆದ ಕಿಚ್ಚ ಸುದೀಪ್ | Filmibeat Kannada

'ದಿ ವಿಲನ್' ಚಿತ್ರದಲ್ಲಿ ಕಥೆ ಇಲ್ಲ ಅಂತ ಯಾರು ಎಷ್ಟೋ ಹೇಳಿದರೂ.. 'ದಿ ವಿಲನ್' ಚಿತ್ರದ ಕಲೆಕ್ಷನ್ ಮಾತ್ರ ಕಮ್ಮಿ ಆಗಿಲ್ಲ. 'ದಿ ವಿಲನ್' ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದ್ದರೂ, 'ದಿ ವಿಲನ್' ಸಿನಿಮಾ ಹಲವೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರ ಕಲೆಕ್ಷನ್ ವಿಚಾರದಲ್ಲಿ ಮಾತ್ರ ದಾಖಲೆ ಬರೆಯುತ್ತಿದೆ.

'ದಿ ವಿಲನ್' ಬಗ್ಗೆ ಸಿಕ್ಕಿರುವ ಪಾಸಿಟೀವ್ ಪ್ರತಿಕ್ರಿಯೆ ಕಂಡು ಕಿಚ್ಚ ಸುದೀಪ್ ಖುಷಿಯಾಗಿದ್ದಾರೆ. ತಮ್ಮ ಖುಷಿಯನ್ನ ಕಿಚ್ಚ ಸುದೀಪ್ ವ್ಯಕ್ತಪಡಿಸಿರುವುದು ಹೀಗೆ - ''ನನ್ನ ಎಲ್ಲ ಅಭಿಮಾನಿ ಸ್ನೇಹಿತರೆ, ಅಭಿಮಾನಿ ಸಂಘಗಳ ಸದಸ್ಯರು ಹಾಗೂ ಮುಖ್ಯಸ್ಥರೇ, ನಿಮ್ಮೆಲ್ಲರಿಗೂ ನನ್ನ ಪ್ರೀತಿಯ ಅಪ್ಪುಗೆ.

Kannada Actor Kiccha Sudeep writes letter about The Villain

ಇದು ನೀವೆಲ್ಲರೂ 'ದಿ ವಿಲನ್' ಚಿತ್ರವನ್ನು ಉದಾರವಾಗಿ ಬರಮಾಡಿಕೊಂಡಿದಕ್ಕೆ, ಶಿವಣ್ಣ ಹಾಗೂ ಪ್ರೇಮ್ ರವರ ಮೇಲೆ ತೋರಿಸಿದ ಪ್ರೀತಿಗಾಗಿ, ಚಿತ್ರದ ಎರಡೂ ನಾಯಕ ನಟರ ಮೇಲೆ ಸಮನಾದ ಆದರ ವ್ಯಕ್ತಪಡಿಸಿದ್ದಕ್ಕೆ ಮತ್ತು ಚಿತ್ರಮಂದಿರಗಳಲ್ಲಿ ಶಾಂತಿಯನ್ನು ಕಾಪಾಡಿಕೊಂಡಿದ್ದಕ್ಕೆ.

ನಾನು ನಿಮ್ಮೆಲ್ಲರ ಮನಸಿನಲ್ಲಿ ನೆಲಸಿದ್ದೇನೆ. ಆದ್ದರಿಂದಲೇ ನೀವು ಈ ಚಿತ್ರಕ್ಕೆ ಸ್ಪಂದಿಸಿದ ರೀತಿಯಲ್ಲಿ ನನ್ನದೇ ಪ್ರತಿಬಿಂಬ ಕಾಣುತಿದ್ದೇನೆ. ನನ್ನನು ಹೆಮ್ಮೆಪಡುವಂತೆ ಮಾಡಿದ ನನ್ನ ಕುಟುಂಬದ ಸದಸ್ಯರೇ ಆದ ನಿಮ್ಮ ಪ್ರತಿಯೊಬ್ಬರಿಗೂ ನಾನು ಎಂದೆಂದಿಗೂ ಚಿರಋಣಿ - ನಿಮ್ಮ ಕಿಚ್ಚ'' ಎಂದು ಗೂಗಲ್ ಪ್ಲಸ್ ನಲ್ಲಿ ಸುದೀಪ್ ಬರೆದುಕೊಂಡಿದ್ದಾರೆ.

ಅಂದ್ಹಾಗೆ, 'ದಿ ವಿಲನ್' ಚಿತ್ರದ ಸ್ಯಾಟಲೈಟ್ ರೈಟ್ಸ್ 6.5 ಕೋಟಿಗೆ ಸೇಲ್ ಆಗಿದೆ. ಹಿಂದಿ ಡಬ್ಬಿಂಗ್ ರೈಟ್ಸ್ ಗಾಗಿ ಬೇಡಿಕೆ ಹೆಚ್ಚಿದೆ. ಮಿಶ್ರ ಪ್ರತಿಕ್ರಿಯೆ ಇದ್ದರೂ, 'ದಿ ವಿಲನ್' ಹವಾ ಜೋರಾಗಿದೆ.

More from Filmibeat

English summary
Kannada Actor Kiccha Sudeep writes letter about 'The Villain'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X