ಜೈಲಿನಲ್ಲಿ ದಾಸ ; ''ಸಮಾಜವಾಗಿ ಎಲ್ಲ ಹಂತದಲ್ಲಿಯೂ ನಾವು ಸೋತಿದ್ದೇವೆ'' - ಕಿಶೋರ್...!

ಸಿನಿಮಾ ಮಂದಿ ಅದರಲ್ಲಿಯೂ ನಟಿಯರು ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧವಿಲ್ಲ ಅಂತಿರೋದೇ ಹೆಚ್ಚು. ಇಲ್ಲಿ ಹೆಚ್ಚಿನವರಿಗೆ ಸಿನಿಮಾ ಕೂಡಾ ಅನ್ನಿಸಿದ್ದನ್ನು ಹೇಳುವ, ಆ ಮೂಲಕ ಜಾಗೃತಿ ಮೂಡಿಸುವ ಮಾಧ್ಯಮ ಅಂತಲೂ ಅನ್ನಿಸೋದಿಲ್ಲ. ಆದರೆ ಕನ್ನಡ ಚಿತ್ರರಂಗದ 'ಹುಲಿ' ಕಿಶೋರ್ ಇದಕ್ಕೆ ತದ್ವಿರುದ್ಧ. ಸಮಾಜದ ಆಗು-ಹೋಗುಗಳ ಬಗ್ಗೆ ಮೊದಲಿಂದ ಧ್ವನಿ ಎತ್ತುತ್ತಾ, ಕಳೆದ ಹತ್ತು ವರ್ಷಗಳಿಂದ ಬಲಪಂಥೀಯವರ ಕೆಂಗಣ್ಣಿಗೆ ಗುರಿಯಾಗ್ತಾನೇ ಬಂದ ಕಿಶೋರ್, ಸದ್ಯಕ್ಕೆ.. ದರ್ಶನ್ ಪ್ರಕರಣದ ಕುರಿತು ಮಾತನಾಡಿದ್ದಾರೆ. ದರ್ಶನ್ ಅವರ ಅಭಿಮಾನಿಗಳ ಅಭಿಮಾನದ ಬಗ್ಗೆಯೂ ಮಾತನಾಡಿದ್ದಾರೆ.

ಹೌದು, ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕಿಶೋರ್, ಹೇಳುವಂತಹದ್ದು ಏನಿಲ್ಲ ಅದರಲ್ಲಿ. ದುರಂತ ನಡೆದಿದೆ. ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಹೈಪ್ರೊಫೈಲ್ ಕೇಸ್ ಆಗಿರೋದ್ರಿಂದ ಗಮನ ಕೊಟ್ಟು ತನಿಖೆ ಮಾಡುತ್ತಿದ್ದಾರೆ ಎಂದಿರುವ ಕಿಶೋರ್, ದರ್ಶನ್ ಪ್ರಕರಣ ಹೊರತು ಪಡಿಸಿ ಬೇಕಾದಷ್ಟು ಸಮಸ್ಯೆಗಳಿವೆ ಎಂದಿದ್ದಾರೆ. ತ್ವರಿತಗತಿಯಲ್ಲಿ ಬಗೆಹರಿಸುವಂತಹ ತುಂಬಾ ಕೆಲಸಗಳಿವೆ ಎಂದಿದ್ದಾರೆ.

Kannada actor Kishore reacts to Darshan case says Not guilty until proven guilty

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಮಾಜದ ಮೇಲೆ ಖಂಡಿತಾ ಪರಿಣಾಮ ಬಿರುತ್ತದೆ. ಆದರೆ.. ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ನಿರ್ಣಯ ಹೊರ ಬರುವ ಮುನ್ನ ಏನೇನೋ ಮಾತನಾಡುವುದು ಸರಿಯಲ್ಲ ಎಂದು ನನಗೆ ಅನಸುತ್ತೆ ಎಂದಿರುವ ಕಿಶೋರ್, Not Guilty Until Proven Guilty ಎಂದಿದ್ದಾರೆ. ಹೀಗಾಗಿ ಜವಾಬ್ದಾರಿ ಪ್ರಜೆಗಳಾಗಿ ನ್ಯಾಯಾಲಯದ ಆದೇಶ ಬರುವವರೆಗೆ ಮಾತನಾಡದೇ ಇರುವುದು ಉತ್ತಮ ಎಂದಿದ್ದಾರೆ.

