51ನೇ ವರ್ಷಕ್ಕೆ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಕೋಮಲ್; ಶಿವಣ್ಣ, ಉಪ್ಪಿ ಹಾದಿ ಹಿಡಿದ ಮತ್ತೊಬ್ಬ ಕನ್ನಡದ ನಟ
ಕೋಮಲ್ ಹಾಸ್ಯ ನಟನಾಗಿ ಸ್ಯಾಂಡಲ್‌ವುಡ್‌ನಲ್ಲಿ ಫೇಮಸ್ ಆಗಿದ್ದರು. ಒಂದು ಕಾಲದಲ್ಲಿ ಇವರ ಕಾಲ್‌ಶೀಟ್ ಸಿಗುವುದೇ ಅನುಮಾನ ಆಗಿದ್ದೂ ಇದೆ. ಹೀರೋ ಆಗಿ ನಟಿಸಿದ 'ಮಿಸ್ಟರ್. ಗರಗಸ' ಕೋಮಲ್‌ಗೆ ಸಕ್ಸಸ್ ತಂದುಕೊಟ್ಟಿತ್ತು. ಇಲ್ಲಿಂದ ಕೋಮಲ್ ವೃತ್ತಿ ಬದುಕಿನಲ್ಲಿ ಬಡ್ತಿ ಸಿಕ್ಕಿತ್ತು. ಆರಂಭದಲ್ಲಿ ನಾಯಕನಾಗಿ ಯಶಸ್ಸು ಕಂಡಿದ್ದ ನಟ ಕೋಮಲ್ ಸಿನಿಮಾಗಳು ಬರಬರುತ್ತಾ ಸೋಲುವುದಕ್ಕೆ ಶುರುವಾಗಿದ್ದವು.
ಕನ್ನಡದಲ್ಲಿ ಹಾಸ್ಯ ಪಾತ್ರಗಳ ಮೂಲಕವೇ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಮುಂದಾಗಿದ್ದರೂ, ಅವರ ಪ್ರತಿಭೆ ತಕ್ಕಂತ ಸಬ್ಜೆಕ್ಟ್ ಸಿಗಲಿಲ್ಲ. ಹೀಗಾಗಿ ನಾಯಕನಾಗಿ ನಟಿಸಿದ ಹಲವು ಸಿನಿಮಾಗಳು ಸೋಲಿನ ಸುಳಿಗೆ ಸಿಲುಕಿತ್ತು. ಒಂದಿಷ್ಟು ದಿನ ಬ್ರೇಕ್ ಕೊಟ್ಟು ಮತ್ತೆ ಹೀರೋ ಆಗಿ ಎಂಟ್ರಿ ಕೊಟ್ಟಾಗ ಕೆಲ ಸಿನಿಮಾಗಳು ಗೆದ್ದರೂ ದೊಡ್ಡ ಮಟ್ಟಕ್ಕೆ ಯಶಸ್ಸು ಕಾಣಲಿಲ್ಲ.

ಇಂತಹ ಸಮಯದಲ್ಲೇ ಕೋಮಲ್‌ಗೆ ತಮಿಳು ಚಿತ್ರರಂಗದಿಂದ ಆಫರ್‌ಗಳು ಬರುವುದಕ್ಕೆ ಶುರುವಾಗಿದ್ದವು. ಆದರೆ, ಕೋಮಲ್ ಕನ್ನಡದಲ್ಲಿಯೇ ಅದೃಷ್ಟ ಪರೀಕ್ಷೆ ಮುಂದಾಗಿದ್ದರು. ಹಿಂದೊಮ್ಮೆ ಜಗ್ಗೇಶ್ ಅವರೇ ಈ ಮಾತನ್ನು ಹೇಳಿದ್ದರು. ಕೋಮಲ್‌ಗೆ ತಮಿಳಿನಿಂದ ಆಫರ್ ಬರುತ್ತಿದೆ. ಆದರೆ, ಕನ್ನಡದಲ್ಲಿಯೇ ಯಶಸ್ಸು ಹುಡುತ್ತಿದ್ದಾರೆ ಎಂದಿದ್ದರು. ಕೊನೆಗೂ ಕೋಮಲ್ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೇ ಬಿಟ್ಟಿದ್ದಾರೆ. ಶಿವಣ್ಣ, ಉಪ್ಪಿ ಹಾದಿಯಲ್ಲೇ ಕೋಮಲ್ ಕೂಡ ಸಾಗಿದ್ದಾರೆ. ಹಾಗಿದ್ದರೆ ಕೋಮಲ್ ನಟಿಸುತ್ತಿರುವ ತಮಿಳಿನ ಮೊದಲ ಸಿನಿಮಾ ಯಾವುದು? ತಿಳಿಯುವುದಕ್ಕೆ ಮುಂದೆ ಓದಿ.
