ಬೆನ್ನು ನೋವಿನಿಂದ ಬಳಲುತ್ತಿರುವ ಸುದೀಪ್ ಗೆ ವಿಶ್ರಾಂತಿ

Recommended Video

ಸಾಲು ಸಾಲು ಸಿನೆಮಾಗಳಲ್ಲಿ ಸುದೀಪ್ ಬಿಜಿ | FILMIBEAT KANNADA

ಕನ್ನಡದ ಮಾಣಿಕ್ಯ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಲು ಸಾಲು ಸಿನಿಮಾಗಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಕೆಲವು ತಿಂಗಳಿಂದ ಸುದೀಪ್ ರೆಸ್ಟ್ ಲೆಸ್ ಕೆಲಸ ಮಾಡುತ್ತಿದ್ದಾರೆ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ತೆಲುಗು ಮತ್ತು ಹಿಂದಿಯಲ್ಲೂ ಸಿನಿಮಾ ಮಾಡುತ್ತ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತ ಶೂಟಿಂಗ್ ನಲ್ಲಿಯೆ ತೊಡಗಿಕೊಳ್ಳುತ್ತಿದ್ದ ಕಿಚ್ಚ ಈಗ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಸದ್ಯ 'ಕೋಟಿಗೊಬ್ಬ-3' ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬೀಡುಬಿಟ್ಟಿದ್ದಾರೆ. ಹೈದರಾಬಾದ್ ನಲ್ಲಿ ಈಗಾಗಲೆ 10 ದಿನಗಳ ಚಿತ್ರೀಕರಣ ಮುಕ್ತಾಯಗೊಳಿಸಿದೆ ಚಿತ್ರತಂಡ. ಚಿತ್ರದ ಹೈ ವೋಲ್ಟೇಜ್ ಫೈಟಿಂಗ್ ದೃಶ್ಯವನ್ನು ಸೆರೆಹಿಡಿಯುವಲ್ಲಿ ಚಿತ್ರತಂಡ ನಿರತವಾಗಿದೆ.

ಚಿತ್ರೀಕರಣದ ನಡುವೆ ಸುದೀಪ್ ಗೆ ಬೆನ್ನು ನೋವು ಕಾಣಿಸಿಕೊಂಡ ಕಾರಣ ಅಲ್ಲೆ ವೈದ್ಯರು ಸುದೀಪ್ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಚಿತ್ರೀಕರಣದ ಒತ್ತಡದಿಂದ ನೋವು ಕಾಣಿಸಿಕೊಂಡಿದ್ದು ಕೆಲವು ದಿನಗಳು ರೆಸ್ಟ್ ಮಾಡುವಂತೆ ವೈದ್ಯರು ಸೂಚಿಸಿದ್ದಾರೆ. ಸದ್ಯ ಸುದೀಪ್ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

Kannada Actor Kichcha Sudeep Is Suffering From Back Injury

ಈಗಾಗಲೆ 'ಕೋಟಿಗೊಬ್ಬ-3' ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಕೊನೆಯ ಹಂತದ ಚಿತ್ರೀಕರಣ ಭಾಕಿ ಇದೆ. ಅಲ್ಲದೆ ಹಿಂದಿಯ 'ದಬಾಂಗ್-3' ಚಿತ್ರೀಕರಣ ಕೂಡ ಇನ್ನೂ ಭಾಕಿ ಇದೆ. ಉಳಿದಂತೆ ಎಲ್ಲಾ ಸಿನಿಮಾಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ ಸುದೀಪ್.

ಆದ್ರೆ ಇನ್ನೊಂದಿಷ್ಟು ಚಿತ್ರಗಳು ಲೈನ್ ಅಪ್ ಆಗಿರುವ ಕಾರಣ ಆ ಸಿನಿಮಾಗಳ ಕೊಂಚ ತಡವಾಗುವ ಸಾಧ್ಯತೆ ಇದೆ. ಸುದೀಪ್ ಸದ್ಯ ಪೈಲ್ವಾನ್ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಜೊತೆಗೆ ತೆಲುಗಿನ ಸೂಪರ್ ಹಿಟ್ 'ಸೈರಾ ನರಸಿಂಹ ರೆಡ್ಡಿ' ಚಿತ್ರ ಕೂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸದ್ಯ 'ದಬಾಂಗ್-3' ಮತ್ತು 'ಕೋಟಿಗೊಬ್ಬ-3' ಚಿತ್ರೀಕರಣ ಕೊನೆಯ ಹಂತದಲ್ಲಿದೆ.

ಈ ಎಲ್ಲಾ ಸಿನಿಮಾಗಳ ಜೊತೆಗೀಗ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಸುದೀಪ್ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ತಯಾರಿ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಆದ್ರೀಗ ಸುದೀಪ್ ಬೆನ್ನು ನೋವಿನಿಂದ ಬಳಲುತ್ತಿರುವ ಕಾರಣ ಚಿತ್ರೀಕರಣಕ್ಕೆ ಕೊಂಚ ಬ್ರೇಕ್ ಹಾಕಿ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.

More from Filmibeat

English summary
Kannada actor Kichcha Sudeep is suffering from back injury. Doctors have advised Sudeep to rest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X