»   » 'ಆಟಗಾರ'ನ ಓಟಕ್ಕೆ ಸೀಟಿ ಊದಿದ ಕಿಚ್ಚ ಸುದೀಪ್

'ಆಟಗಾರ'ನ ಓಟಕ್ಕೆ ಸೀಟಿ ಊದಿದ ಕಿಚ್ಚ ಸುದೀಪ್

Posted By: ಸುನಿ ಗೌಡ
Subscribe to Filmibeat Kannada

ನಿರ್ದೇಶಕ ಕೆ.ಎಮ್ ಚೈತನ್ಯ ಆಕ್ಷನ್-ಕಟ್ ಹೇಳಿದ್ದು, ನಟ-ನಿರ್ಮಾಪಕ-ನಿರ್ದೇಶಕ ದ್ವಾರಕೀಶ್ ಅವರ ಹೋಮ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ 49ನೆ ಚಿತ್ರ 'ಆಟಗಾರ' ನಿನ್ನೆ ಭರ್ಜರಿಯಾಗಿ ತೆರೆ ಕಂಡಿದ್ದು, ನಿಜ ಆದರೆ ಕೊನೆ ಕ್ಷಣದಲ್ಲಿ ಬೆಳಗಿನ ಮೊದಲ ಪ್ರದರ್ಶನ ಕಾಣುವುದು ಕೊಂಚ ಡಿಲೇ ಆಗಿತ್ತು.

ಈ ಸಂದರ್ಭದಲ್ಲಿ ನಮ್ಮ ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಆಪತ್ಭಾಂದವರಂತೆ ಬಂದು ಸಹಕರಿಸಿ ಸಮಸ್ಯೆ ಬಗೆಹರಿಸಿದರಂತೆ. ಜೊತೆಗೆ ಕನ್ನಡ ಚಿತ್ರರಂಗದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿರುವ ಸುದೀಪ್ ಅವರು ಬಿಡುಗಡೆ ವೇಳೆ ಒದಗಿ ಬಂದ ಕಂಟಕವನ್ನು ಬಗೆಹರಿಸಿದ್ದಾರೆ.[ಆಟಗಾರನ ನೋಡಬೇಕು ಏಕೆ? ಇಲ್ಲಿದೆ ಕಾರಣಗಳು]

chiranjeevi sarja

ಅಂದಹಾಗೆ ಚಿತ್ರ ಬಿಡುಗಡೆ ಕಾಣಲು ತಾಂತ್ರಿಕ ದೋಷ ಕಾರಣ ಅಂತ ಕೆಲವರು ಮಾತಾಡಿಕೊಂಡರು. ಆದ್ರೆ 'ಆಟಗಾರ'ನ ಎಂಟ್ರಿ ಲೇಟ್ ಆಗಲು ಕಾರಣ ನಿರ್ಮಾಪಕರು ಹಾಗೂ ಫೈನಾನ್ಶಿಯರ್ ಗಳ ನಡುವೆ ನಡೆದಿದ್ದ ಹಣಕಾಸಿನ ವ್ಯವಹಾರವೇ ಇದಕ್ಕೆ ನಿಜವಾದ ಕಾರಣವಾಗಿತ್ತಂತೆ.[ಹೌದು ಸ್ವಾಮಿ, 'ಆಟಗಾರ' ಪಕ್ಕಾ ಸ್ವಮೇಕ್ ಸಿನಿಮಾ.!]

ಆದರೆ ವಿಷಯ ತಿಳಿಯುತ್ತಿದ್ದಂತೆ ನಮ್ಮ ಕಿಚ್ಚ ಸುದೀಪ್ ಅವರು ಆಗಮಿಸಿ ತಾವೇ ಗ್ಯಾರಂಟಿಯಾಗಿ ನಿಂತು ಹಣಕಾಸು ವ್ಯವಹಾರವನ್ನು ನೋಡಿಕೊಂಡು ಪೂರ್ಣಗೊಳಿಸಿಕೊಡುವುದಾಗಿ ಭರವಸೆ ನೀಡಿದ ನಂತರವೇ 'ಆಟಗಾರ' ನ ಅಸಲಿ ಆಟ ಶುರುವಾಗಿದೆ.[ಬಿಡುಗಡೆಗೂ ಮುನ್ನವೇ ಭರ್ಜರಿ ಮೊತ್ತಕ್ಕೆ 'ಆಟಗಾರ' ಮಾರಾಟ]

Kiccha Sudeep

ಒಟ್ನಲ್ಲಿ ಸಾಹಸಸಿಂಹ ವಿಷ್ಣು ಅವರ ಆಪ್ತ ಗೆಳೆಯ ದ್ವಾರಕೀಶ್ ಅವರ ಕನಸಿನ ಚಿತ್ರಕ್ಕೆ ಬಂದೊದಗಿದ ಸಮಸ್ಯೆಯನ್ನು ಪರಿಹರಿಸಿ ಅಭಿಮಾನಿಗಳ ಕಡೆಯಿಂದ ಕಿಚ್ಚ ಸುದೀಪ್ ಅವರಿಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಜೊತೆಗೆ ತೆರೆಕಂಡ 'ಆಟಗಾರ' ಚಿತ್ರ ಕೂಡ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಗಳಿಸುತ್ತಿದೆ.

English summary
On Friday (August 28) morning Kannada movie Aatagara released. Till the last moment things were not clear and the morning shows were also delayed. It was said to be a technical problem but it seems there was some financial problem that producer Yogish Dwarakish could not fulfill. But Kichcha Sudeep came to the rescue of Yogish and gave financial guarantee so that the film could be released. 'Aatagara' features Kannada actor Chiranjeevi Sarja, Kannada actress Meghana Raj, actress Parul Yadav, Dwarakish, Anant Nag in the lead role. The movie is directed by KM Chaitanya of 'Aa Dinagalu' fame.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more