ಕೋಮಲ್ ಅವರಿಗೆ ಕನ್ನಡದಲ್ಲಿ ಇನ್ನೂ ಒಳ್ಳೊಳ್ಳೆ ಸಿನಿಮಾಗಳು ಸಿಗಬೇಕಿತ್ತು. ಇದು ಈಗ ಹೇಳುತ್ತಿರುವ ಮಾತಲ್ಲ. ಬಹಳ ವರ್ಷಗಳಿಂದ ಸಾಕಷ್ಟು ಮಂದಿ ಈ ಮಾತನ್ನೇ ಹೇಳುತ್ತಲೇ ಬಂದಿದ್ದಾರೆ. ಆದರೆ, ಕನ್ನಡದ ಫಿಲ್ಮ್ ಮೇಕರ್ಸ್ ಕೋಮಲ್ ಅವರ ಪ್ರತಿಭೆಯನ್ನು ಬಳಸಿಕೊಂಡಿಲ್ಲ. ಈಗ ನಿರೀಕ್ಷೆ ಮಾಡಿದಂತೆ ಕೋಮಲ್ ಕಾಲಿವುಡ್ ಕಡೆಗೆ ಮುಖ ಮಾಡಿದ್ದಾರೆ. ಚೊಚ್ಚಲ ಸಿನಿಮಾದಲ್ಲಿಯೇ ರಗಡ್ ಅವತಾರದಲ್ಲಿ ಕಾಣಿಕೊಂಡಿದ್ದಾರೆ.

ಕೋಮಲ್ ನಟಿಸುತ್ತಿರುವ ಮೊದಲ ತಮಿಳು ಸಿನಿಮಾದ ಹೆಸರು 'ರಾಜಪುತಿರನ್'. ತಮಿಳಿಗೆ ಹಾಸ್ಯ ಪಾತ್ರದ ಮೂಲಕವೇನು ಎಂಟ್ರಿ ಕೊಟ್ಟಿಲ್ಲ. ಇಲ್ಲಿ ಅವರದ್ದು ರಗಡ್ ಕ್ಯಾರೆಕ್ಟರ್. ಚಿತ್ರತಂಡ ವೆಲ್‌ಕಮ್ ಮಾಡಿರುವ ಪೋಸ್ಟರ್‌ನಲ್ಲಿ ಕೋಮಲ್ ಬಾಯಲ್ಲಿ ಸಿಗಾರ್ ಇಟ್ಕೊಂಡು, ಕಪ್ಪು ಲುಂಗಿ ಉಟ್ಟು ಮಾಸ್ ಲುಕ್ ಕೊಟ್ಟಿದ್ದಾರೆ. ಕೋಮಲ್ ಲುಕ್ ನೋಡಿ ಅವರ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ.