ಇನ್ನೂ ದರ್ಶನ್ ಹೊರ ಬರುವವರೆಗೆ ನಾವು ಬೇರೆ ಸಿನ್ಮಾ ನೋಡಲ್ಲ ಎಂಬ ಅವರ ಅಭಿಮಾನಿಗಳ ವಾದದ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಕಿಶೋರ್, ಸಮಾಜವಾಗಿ ಎಲ್ಲ ಹಂತದಲ್ಲಿಯೂ ನಾವು ಸೋತಿದ್ದೇವೆ ಅನ್ನುವುದಕ್ಕೆ ಇದೊಂದು ಸಾಕ್ಷಿ ಅಷ್ಟೇ ಎಂದು ಬೇಸರವನ್ನೂ ಹೊರ ಹಾಕಿದ್ಧಾರೆ.

Kannada actor Kishore reacts to Darshan case says Not guilty until proven guilty

ಹೌದು, ವಿಸ್ತಾರ ನ್ಯೂಸ್‌ ಜೊತೆ ಮಾತನಾಡಿರುವ ಕಿಶೋರ್, ಬದಲಾದ ಕಾಲದಲ್ಲಿ ಸಿನಿಮಾವೊಂದನ್ನು ನಾವು ಸಿನಿಮಾ ರೀತಿ ತೋರಿಸುತ್ತಿಲ್ಲ, ಪ್ರೇಕ್ಷಕರು ಕೂಡ ಸಿನಿಮಾವನ್ನು ಸಿನಿಮಾದಂತೆಯೇ ನೋಡುತ್ತಿಲ್ಲ ಎಂದಿರುವ ಕಿಶೋರ್, ಸಿನಿಮಾವನ್ನು ಇಂದು ನಾವು ವ್ಯಾಪಾರ ಮಾಡಿಕೊಂಡು ಪ್ರೇಕ್ಷಕರನ್ನು ಭ್ರಮಾ ಲೋಕಕ್ಕೆ ದೂಡಿದ್ದೇವೆ ಎಂದು ಹೇಳಿದ್ದಾರೆ. ನಿಜಾ.. ಒಳ್ಳೇಯ ಕಲಾವಿದರಾಗಿ ಅವರಿಗೆ ಪ್ರೀತಿಸಬೇಕು, ಬೆಂಬಲಿಸಬೇಕು ಎಲ್ಲವೂ ಇದೆ ಆದರೆ ಅದಲ್ಲದೇ ಸಿನಿಮಾವನ್ನು ಸಿನಿಮಾವನ್ನಾಗಿ ನೋಡಿಯೆಂದು ನಾವು ಹೇಳಿ ಕೊಡಬೇಕಿತ್ತು, ಅದನ್ನು ಹೇಳಿಕೊಡುವಲ್ಲಿ ನಾವು ಸೋತಿದ್ದೇವೆ ಎಂದಿದ್ದಾರೆ.

