''ಮೋದಿಯನ್ನು ಏಕೆ ಬಂಧಿಸಿ ಶಿಕ್ಷಿಸಬಾರದು'' - ಕಿಶೋರ್...!
ಸಿನಿಮಾ ಮಂದಿ ಅದರಲ್ಲಿಯೂ ನಟಿಯರು ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧವಿಲ್ಲ ಅಂತಿರೋದೇ ಹೆಚ್ಚು. ಇಲ್ಲಿ ಹೆಚ್ಚಿನವರಿಗೆ ಸಿನಿಮಾ ಕೂಡಾ ಅನ್ನಿಸಿದ್ದನ್ನು ಹೇಳುವ, ಆ ಮೂಲಕ ಜಾಗೃತಿ ಮೂಡಿಸುವ ಮಾಧ್ಯಮ ಅಂತಲೂ ಅನ್ನಿಸೋದಿಲ್ಲ. ಆದರೆ ಕನ್ನಡ ಚಿತ್ರರಂಗದ 'ಹುಲಿ' ಕಿಶೋರ್ ಇದಕ್ಕೆ ತದ್ವಿರುದ್ಧ. ಸಮಾಜದ ಆಗು-ಹೋಗುಗಳ ಬಗ್ಗೆ ಮೊದಲಿಂದ ಧ್ವನಿ ಎತ್ತುತ್ತಾ, ಕಳೆದ ಹತ್ತು ವರ್ಷಗಳಿಂದ ಬಲಪಂಥೀಯವರ ಕೆಂಗಣ್ಣಿಗೆ ಗುರಿಯಾಗ್ತಾನೇ ಬಂದ ಕಿಶೋರ್, ಸದ್ಯಕ್ಕೆ.. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನ ಏಕೆ ಬಂಧಿಸಿ ಶಿಕ್ಷಿಸಬಾರದು..? ಎಂಬ ಪ್ರಶ್ನೆಯನ್ನ ಕೇಳಿದ್ದಾರೆ.
ಹೌದು, ನಿಮಗೆ ನೆನಪಿದ್ದರೆ.. ಮೊನ್ನೆಯ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವನ್ನು ಕಂಡ ಕಂಗನಾ ರಣಾವತ್ ಸಂಸದೆಯಾದ ಖುಷಿಯಲ್ಲಿ ಚಂಡಿಗಢ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ಸಿಐಎಸ್ಎಫ್ಮಹಿಳಾ ಕಾನ್ಸ್‌ಸ್ಟೇಬಲ್ ಕುಲ್ವಿಂದರ್ಕೌರ್ ಕಂಗನಾ ಕೆನ್ನೆಗೆ ಬಾರಿಸಿದ್ದರು. ಈ ತಪ್ಪು ಮಾಡಿದ್ದಕ್ಕೆ ಆ ನಂತರ ಕುಲ್ವಿಂದರ್ಕೌರ್ ಕೆಲಸವನ್ನೂ ಕಳೆದುಕೊಂಡರು. ಆ ನಂತರ ಬಂಧನಕ್ಕೂ ಒಳಗಾದರು. ಈ ವಿಚಾರವನ್ನೇ ಕಿಶೋರ್ ಈಗ ಪ್ರಸ್ತಾಪಿಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕಿಶೋರ್, ರೈತರ ಪ್ರತಿಭಟನೆಯ ಬಗ್ಗೆ ಶಿಕ್ಷಿಸದ ಕೊಳಕು ಹೇಳಿಕೆಗಾಗಿ ಕಂಗನಾಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಕುಲ್ವಿಂದರ್ ಕೌರ್ ಅವರನ್ನು ಅಮಾನತುಗೊಳಿಸಲು ಮತ್ತು ಬಂಧಿಸಲು ಇಡೀ ಸರ್ಕಾರಿ ಯಂತ್ರವು ಮಿಂಚಿನ ವೇಗದಲ್ಲಿ ಕಾರ್ಯಪ್ರವೃತ್ತವಾಗಲು ಸಾಧ್ಯವಾದರೆ, ಈಗ ಈ ಮೂವರನ್ನು ಒಳಗೊಂಡಂತೆ ಕಳೆದ ಒಂದೆರಡು ದಶಕಗಳಲ್ಲಿ ಅನೇಕ ಅಮಾಯಕರನ್ನು ಕೊಲೆ ಮಾಡಲು ಧರ್ಮಾಂಧ ಗೂಂಡಾಗಳನ್ನು ಪ್ರಚೋದಿಸಿದ ಮುಸ್ಲಿಂ ವಿರೋಧಿ ಭಾಷಣಗಳಿಗಾಗಿ ಮತ್ತು ಈ ಹೇಯ ಕೃತ್ಯಕ್ಕೆ ನೀಡುತ್ತಿರುವ ಪರೋಕ್ಷ ಬೆಂಬಲಕ್ಕಾಗಿ ಮೋದಿಯನ್ನು ಏಕೆ ಬಂಧಿಸಬಾರದು ಮತ್ತು ಅಮಾನತುಗೊಳಿಸಬಾರದು.? ಎಂಬ ಪ್ರಶ್ನೆಯನ್ನ ಕೇಳಿದ್ದಾರೆ
ಮುಂದುವರೆದು ಆ ಬಡ ಸಂತ್ರಸ್ತರು ಏನು ಮಾಡುತ್ತಿದ್ದರೂ ಅವರ ಜೀವನೋಪಾಯಕ್ಕಾಗಿಯೇ ಅಲ್ಲವೇ.. ಅದಕ್ಕಾಗಿ ಅವರು ಕೊಲೆಯಾಗಲು ಅರ್ಹರೇ? ಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಮೋದಿಯನ್ನು ಏಕೆ ಬಂಧಿಸಿ ಶಿಕ್ಷಿಸಬಾರದು? ಎಂದಿದ್ದಾರೆ ಕಿಶೋರ್

ಮೊದಲಿನಿಂದಲೂ ಪ್ರಧಾನಿ ಮೋದಿ ಅವರನ್ನು ಟೀಕಿಸುತ್ತಾ ಬರುತ್ತಿದ್ದ ನಟ ಕಿಶೋರ್ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸುಮ್ಮನಾಗಿದ್ದರು. ಚುನಾವಣೆ ಫಲಿತಾಂಶದ ದಿನ ಪ್ರಜಾಪ್ರಭುತ್ವದ ಬಗ್ಗೆ ಪೋಸ್ಟ್ ಮಾಡಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಬಳಿಕ ಇದೀಗ ಮತ್ತೆ ಪ್ರಧಾನಿ ಮೋದಿಯನ್ನ ಯಾಕೆ ಬಂಧಿಸಬಾರದು ಎಂದಿದ್ದಾರೆ.
ಸದ್ಯಕ್ಕೆ ಕಿಶೋರ್ ಅವರ ಈ ಅಭಿಪ್ರಾಯಕ್ಕೆ ಎಂದಿನಂತೆ ಚರ್ಚೆ ಶುರುವಾಗಿದೆ. ಕಮಲ ಪಡೆ ಕೆರಳಿ ಕೆಂಡವಾಗಿದೆ. ದೂರದೂರಿನ ಬೆಟ್ಟ ಕಾಣ್ತದೆ, ಪಕ್ಕದ ಪ್ಲೇಟಿನ ನೊಣ ಕಿಶೋರ್‌ಗೆ ಕಾಣುವುದಿಲ್ಲ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ. ಕಿಶೋರ್ ವಿರುದ್ಧ ಮತ್ತೊಮ್ಮೆ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.


Click it and Unblock the Notifications











