ಸುದೀಪ್ 43: ಅಭಿಮಾನಿಗಳಿಂದ ಸಂಭ್ರಮದ 'ಕಿಚ್ಚೋತ್ಸವ 2016' ಆಚರಣೆ
ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಕಿಚ್ಚ ಸುದೀಪ್ ಅವರಿಗೆ ಇಂದು (ಸೆಪ್ಟೆಂಬರ್ 2) ಹುಟ್ಟುಹಬ್ಬದ ಸಂಭ್ರಮ-ಸಡಗರ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪರಭಾಷಾ ಚಿತ್ರರಂಗದಲ್ಲಿ ಕೂಡ ಹೊಸ ಮೈಲಿಗಲ್ಲು ಸ್ಥಾಪಿಸಿದ ನಟ ಸುದೀಪ್ ಅವರು ಇಂದು 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗಿಂತ ಹೆಚ್ಚಾಗಿ ಅವರ ಅಭಿಮಾನಿಗಳಿಗೆ ಇಂದು (ಸೆಪ್ಟೆಂಬರ್ 2) ಹಬ್ಬದ ದಿನ. ತಮ್ಮ ನೆಚ್ಚಿನ ನಟ ಸುದೀಪ್ ಅವರ ಹುಟ್ಟುಹಬ್ಬ ಬಂದಾಗ ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿರುತ್ತಾರೆ.['ಕಿಚ್ಚೋತ್ಸವ 2015' ಆರಂಭ, ಅಭಿಮಾನಿಗಳಿಂದ ಸಂಭ್ರಮಾಚರಣೆ]
ಅಂತೆಯೇ ಅಭಿಮಾನಿಗಳು ನಿನ್ನೆ (ಸೆಪ್ಟೆಂಬರ್ 1) ಮಧ್ಯರಾತ್ರಿಯಿಂದಲೇ ಸುದೀಪ್ ಅವರ ಮನೆ ಮುಂದೆ ಜಮಾಯಿಸಿ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಸುದೀಪ್ ಅವರು ಮನೆಯಿಂದ ಹೊರಗಡೆ ಬಂದು ಅಭಿಮಾನಿಗಳ, ಆದರಾಭಿಮಾನಕ್ಕೆ ಕೈ ಮುಗಿದು ತಮ್ಮ ಧನ್ಯವಾದ ತಿಳಿಸಿದ್ದಾರೆ.
ಇನ್ನು ಅಭಿಮಾನಿಗಳು 'ಕಿಚ್ಚೋತ್ಸವ-2016' ಹಬ್ಬ ಆಚರಿಸಿದ್ದು, ಸುದೀಪ್ ಅವರ ಮನೆ ಅವರ ಕಟೌಟ್ ಗಳಿಂದ ರಾರಾಜಿಸುತ್ತಿತ್ತು. ಸುದೀಪ್ ಅವರು ಕೂಡ ಅಭಿಮಾನಿಗಳಿಗೆ ಉಡುಗೊರೆ ಅಂತ 'ಹೆಬ್ಬುಲಿ' ಚಿತ್ರದ ಟೀಸರ್ ಮತ್ತು ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದ್ದಾರೆ.
ಕಿಚ್ಚ ಸುದೀಪ್ ಅವರ ಅಭಿಮಾನಿಗಳ ಸಂಭ್ರಮ-ಸಡಗರ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...(ಚಿತ್ರಕೃಪೆ: ಫೇಸ್ ಬುಕ್)

ಅಭಿಮಾನಿಗಳ ಸಂಭ್ರಮ
ನೆಚ್ಚಿನ ನಟ ಸುದೀಪ್ ಅವರ ಹುಟ್ಟುಹಬ್ಬದ ಅಂಗವಾಗಿ ಬೇರೆ-ಬೇರೆ ಕಡೆಯಿಂದ ಬಂದ ಅಭಿಮಾನಿಗಳು ಸುದೀಪ್ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸಂಭ್ರಮದಲ್ಲಿ ನಿರತರಾಗಿದ್ದರು. ಜೊತೆಗೆ ನೆಲಮಂಗಲದ ಅಭಿಮಾನಿಗಳು ವಿಶೇಷವಾಗಿ ಸುದೀಪ್ ಅವರ ಮನೆ ಮುಂದೆ ಸೆಲ್ಫಿ ಸ್ಟ್ಯಾಂಡ್ ಇಟ್ಟು ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡುವ 'ಸೆಲ್ಫಿ ವಿತ್ ಕಿಚ್ಚ' ಅಂತ ಬೇರೆ ಮಾಡುತ್ತಿದ್ದಾರೆ.[ಸೌತ್ ಇಂಡಿಯಾ ಸ್ಟಾರ್ ಕಿಚ್ಚ ಸುದೀಪ್ 'ಚಕ್ರವ್ಯೂಹ']