ಇನ್ನೂ ಇದೇ ಸಮಯದಲ್ಲಿ ಕನ್ನಡದ ವರನಟ ಡಾ.ರಾಜ್ ಕುಮಾರ್ ಅವರನ್ನೂ ನೆನಪು ಮಾಡಿಕೊಂಡಿರುವ ಕಿಶೋರ್, ಆ ಕಾಲದಲ್ಲಿ ನಾಯಕ ನಟರಿಗೆ ಸಾಮಾಜಿಕ ಜವಾಬ್ಧಾರಿ ತುಂಬಾನೇ ಇರ್ತಾ ಇತ್ತು. ಯಾಕೆಂದರೆ ಸಿನಿಮಾ ಪ್ರಭಾವಿ ಮಾಧ್ಯಮ ಅನ್ನುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಚಿತ್ರಗಳಿಂದ ಆಗುವ ಪರಿಣಾಮದ ಅರಿವು ಇತ್ತು. ಆದರೆ ಇತ್ತೀಚೆಗೆ ನಾವು ಅದೆಲ್ಲವನ್ನೂ ಮರಿತಾ ಬಂದಿದೀವಿ ಎಂದಿದ್ದಾರೆ. ನಿಜವಾಗಿಯೂ ಅಭಿಮಾನಿಗಳು ಹಾಗೇ ಹೇಳಿದ್ದರೆ, ಪ್ರೇಕ್ಷಕರನ್ನು ಬೆಳೆಸುವಲ್ಲಿ ನಾವು ಸೋತಿದ್ದೇವೆ ಎಂದೇ ಅರ್ಥ ಎಂದು ಕೂಡ ಕಿಶೋರ್ ಹೇಳಿದ್ದಾರೆ.

kannada-actor-kishore-reacts-to-darshan-case-says-not-guilty-until-proven-guilty

ಮುಂದುವರೆದು ಸಿನಿಮಾ ವ್ಯಾಪಾರವನ್ನು ಮೀರಿದ್ದು, ವ್ಯಾಪಾರ ಆಗಿದ್ದರೆ ದುಡ್ಡಿಗಷ್ಟೇ ಎಲ್ಲವೂ ಸೀಮಿತವಾಗುತ್ತಿತ್ತು. ಪ್ರೇಕ್ಷಕರು ದುಡ್ಡು ಕೊಡ್ತಿದ್ದರು, ನಾವು ದುಡ್ಡು ತೆಗೆದುಕೊಂಡು ಬರಬಹುದಿತ್ತು. ಆದರೆ..ಯಾಕಿಷ್ಟು ನಮ್ಮನ್ನ ಪ್ರೀತಿಸಬೇಕಿತ್ತು. ಒಂದು ಸಿನಿಮಾ ಸೋತರೆ ಮತ್ತೆ ಬಂದು ಆ ನಟನ ಸಿನಿಮಾ ನೋಡಿ ಅವರು ಯಾಕೆ ಗೆಲ್ಲಿಸಬೇಕಿತ್ತು ಎಂದಿರುವ ಕಿಶೋರ್ ಅದೆಲ್ಲವೂ ವ್ಯೆಯಕ್ತಿಕ ಪ್ರೀತಿ ಎಂದಿದ್ದಾರೆ. ಆ ಪ್ರೀತಿಗೆ ನಾವೇನು ವಾಪಸ್ ಕೊಡ್ತೀವಿ.. ಜವಾಬ್ದಾರಿ ಅಷ್ಟೇ. ಆ ಜವಾಬ್ಧಾರಿಯನ್ನು ಉಳಿಸಿಕೊಂಡು ಹೋದರೆ ಸಾಕು ಎಂದಿದ್ದಾರೆ. ಜನ ಹಾಗೇ ಬಿಹೇವ್ ಮಾಡುತ್ತಿದ್ದಾರೆ ಅಂದರೆ ಇದು ನಮ್ಮೆಲ್ಲರ ಸೋಲು ಅಂದಿದ್ದಾರೆ. ಸಿನಿಮಾವನ್ನು ಸಿನಿಮಾವನ್ನಾಗಿ ನೋಡುವ ವಿಧಾನವನ್ನು ಪ್ರೇಕ್ಷಕರಿಗೆ ನಾವು ಹೇಳಿ ಕೊಟ್ಟಿಲ್ಲ ಎಂದಿದ್ದಾರೆ.ಇನ್ನೂ.. ಸಿನಿಮಾವನ್ನು ಪ್ರೇಕ್ಷಕರು ತುಂಬಾ ವ್ಯೆಯಕ್ತಿಕವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಕಿಶೋರ್, ಸಿನಿಮಾವನ್ನು ಕಲೆಯಾಗಿ ನೋಡಬೇಕು ಪ್ರೀತಿಸಬೇಕು ಎಂದಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X