'ಟಕ್ಕರ್' ಸಿನಿಮಾಗೆ ಸಿಕ್ತು ಚಾಲನೆ
Recommended Video

ಚಾಲೆಂಜಿಂಗ್ ಸ್ಟಾರ್ ಸಹೋದರ ಸಂಬಂಧಿ ಮನೋಜ್ ಕುಮಾರ್ ಅಭಿನಯದ ಟಕ್ಕರ್ ಸಿನಿಮಾ ಇಂದು ಸೆಟ್ಟೇರಿದೆ. ರನ್ ಆಂಟೋನಿ ಸಿನಿಮಾ ಖ್ಯಾತಿಯ ನಿರ್ದೇಶಕ ರಘುಶಾಸ್ತ್ರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಮನೋಜ್ ಜೊತೆಯಾಗಿ ಪುಟ್ಟಗೌರಿ ಮದುವೆ ಧಾರಾವಾಹಿಯ ನಟಿ ರಂಜಿನಿ ಅಭಿನಯಿಸುತ್ತಿದ್ದಾರೆ.
ಬೆಂಗಳೂರಿನ ಹನುಮಂತ ನಗರದಲ್ಲಿರುವ ರಾಮಾಂಜನೇಯ ಗುಡ್ಡದಲ್ಲಿ ಟಕ್ಕರ್ ಸಿನಿಮಾದ ಪೂಜೆ ಸರಳವಾಗಿ ನಡೆದಿದ್ದು ಚಕ್ರವರ್ತಿ ಸಿನಿಮಾದ ನಿರ್ದೇಶಕ ಚಿಂತನ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

ಈಗಾಗಲೇ ಫೋಟೋ ಶೂಟ್ ಮುಗಿಸಿರುವ ನಿರ್ದೇಶಕರು ಫೋಸ್ಟ್ ಪ್ರೊಡಕ್ಷನ್ ಗಾಗಿ ಸಾಕಷ್ಟು ಸಮಯ ತೆಗೆದುಕೊಂಡು ಉತ್ತಮ ಕಥೆಯನ್ನ ಮಾಡಿಕೊಂಡಿದ್ದಾರೆ. 'ಹುಲಿರಾಯ' ಸಿನಿಮಾಗೆ ಬಂಡವಾಳ ಹಾಕಿದ್ದ ನಾಗೇಶ್ ಕೋಗಿಲು ಅವರೇ ಟಕ್ಕರ್ ಚಿತ್ರಕ್ಕೂ ಬಂಡವಾಳ ಹಾಕಿದ್ದಾರೆ. ಮಣಿಕಾಂತ್ ಕದ್ರಿ ಅವರ ಸಂಗೀತ ಕೆ ಎಂ ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿರಲಿದೆ.
ಸದ್ಯ ಸಿನಿಮಾ ಪೂಜೆ ಮುಗಿಸಿರುವ ಟಕ್ಕರ್ ಟೀಂ ಚಿತ್ರೀಕರಣ ಶುರು ಮಾಡಲಿದೆ ಕರ್ನಾಟಕದಲ್ಲೇ ಶೂಟಿಂಗ್ ಪ್ಲಾನ್ ಮಾಡಲಿರುವ ತಂಡಕ್ಕೆ ಮತ್ತಷ್ಟು ಕಲಾವಿದರು ಸೇರಿಕೊಳ್ಳಲಿದ್ದಾರೆ.


Click it and Unblock the Notifications