ಶಿವಾಜಿ ಪ್ರಭು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಕೋಮಲ್ ಕುಮಾರ್‌ಗೆ ಒಳ್ಳೆಯ ಪಾತ್ರವೇ ಸಿಕ್ಕಿದೆ ಎನ್ನಲಾಗಿದೆ. ಫಸ್ಟ್ ಲುಕ್ ಕೂಡ ಅದನ್ನೇ ಹೇಳುತ್ತಿದೆ. ತಮಿಳು ಫಿಲ್ಮ್ ಮೇಕರ್ಸ್ ಕೋಮಲ್‌ರನ್ನು ಹಾಸ್ಯ ಪಾತ್ರದಲ್ಲಿ ತೋರಿಸುವ ಗೋಜಿಗೆ ಹೋಗಲಿಲ್ಲ. ನಿರ್ದೇಶಕ ಮಹಾ ಕಂದನ್ ಇವರಿಗೆ ಮಾಸ್ ಲುಕ್ ಕೊಟ್ಟಿದ್ದಾರೆ. ಇದು ಈಗ ಕರ್ನಾಟಕದಲ್ಲೂ ಟ್ರೆಂಡಿಂಗ್‌ನಲ್ಲಿದೆ. ತಮಿಳು ಸಿನಿಮಾದಲ್ಲಿ ಕೋಮಲ್ ಕ್ಲಿಕ್ ಆಗೋದು ಗ್ಯಾರಂಟಿ ಎನ್ನುವ ಅಭಿಪ್ರಾಯಗಳನ್ನು ವ್ಯಕ್ತವಾಗುತ್ತಿದೆ.
ಈ ಹಿಂದೆ ಶಿವರಾಜ್‌ಕುಮಾರ್ 'ಜೈಲರ್' ಪಾತ್ರದ ಮೂಲಕ ಕಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಶಿವಣ್ಣ ಅತಿಥಿ ಪಾತ್ರಕ್ಕೆ ಎಂಟ್ರಿ ಕೊಟ್ಟಿದ್ದರೂ, ತಮಿಳಿಗರು ಫಿದಾ ಆಗಿದ್ದರು. ಶಿವಣ್ಣನ ಖದರ್ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಆ ವೈಬ್ ಇನ್ನೂ ಹಾಗೇ ಇದೆ. ಇವರ ಹಿಂದೆನೇ ರಿಯಲ್‌ಸ್ಟಾರ್ ಉಪೇಂದ್ರ ಕೂಡ ರಜನಿಕಾಂತ್ ನಟನೆಯ 'ಕೂಲಿ' ಚಿತ್ರದ ಮೂಲವೇ ಕಾಲಿವುಡ್‌ಗೆ ಲಗ್ಗೆ ಇಟ್ಟಿದ್ದಾರೆ. ಈಗ ಅದು ಕೋಮಲ್ ಸರದಿ. ಕೋಮಲ್ ಕೂಡ ಖಡಕ್ ಪಾತ್ರದಲ್ಲಿ ನಟಿಸಿರುವುದು ವಿಶೇಷ.
ಇನ್ನು ಕೋಮಲ್ ನಟಿಸುತ್ತಿರುವ ಮೊದಲ ತಮಿಳು ಸಿನಿಮಾದಲ್ಲಿ ಎಷ್ಟು ಸ್ಕ್ರೀನ್ ಸ್ಪೇಸ್ ಇದೆ ಎನ್ನುವ ಮಾಹಿತಿ ಹೊರಬಿದ್ದಿಲ್ಲ. ಇದೇ ತಿಂಗಳು ಅಂದರ, ಮೇ 30ರಂದು ಈ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದ್ದು, ತಮಿಳಿಗರ ಮನ ಗೆಲ್ಲುತ್ತಾರಾ ನೋಡಬೇಕಿದೆ. ಇನ್ನೊಂದು ಕಡೆ ಕನ್ನಡದಲ್ಲಿಯೂ ಕೋಮಲ್ ಬ್ಯುಸಿಯಾಗಿದ್ದಾರೆ. ಈಗಾಗಲೇ 'ಕೋಣ' ಸಿನಿಮಾದಲ್ಲಿ ನಟಿಸಿದ್ದು, ಬಿಗ್‌ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಈ ತಂಡ ಸಿನಿಮಾ ರಿಲೀಸ್ ಅಗತ್ಯವಿರುವ ತಯಾರಗಳನ್ನು ಮಾಡಿಕೊಳ್ಳುತ್ತಿದೆ. ಎನ್ನಲಾಗಿದೆ.


Click it and Unblock the Notifications











