ಟಾಲಿವುಡ್ ನಲ್ಲಿ ಬೇಡಿಕೆ ನಟನಾದ ಮಧು ಗುರುಸ್ವಾಮಿ

By Pavithra

Recommended Video

ಇದು ಕನ್ನಡ ಖಳ ನಾಯಕರಿಗಿರೋ ಖದರ್ ಅಂದ್ರೆ..!! | Filmibeat Kannada

ಮಧು ಗುರುಸ್ವಾಮಿ.. ಕನ್ನಡ ಸಿನಿಮಾರಂಗದಲ್ಲಿ ಖಳನಟನಾಗಿ ಗುರುತಿಸಿಕೊಂಡಿರುವ ಕಲಾವಿದ. ಮಧು ಗುರುಸ್ವಾಮಿ ಅಂದರೆ ಅಷ್ಟಾಗಿ ಯಾರಿಗೂ ಗೊತ್ತಾಗುವುದಿಲ್ಲ. ಅದೇ 'ವಜ್ರಕಾಯ' ಸಿನಿಮಾದ ಹುಜೂರ್ ಅಂದರೆ ಪ್ರತಿಯೊಬ್ಬರಿಗೂ ಅರ್ಥವಾಗುತ್ತೆ. ಚಂದನವನದಲ್ಲಿ 'ವಜ್ರಕಾಯ', 'ಭಜರಂಗಿ', 'ಮಾರುತಿ 800', 'ಮಫ್ತಿ' ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಕಲಾವಿದ ಮಧು ಗುರುಸ್ವಾಮಿ

ಮಧು ತೆರೆ ಮೇಲೆ ಬಂದ ತಕ್ಷಣ ಶಿಳ್ಳೆ ಮತ್ತು ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಾರೆ. ಆದರೆ ಅದೇ ಅಭಿಮಾನಿಗಳ ಎದುರಿಗೆ ಮಧು ಬಂದರೆ ಗುರುತೇ ಹಿಡಿಯುವುದಿಲ್ಲವಂತೆ. ಕಾರಣ ಮಧು ನಿರ್ವಹಿಸಿರುವ ಪಾತ್ರ ಅಂಥದ್ದು, ಪ್ರತಿ ಸಿನಿಮಾದಲ್ಲಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡ ಮಧು ಈಗ ಟಾಲಿವುಡ್ ನಲ್ಲಿ ಬೇಡಿಕೆಯ ನಟನಾಗಿದ್ದಾರೆ.

Kannada actor Madhu Guruswamy is acting in Telugu cinema

ಮಧು ಗುರುಸ್ವಾಮಿ 'ಸಾಕ್ಷ್ಯಂ' ಎಂಬ ಚಿತ್ರದಲ್ಲಿ ಅಭಿನಯ ಮಾಡಿದ್ದು ಚಿತ್ರ ಇಂದು(ಜುಲೈ27) ಬಿಡುಗಡೆ ಆಗುತ್ತಿದೆ. ಚಿತ್ರರಂಗಕ್ಕೆ ಬಂದು 9 ವರ್ಷವಾದರೂ ಮಧು ಅಭಿನಯಿಸಿರುವುದು ಕೆಲವೇ ಚಿತ್ರಗಳಲ್ಲಿ, ಯಾಕೆಂದರೆ ಮಧು ಸಿನಿಮಾದ ಪೂರ್ತಿ ಕಥೆ ಕೇಳದೆ ಯಾವುದೇ ಚಿತ್ರದಲ್ಲಿಯೂ ಅಭಿನಯ ಮಾಡುವುದಿಲ್ಲವಂತೆ.

Kannada actor Madhu Guruswamy is acting in Telugu cinema

ತೆಲುಗಿನಲ್ಲಿಯೂ ಇದೇ ಕಾರಣದಿಂದಾಗಿ ಎರಡು ಚಿತ್ರವನ್ನು ರಿಜೆಕ್ಟ್ ಮಾಡಿದ್ದಾರೆ. ಸದ್ಯ ಬಿಡುಗಡೆ ಆಗುತ್ತಿರುವ 'ಸಾಕ್ಷ್ಯಂ' ಸಿನಿಮಾದಲ್ಲಿಯೂ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದು ವಿಶೇಷ ಎಂದರೆ ಜಗಪತಿ ಬಾಬು ಜೊತೆಯಲ್ಲಿ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಒಟ್ಟಾರೆ ಉತ್ತಮ ಅಭಿನಯದಿಂದ ಬೇರೆ ಚಿತ್ರರಂಗದಲ್ಲಿಯೂ ಅವಕಾಶ ಗಿಟ್ಟಿಸಿಕೊಳ್ಳಬಹುದು ಎನ್ನುವುದಕ್ಕೆ ಇದೇ ಉತ್ತಮ ಉದಾಹರಣೆ.

More from Filmibeat

English summary
Kannada cinema actor Madhu Guruswamy is acting in Telugu cinema. Madhu Guruswamy has acted in Kannada, Bajrangi, Vajrakaya and Mafti movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X