For Quick Alerts
  ALLOW NOTIFICATIONS  
  For Daily Alerts

  ಹಲ್ಲೆ ಆದ ಬಗ್ಗೆ ಅಸಲಿ ಕಾರಣ ಬಿಚ್ಚಿಟ್ಟ ನಟ ಕೋಮಲ್

  |

  Recommended Video

  ಕೋಮಲ್ ಮೇಲೆ ಹಲ್ಲೆ..! ರಸ್ತೆಯಲ್ಲಿ ಎಳೆದಾಡಿ ಹೊಡೆದ ದುಷ್ಕರ್ಮಿ..?

  ಮಂತ್ರಿಮಾಲ್ ಬಳಿ ಕಾರಿನಲ್ಲಿ ಚಲಿಸುತ್ತಿದ್ದ ಕೋಮಲ್ ಮೇಲೆ ಏಕಾಏಕಿ ಹಲ್ಲೆ ನಡೆಸಲಾಗಿದೆ. ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬ ಕೋಮಲ್ ಕಾರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾರೆ. ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಕೋಮಲ್ ಅವರನ್ನು ಎಳೆದುಕೊಂಡು ಸರಿಯಾಗಿ ಥಳಿಸಿದ್ದಾರೆ.

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಕೋಮಲ್ "ಕಾರಿನಲ್ಲಿ ಮಗಳನ್ನು ಟೂಶನ್ ಗೆ ಬಿಡಲು ಬಂದಿದ್ದೆ. ಕಾರಿನಲ್ಲಿ ಹೋಗುತ್ತಿರುವಾಗ ಹಿಂದೆಯಿಂದ ಬೈಕ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಕಾರು ಟಚ್ ಮಾಡುತ್ತಲೆ, ಕೆಟ್ಟಪದಗಳಿಂದ ಬೈಯುತ್ತ ಬಂದಿದ್ದಾರೆ. ನಂತರ ಕಾರಿನಿಂದ ಇಳಿಯುತ್ತಿದ್ದಂತೆ ತಕ್ಷಣ ಹಲ್ಲೆ ಮಾಡಿದ್ದಾರೆ. ಯಾರು ಅಂತ ಗೊತ್ತಿಲ್ಲ. ಇತ್ತೀಚಿಗೆ ಸಿನಿಮಾ ರಿಲೀಸ್ ಆದ ಮೇಲೆ ನಾನಾತರಹದ ಟೆನ್ಷನ್ ಇದೆ. ಏನು ಮಾಡಬೇಕು ಅಂತ ಗೊತ್ತಿಲ್ಲ. ಇಂಡಸ್ಟ್ರಿಯವರೇ ಅಥವಾ ಬೇರೆ ಯಾರೋ ಎಂದು ಗೊತ್ತಿಲ್ಲ. ಯಾರ ಮೇಲೂ ಅನುಮಾನ ಪಡಲ್ಲ. ದೇವರು ಅಂತ ಇದ್ದಾನೆ ನೋಡಿಕೊಳ್ಳುತ್ತಾನೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ" ಎಂದು ಕೋಮಲ್ ಹೇಳಿದ್ದಾರೆ.

  ಹಾಡುಹಗಲೆ 'ಬೀದಿ ಕಾಳಗ'ಕ್ಕಿಳಿದ ನಟ ಕೋಮಲ್‌ ಹಾಡುಹಗಲೆ 'ಬೀದಿ ಕಾಳಗ'ಕ್ಕಿಳಿದ ನಟ ಕೋಮಲ್‌

  ವ್ಯಕ್ತಿ ಬಲವಾಗಿ ಕೋಮಲ್ ಅವರ ಮುಖಕ್ಕೆ ಹೊಡೆದಿದ್ದು, ಅವರ ಮುಖದಿಂದ ರಕ್ತ ಇಳಿಯುತ್ತಿತ್ತು. ಅಲ್ಲಿದ್ದ ಜನರು ಕೋಮಲ್ ಮತ್ತು ಆ ವ್ಯಕ್ತಿಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೂ ಅವರ ನಡುವೆ ಮತ್ತೊಮ್ಮೆ ಜಗಳ ನಡೆಯಿತು. ಪೊಲೀಸರು ಇಬ್ಬರನ್ನೂ ತಡೆದು ಪರಿಸ್ಥಿತಿ ತಿಳಿಗೊಳಿಸಿದರು.

  ಮಲ್ಲೇಶ್ವರದ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  ಅಂದಹಾಗೆ, ಹಲ್ಲೆ ಮಾಡಿದ ವ್ಯಕ್ತಿ ಬೈಕಿನಲ್ಲಿ ಬಂದಿದ್ದಾನೆ. ಜೊತೆಗೆ ಹುಡುಗಿ ಕೂಡ ಇದ್ದಳು ಎನ್ನುವ ಮಾಹಿತಿ ತಿಳಿದು ಬಂದಿದೆ. ಕಂಠಪೂರ್ತಿ ಕುಡಿದಿದ್ದ ಎಂದು ಹೇಳಲಾಗುತ್ತಿದೆ. ಸದ್ಯ ಹಲ್ಲೆ ಮಾಡಿದ ವ್ಯಕ್ತಿ ಪೊಲೀಸರ ವಶದಲ್ಲಿದ್ದು, ತನಿಖೆ ನಡೆಯುತ್ತಿದೆ.

  English summary
  Kannada actor Komal Kumar reaction after Attacked By unknown persons.
  Wednesday, August 14, 2019, 9:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X