ಬಲೂನ್ ಹಾರಿಸಿದ ಅಭಿಮಾನಿಗಳು
'ಹುಟ್ಟುಹಬ್ಬದ ಶುಭಾಶಯಗಳು ಕಿಚ್ಚ ಸುದೀಪ್' ಅಂತ ಬರೆದಿರೋ ಬಲೂನ್ ಅನ್ನು ಜೆ.ಪಿ ನಗರದಲ್ಲಿರುವ ಸುದೀಪ್ ಅವರ ಮನೆ ಮುಂದೆ ಹಾರಿಸುವ ಮೂಲಕ, ವಿಶೇಷವಾಗಿ ಸುದೀಪ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದ್ದಾರೆ.[ಬರ್ತಡೆ ಬಾಯ್ ಕಿಚ್ಚ ಸುದೀಪ್ ಗೆ ಹೊಸ ಬಿರುದು]

ಟ್ವಿಟ್ಟರ್ ನಲ್ಲಿ ಟ್ರೆಂಡ್
ಈಗಾಗಲೇ ಟ್ವಿಟ್ಟರ್ ನಲ್ಲಿ 'ಹ್ಯಾಪಿ ಬರ್ತ್ ಡೇ ಸುದೀಪ್' ಮತ್ತು 'ಹೆಬ್ಬುಲಿ' ಟ್ರೆಂಡ್ ಆಗಿದೆ. ಕನ್ನಡ ಚಿತ್ರರಂಗ ಸೇರಿದಂತೆ ಇಡೀ ದಕ್ಷಿಣ ಭಾರತದ ಚಿತ್ರರಂಗದ ನಟ-ನಟಿಯರು ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.

'ಹೆಬ್ಬುಲಿ' ಟೀಸರ್/ಪೋಸ್ಟರ್ ಬಿಡುಗಡೆ
'ಕೋಟಿಗೊಬ್ಬ 2' ಯಶಸ್ವಿಯಾದ ಖುಷಿಯಲ್ಲಿ ಸುದೀಪ್ ಅವರು 'ಹೆಬ್ಬುಲಿ' ಚಿತ್ರದ ಶೂಟಿಂಗ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇದೀಗ ಸುದೀಪ್ ಅವರ ಬರ್ತ್ ಡೇ ಸ್ಪೆಷಲ್ ಅಂತ 'ಹೆಬ್ಬುಲಿ' ಚಿತ್ರದ ಟೀಸರ್ ಮತ್ತು ಪೋಸ್ಟರ್ ಗಳು ಬಿಡುಗಡೆ ಆಗಿದ್ದು, ಕೊಟ್ಟ ಮಾತಿನಂತೆ ಅಭಿಮಾನಿಗಳಿಗೆ ಹುಟ್ಟುಹಬ್ಬದ ಅಂಗವಾಗಿ ಉಡುಗೊರೆ ನೀಡಿದ್ದಾರೆ.

ಸುದೀಪ್ ಧನ್ಯವಾದ
ಟ್ವಿಟ್ಟರ್ ನಲ್ಲಿ ಎಡೆಬಿಡದೆ ಸುರಿಯುತ್ತಿರುವ ಶುಭಾಶಯಗಳ ಸುರಿಮಳೆಗೆ ಸುದೀಪ್ ಅವರೇ ಖುದ್ದಾಗಿ ಪ್ರತಿಯೊಬ್ಬರಿಗೂ ಟ್ವೀಟ್ ಮಾಡುವ ಮೂಲಕ ಧನ್ಯವಾದ ತಿಳಿಸುತ್ತಿದ್ದಾರೆ. ನಟಿ ಮಾನ್ವಿತಾ ಹರೀಶ್, ನಟ ಜಗ್ಗೇಶ್, ತಮಿಳು ನಟಿ ವರಲಕ್ಷ್ಮಿ, ನಟಿ ರಾಧಿಕಾ ಶರತ್ ಕುಮಾರ್, ನಟ ಚಿರಂಜೀವಿ ಸರ್ಜಾ, ರಾಹುಲ್ ಸೇರಿದಂತೆ ಹಲವು ಮಂದಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.


Click it and Unblock the Notifications











